More

    2019ರಲ್ಲಿ ಈ ಬಾಲಕ ಹೇಳಿದ್ದ ಭವಿಷ್ಯ ನಿಜವಾಯಿತೇ? ಅಭಿಗ್ಯನ ಊಹೆಯೇ ಸತ್ಯವಾಗುವುದಾದರೆ ಕರೊನಾದಿಂದ ಮುಕ್ತಿ ಪಡೆಯಲು ಮೇ 29ರವರೆಗೆ ಕಾಯಲೇಬೇಕು… !

    ‘ಅಭಿಗ್ಯ ಆನಂದ್’ ಈ ಹೆಸರನ್ನು ಬಹುತೇಕರು ಕೇಳಿರುತ್ತಾರೆ. ಅತ್ಯಂತ ಕಿರಿಯವಯಸ್ಸಿನಲ್ಲಿ ಅದೆಷ್ಟೋ ಸಾಧನೆಗಳನ್ನು ಮಾಡಿದಾತ.

    10ನೇ ವಯಸ್ಸಿಗೆ ಆಯುರ್ವೇದ ಮೈಕ್ರೋ ಬಯಾಲಜಿಯಲ್ಲಿ ಪೋಸ್ಟ್​ ಗ್ರಾಜ್ಯುವೇಶನ್​ ಮುಗಿಸಿದ್ದ. ಸ್ಪಷ್ಟವಾಗಿ ಸಂಸ್ಕೃತ ಮಾತನಾಡಬಲ್ಲ. 2015ರಲ್ಲಿ ರಾಜ್ಯಪ್ರಶಸ್ತಿ ಪುರಸ್ಕೃತನಾದ ಅಭಿಗ್ಯನಿಗೆ ವಾಸ್ತುಶಾಸ್ತ್ರವೂ ಗೊತ್ತು..ಜ್ಯೋತಿಶಾಸ್ತ್ರವೂ ಗೊತ್ತು, ಭೂಮಂಡಲದ ಆಗುಹೋಗುಗಳೂ ಗೊತ್ತು..

    ಬರೀ ಕರೊನಾ ವೈರಸ್​ದೇ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ 14 ವರ್ಷದ ಬಾಲಕ ಅಭಿಗ್ಯ ಆನಂದ್​ನ ಹೆಸರು ಮತ್ತೆ ಮುನ್ನೆಲೆಗೆ ಬರಲು ಕಾರಣ ಆತ ಹೇಳಿದ್ದ ಜ್ಯೋತಿಷ್ಯ..!

    2019ರ ಆಗಸ್ಟ್​ನಲ್ಲಿ ಅಭಿಗ್ಯ ಆನಂದ್​ ತನ್ನ ಯೂಟ್ಯೂಬ್​ ಚಾನಲ್​ನಲ್ಲಿ ಹೀಗೊಂದು ವಿಚಾರ ಪ್ರಸ್ತಾಪಿಸಿದ್ದ. 2019ರ ನವೆಂಬರ್​ನಲ್ಲಿ ಇಡೀ ಜಗತ್ತು ಒಂದು ಅಪಾಯಕಾರಿ ಹಂತಕ್ಕೆ ಕಾಲಿಡುತ್ತದೆ. 2019ರ ನವೆಂಬರ್​ನಿಂದ 2020ರ ಏಪ್ರಿಲ್​ನರೆಗೂ ವಿಶ್ವದ ಪರಿಸ್ಥಿತಿ ಕಠಿಣವಾಗಿರುತ್ತದೆ ಎಂದು ಹೇಳಿದ್ದ.

    ಈಗ ಕರೊನಾ ವೈರಸ್​ನಿಂದ ಆಗುತ್ತಿರುವ ಅವ್ಯವಸ್ಥೆಯನ್ನು ನೋಡಿದಾಗ ಬಾಲ ಜ್ಯೋತಿಷಿ ಅಭಿಗ್ಯನ ಮಾತು ಸತ್ಯವಾಯಿತಾ ಎಂದು ಅನ್ನಿಸದೆ ಇರದು.

    2019ರ ನವೆಂಬರ್​ನಿಂದ 2020ರ ಏಪ್ರಿಲ್​ವರೆಗೆ ಜಾಗತಿಕವಾಗಿ ಕಾಯಿಲೆ ಪಸರಿಸುತ್ತದೆ. ಇದರಿಂದ ಪ್ರಪಂಚಾದದ್ಯಂತ ಉದ್ವಿಗ್ನತೆ ಸೃಷ್ಟಿಯಾಗುತ್ತದೆ. ಅದರಲ್ಲೂ ಮಾ.31 ಮತ್ತು ಏಪ್ರಿಲ್​1ರಂದು ವಿಷಮ ಪರಿಸ್ಥಿತಿ ಪರಾಕಾಷ್ಠೆಗೆ ತಲುಪುತ್ತದೆ. ಈ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಪ್ರಮಾಣವೂ ಹೆಚ್ಚಾಗಿರಬೇಕು ಎಂದು ಹೇಳಿದ್ದ.

    ಅದರೊಂದಿಗೆ ಈ ಕಠಿಣ ಪರಿಸ್ಥಿತಿ ಯಾವಾಗ ತಿಳಿಗೊಳ್ಳುತ್ತದೆ ಎಂಬುದನ್ನೂ ಅಂದು ಅಭಿಗ್ಯ ಆನಂದ್​ ಹೇಳಿದ್ದ.
    2020ರ ಮೇ 29ರವರೆಗೂ ಇದೇ ಸ್ಥಿತಿಯಿರುತ್ತದೆ. ಮೇ 29ರಂದು ಭೂಮಿ ಈ ಕಠಿಣ ಅವಧಿಯಿಂದ ಪರಿಭ್ರಮಿಸುತ್ತದೆ. ಆಗ ಕಾಯಿಲೆ ಭೀಕರತೆ ಇಳಿಮುಖವಾಗುತ್ತ ಹೋಗುತ್ತದೆ ಮತ್ತು ಅದರ ನಿರ್ವಹಣೆಯೂ ಸುಲಭವಾಗುತ್ತದೆ ಎಂದು ವಿವರಣೆ ನೀಡಿದ್ದ.

    ಯಾಕೆ ಮಾ. 31 ಯಾಕೆ ತೀವ್ರ ಕಠಿಣ ಹಂತ ಎಂದು ಬಾಲಕ ಅಭಿಗ್ಯ ಆನಂದ್​ ಅಂದು ಹೇಳಿದ್ದ.. ಅದರ ಸಾರಾಂಶ ಹೀಗಿತ್ತು…
    ಜ್ಯೋತಿಷ್ಯವನ್ನು ಆಧಾರವಾಗಿಟ್ಟುಕೊಂಡರೆ ಮಾ.31ರಂದು ಮಂಗಳ ಗ್ರಹ ಶನಿ ಮತ್ತು ಗುರು ಗ್ರಹಗಳೊಂದಿಗೆ ಸಂಯೋಗಗೊಳ್ಳುತ್ತದೆ. ಚಂದ್ರನ ಉತ್ತರ ಸಂಪಾತ ಎಂದೇ ಕರೆಯುವ ರಾಹು ಕೂಡ ಮಾ.31ರಂದು ಚಂದ್ರನೊಂದಿಗೆ ಸಂಯೋಜನೆಗೊಳ್ಳುತ್ತದೆ.

    ಸೌರ ವ್ಯವಸ್ಥೆಯಲ್ಲಿ ಮಂಗಳ, ಶನಿ, ಗುರು ಅತ್ಯಂತ ಪ್ರಭಾವಶಾಲಿ ಗ್ರಹಗಳು ಎಂದು ಪರಿಗಣಿಸಲ್ಪಟ್ಟಿವೆ. ಹಾಗಾಗಿ ಇವು ಮೂರು ಸಂಯೋಜನೆಗೊಳ್ಳುವುದು ಕೂಡ ಅಪರೂಪದ ಕ್ಷಣವೇ ಆಗಿದೆ. ಸೌರ ಮಂಡಲದ ಹೊರವರ್ತುಲದಲ್ಲಿರುವ ಈ ಬಲಶಾಲಿ ಗ್ರಹಗಳ ಸಂಯೋಗದಿಂದ ಭೂಮಿಯ ಶಕ್ತಿಯೂ ಅಧಿಕಗೊಳ್ಳಲಿದೆ.

    ಇನ್ನು ಮಾ.31ರಂದು ಚಂದ್ರ ಮತ್ತು ರಾಹುವಿನ ಸಂಯೋಜನೆಯಾಗುವುದರಿಂದ ಅಂದು ವಾತಾವರಣ ತೇವ ಆಗಲಿದೆ. ಹೀಗಾಗಿ ಜನರಲ್ಲಿ ಕೆಮ್ಮು, ಸೀನುಗಳೆಲ್ಲ ಹೆಚ್ಚಾಗಿ, ಕಾಯಿಲೆ ಉಲ್ಬಣಗೊಳ್ಳಲಿದೆ. ಹಾಗಾಗಿ ಅಂದು ಯಾರೂ ಪರಸ್ಪರ ಹತ್ತಿರ ಬರಬಾರದು. ಅಂತರ ಕಾಯ್ದುಕೊಳ್ಳಬೇಕು. ಏ.1ರಂದು ಸಹ ಇದೇ ಪರಿಸ್ಥಿತಿ ಇರುತ್ತದೆ. ಹಾಗಾಗಿ ಅದೆರಡೂ ದಿನಗಳೂ ವಿಷಮ ಸ್ಥಿತಿ ಪರಾಕಾಷ್ಠೆಯಲ್ಲಿ ಇರುತ್ತದೆ ಎಂಬುದು ಅಂದು ಅಭಿಗ್ಯ ವಿವರಿಸಿದ್ದ.

    ಅಭಿಗ್ಯ ಆನಂದ್​ನ ಭವಿಷ್ಯದಂತೆ ಸದ್ಯ ಕರೊನಾ ವೈರಸ್​ ಎಂಬ ಮಹಾಮಾರಿ ವಿಶ್ವಕ್ಕೇ ಅಂಟಿಕೊಂಡಿದೆ. ಮತ್ತೊಂದು ಯುದ್ಧವಾಗಿ ಪರಿಣಮಿಸಿದೆ. ಆದರೆ ಮನುಕುಲ ಮತ್ತು ವೈರಸ್​ ನಡುವೆ ನಡೆಯುತ್ತಿರುವ ವಿಶ್ವಯುದ್ಧವಾಗಿದೆ. ಹಾಗೇ ಇದು ಮೊದಲು ಚೀನಾದಲ್ಲಿ ಪತ್ತೆಯಾಗಿದ್ದು ನವೆಂಬರ್​​ನಲ್ಲೇ..!

    ಹಾಗೇ ಮೇ 29ರಂದು ಗ್ರಹಗಳ ಸಂಯೋಜನೆಯ ಅಕ್ಷ ಬದಲಾಗುತ್ತದೆ. ಅವುಗಳ ಸ್ಥಾನ ಪಲ್ಲಟದೊಂದಿಗೆ ಕಾಯಿಲೆಯ ಪ್ರಮಾಣವೂ ಕಡಿಮೆಯಾಗುತ್ತದೆ. ಮೇ 29ರಿಂದ ರೋಗ ಕಡಿಮೆಯಾದ ಬಗ್ಗೆ ವರದಿಗಳು ಬರುತ್ತವೆ. ಹಾಗೇ ಆರ್ಥಿಕತೆಯ ನಿಧಾನಗತಿಯೂ ಕೂಡ ನವೆಂಬರ್​ 2021ರಲ್ಲಿ ಸರಿಯಾಗುತ್ತದೆ ಎಂದು ಅಭಿಗ್ಯ ಊಹಿಸಿದ್ದಾನೆ. (ಏಜೆನ್ಸೀಸ್​)

    2019ರಲ್ಲಿ ಈ ಬಾಲಕ ಹೇಳಿದ್ದ ಭವಿಷ್ಯ ನಿಜವಾಯಿತೇ? ಅಭಿಗ್ಯನ ಊಹೆಯೇ ಸತ್ಯವಾಗುವುದಾದರೆ ಕರೊನಾದಿಂದ ಮುಕ್ತಿ ಪಡೆಯಲು ಮೇ 29ರವರೆಗೆ ಕಾಯಲೇಬೇಕು... !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts