More

    ಸೋಂಕು ಕಡಿಮೆ ಆಗ್ತಿದೆ, ಈಗ ಮೈಮರೆಯಬೇಡಿ : ಗೃಹ ಸಚಿವ ಬೊಮ್ಮಾಯಿ

    ಬೆಂಗಳೂರು : ಜನರು ಲಾಕ್ಡೌನ್ ನಿಯಮ ಮೀರುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಗೃಹಮಂತ್ರಿ ಬಸವರಾಜ್ ಬೊಮ್ಮಾಯಿ, ಕರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ, ಜನ ಈಗ ಮೈಮರೆಯಬಾರದು. ಜನರು ಸಹಕಾರ ಕೊಟ್ಟರೆ ಮತ್ತಷ್ಟು ಕರೊನಾ ನಿಯಂತ್ರಣ ಮಾಡಲು ಸಾಧ್ಯ ಎಂದಿದ್ದಾರೆ.

    ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, “ಪಾಸಿಟಿವಿಟಿ ರೇಟ್ ಕಡಿಮೆ ಆಗ್ತಿದೆ. ಇದು ಇನ್ನೂ ಕಡಿಮೆ ಆಗಬೇಕು. ಜನರು ಕರೊನಾ ಕೇಸ್ ಕಡಿಮೆ ಆಗಿದೆ ಅಂತ ನಿಯಮ ಪಾಲಿಸದೇ ಇರಬಾರದು. ಇನ್ನೊಂದು ವಾರ ಜನ ಸಹಕಾರ ಕೊಟ್ರೂ ಕರೊ‌ನಾ ನಿಯಂತ್ರಣ ಮತ್ತಷ್ಟು ಮಾಡಲು ಸಾಧ್ಯ. ಹೀಗಾಗಿ ಜನ ಸರ್ಕಾರಕ್ಕೆ ಸಹಕಾರ ನೀಡಬೇಕು” ಎಂದರು.

    ಇದನ್ನೂ ಓದಿ: ಬೀದಿನಾಯಿಯ ಮೇಲೆ ಕ್ರೌರ್ಯ ಮೆರೆದವನ ಬಂಧನ

    ಜನರು ನಿಯಮ ಮೀರಿದ್ರೆ ಪೊಲೀಸರಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಪೊಲೀಸರು ಆ ಕೆಲಸ ಮಾಡ್ತಾರೆ ಎಂದ ಗೃಹಸಚಿವರು, ಜೂನ್ 7 ರವರೆಗೆ ಇರೋ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗ ಇರುವ ನಿರ್ಬಂಧಗಳು ಮುಂದುವರೆಯುತ್ತವೆ ಎಂದರು.

    ಲಾಕ್​ಡೌನ್ ವಿಸ್ತರಣೆ : ಜೂನ್ 7 ರ ಬಳಿಕ ಲಾಕ್​ಡೌನ್ ವಿಸ್ತರಣೆ ಮಾಡುವ ಬಗ್ಗೆ ಸಿಎಂ ಯಡಿಯೂರಪ್ಪ ಅಂತಿಮ ನಿರ್ಧಾರ ಮಾಡ್ತಾರೆ ಎಂದ ಬೊಮ್ಮಾಯಿ, “3-4 ದಿನಗಳಲ್ಲಿ ತಜ್ಞರು, ಕೋವಿಡ್ ನಿರ್ವಹಣೆಯ ಟೀಂಗಳ ಜೊತೆ ಸಿಎಂ ಸಭೆ ಮಾಡಿ ನಿರ್ಧರಿಸುತ್ತಾರೆ. ಕೇಂದ್ರ ಗೃಹ ಇಲಾಖೆ ಜೂನ್ 30 ರವರೆಗೆ ಲಾಕ್ಡೌನ್ ವಿಸ್ತರಿಸಿ ಅಂತ ಸಲಹೆ ಕೊಟ್ಟಿದೆ. ವಿಸ್ತರಣೆ ಮಾಡೋದು ಬಿಡೋದು ಜನರ ಮೇಲೆ ನಿಂತಿದೆ. ಕೇಂದ್ರದ ಮಾರ್ಗಸೂಚಿ ಮತ್ತು ರಾಜ್ಯದ ಸ್ಥಿತಿಗತಿ ನೋಡಿಕೊಂಡು ಲಾಕ್ಡೌನ್ ವಿಸ್ತರಣೆ ಬಗ್ಗೆ ಸಿಎಂ ತೀರ್ಮಾನ ಮಾಡ್ತಾರೆ” ಎಂದಿದ್ದಾರೆ.

    ಲಾಕ್​ಡೌನ್ ವಿಸ್ತರಣೆ : ಸಿಎಂ ಯಡಿಯೂರಪ್ಪ ಹೇಳಿದ್ದೇನು ?

    ಚೀನಾ ಕಂಪೆನಿಯಿಂದ ಮೀನು ಆಮದು ನಿಲ್ಲಿಸಿದ ಅಮೆರಿಕ

    ಕೋವಿಡ್ ನಿಯಂತ್ರಣಕ್ಕೆ ಹೊಸ ಅಸ್ತ್ರ : ಲಘುವಿಮಾನದಲ್ಲಿ ಔಷಧ ಸಿಂಪಡಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts