More

    ಕರೊನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ! ಚುನಾವಣೆ ಬಳಿಕ ರ‍್ಯಾಂಡಮ್​ ಟೆಸ್ಟ್

    ಬೆಂಗಳೂರು: ಆರ್ ಆರ್ ನಗರ ಮತ್ತು ಶಿರಾ ಕ್ಷೇತ್ರದ ಉಪಸಮರಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕರೊನಾ ಆತಂಕದ ನಡುವೆಯೂ ಮಂಗಳವಾರ(ನ.3) ಮತದಾನ ನಡೆಯಲಿದೆ.

    ಕರೊನಾ ನಿಯಮ ಪಾಲಿಸಿ ಚುನಾವಣೆ ನಡೆಸಲು ನಿರ್ಧರಿಸಿರುವ ಆಯೋಗ, ಕೋವಿಡ್​ ಸೋಂಕಿತರಿಗೂ ಮತದಾನಕ್ಕೆ ಅವಕಾಶ ನೀಡಿದೆ. ಅದಕ್ಕಾಗಿ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ‌. ಸೋಂಕಿತರನ್ನು ಸರ್ಕಾರಿ ಆಂಬುಲೆನ್ಸ್​ನಲ್ಲಿ ಕರೆದುಕೊಂಡು ಬಂದು ಮತ ಹಾಕಿಸಿ ನಾವೇ ವಾಪಸ್ ಕರೆದುಕೊಂಡು ಹೋಗಿ ಬಿಡ್ತೀವಿ ಎಂದು ವಿವರಿಸಿದ್ದಾರೆ. ಮತದಾರರಿಗೆ ಥರ್ಮಲ್ ಸ್ಕ್ರೀನಿಂಗ್​, ಟೆಂಪರೇಚರ್ ಚೆಕಪ್ ಮಾಡಿ ಮತಕೇಂದ್ರಕ್ಕೆ ಬಿಡುತ್ತೇವೆ. ಚುನಾವಣೆ ಮುಗಿದ ಬಳಿಕ ಈ ಕ್ಷೇತ್ರದಲ್ಲಿ ರ‍್ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ ಎಂದರು.

    ಆರ್​ಆರ್​ ನಗರ ಕ್ಷೇತ್ರದ 9 ವಾರ್ಡ್​ನಲ್ಲಿ ಒಟ್ಟು 678 ಮತಗಟ್ಟೆಗಳ ಪೈಕಿ 82 ಸೂಕ್ಷ್ಮ ಮತ್ತು 11 ಅತಿಸೂಕ್ಷ್ಮ ಮತಗಟ್ಟೆಗಳಿವೆ. 3,200 ಅಧಿಕಾರಿಗಳನ್ನು ಚುನಾವಣಾ ಕೆಲಸಕ್ಕೆ, 1600 ಪೊಲೀಸ್ ಸಿಬ್ಬಂದಿಯನ್ನು ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜಿಸಲಾಗಿದೆ. 150 ಬಿಎಂಟಿಸಿ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿಯಾಗಿ ಶೇ.20 ಚುನಾವಣಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಯಾರಿಗಾದರೂ ಆರೋಗ್ಯ ಹದಗೆಟ್ಟರೆ ತಕ್ಷಣ ಆ ಸಿಬ್ಬಂದಿಯನ್ನು ಬದಲಾಯಿಸುತ್ತೇವೆ. ಕರೊನಾ ಲಕ್ಷಣ ಇದ್ದವರನ್ನು ಕೆಲಸಕ್ಕೆ ಬರುವಂತೆ ಒತ್ತಾಯಿಸಿಲ್ಲ ಎಂದು ಮಂಜುನಾಥ್ ಪ್ರಸಾದ್ ವಿವರಿಸಿದರು.

    ಮತ ಚಲಾಯಿಸುವ ವ್ಯಕ್ತಿಯ ಬಲಗೈಗೆ ಹ್ಯಾಂಡ್ ಗ್ಲೌಸ್ ನೀಡುತ್ತೇವೆ. ಬಳಿಕ ಎಡಗೈನ ಮಧ್ಯ ಬೆರಳಿಗೆ ಶಾಯಿ ಹಾಕುತ್ತೇವೆ. ಆರ್ ಆರ್ ನಗರದಲ್ಲಿ ಮೊದಲಿಂದಲೂ ಒಂದಷ್ಟು ಗದ್ದಲ-ಗಲಭೆ ಆಗುತ್ತಲೇ ಇದೆ. ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)

    VIDEO| ಸಮಾವೇಶದಲ್ಲೇ ಕುಸಿದುಬಿದ್ದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ!

    ಗೌಡರ ಸಮ್ಮುಖದಲ್ಲೇ ಜೆಡಿಎಸ್ ಮುಖಂಡರ ಅಸಮಾಧಾನ ಸ್ಫೋಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts