More

    ನಿಮಗಾಗಿ ನನ್ನ ತಂದೆ ನಮ್ಮಿಂದ ದೂರವಿದ್ದಾರೆ, ನೀವೂ ಸಹಾಯ ಮಾಡುವಿರಾ?: ಬಾಲಕಿಯ ಸಂದೇಶಕ್ಕೆ ಮನಸೋತ ಕೇಂದ್ರ ಸಚಿವ!

    ಇಟಾನಗರ: ಕರೊನಾ ಮಹಾಮಾರಿಯಿಂದ ಬಚಾವ್​ ಆಗಲು ಇಡೀ ದೇಶದ ಜನತೆ ಸಾಮಾಜಿಕ ಅಂತರವನ್ನು ಪಾಲಿಸುತ್ತಿದ್ದಾರೆ. ಕೋವಿಡ್​-19 ಯಾವುದೇ ಕಾರಣಕ್ಕೂ ಮತ್ತಷ್ಟು ಮಂದಿಗೆ ಹರಡಬಾರದು ಎಂಬ ಕಾರಣಕ್ಕೆ ರಾಷ್ಟ್ರವ್ಯಾಪಿ ಲಾಕ್​ಡೌನ್​ ಹೇರಲಾಗಿದ್ದು, ನಮ್ಮ ಪೊಲೀಸ್​ ಸಿಬ್ಬಂದಿ ಕೂಡ ಜನರನ್ನು ಆದಷ್ಟು ಮನೆಯಲ್ಲೇ ಉಳಿದುಕೊಳ್ಳುವಂತೆ ನಿಗಾವಹಿಸುತ್ತಿದ್ದಾರೆ.

    ಲಾಕ್​ಡೌನ್​ ಸಮಯದಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕಣ್ಗಾವಲಾಗಿ ಅಖಾಡಕ್ಕೆ ಇಳಿದಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕುಟುಂಬದಿಂದ ದೂರ ಉಳಿದು ಪ್ರಾಣವನ್ನು ಪಣಕ್ಕಿಟ್ಟು ಯಾವುದೇ ರಾಜಿ ಸಂಧಾನ ಮಾಡಿಕೊಳ್ಳದೇ ಜನತೆಯ ಸುರಕ್ಷತೆಗೆ ಹಗಲಿರುಳು ದುಡಿಯುತ್ತಿದ್ದಾರೆ.

    ಪೊಲೀಸರ ತ್ಯಾಗವನ್ನು ಗಮನಿಸಿದ 9 ವರ್ಷದ ಬಾಲಕಿಯೊಬ್ಬಳು ಮನೆಯಲ್ಲೇ ಉಳಿಯುವಂತೆ ದೇಶದ ಜನತೆಯ ಬಳಿ ಮನವಿ ಮಾಡಿಕೊಂಡಿದ್ದಾಳೆ. “ನನ್ನ ತಂದೆ ಓರ್ವ ಪೊಲೀಸ್​ಮ್ಯಾನ್​ ನಿಮಗೆ ಸಹಾಯ ಮಾಡಲು ನಮ್ಮಿಂದ ದೂರವಿದ್ದಾರೆ. ನೀವು ಮನೆಯಲ್ಲೇ ಉಳಿಯುವ ಮೂಲಕ ಅವರಿಗೆ ಸಹಾಯ ಮಾಡುವಿರಾ?”, ಎಂಬ ಸಂದೇಶವಿರುವ ಭಿತ್ತಿಫಲಕವನ್ನು ಹಿಡಿದು ನಿಂತಿರುವ ಬಾಲಕಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಪೊಲೀಸ್​ ಬಲವನ್ನು ಮೆಚ್ಚಿದ ಸಚಿವ ಕಿರಣ್​ ರಿಜಿಜು
    ಭಿತ್ತಿಫಲಕ ಹಿಡಿದಿರುವ ಬಾಲಕಿಯ ಫೋಟೋವನ್ನು ಅರುಣಾಚಲ ಪ್ರದೇಶದ ಸಂಸದ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದೊಂದು ಭಾವನಾತ್ಮಕ ಮತ್ತು ಶಕ್ತಿಶಾಲಿ ಸಂದೇಶವಾಗಿದೆ. ಎಲ್ಲರ ಸುರಕ್ಷತೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಪೊಲೀಸ್​ ಸಿಬ್ಬಂದಿ ಕಾರ್ಯವನ್ನು ಎಲ್ಲರು ಮೆಚ್ಚಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ಹುಟ್ಟಿದ ಮೂರೇ ದಿನಕ್ಕೆ ಕರೊನಾ ವೈರಸ್​ಗೆ ಒಳಗಾದ ಶಿಶು; ಅದರ ಅಮ್ಮನಿಗಿಲ್ಲ ಸೋಂಕು, ವೈದ್ಯರನ್ನು ಪ್ರಶ್ನಿಸಿದ್ದಕ್ಕೆ ಸಿಕ್ಕಿದ್ದು ಅಸ್ಪಷ್ಟ ಉತ್ತರ…

    339 ಅರಣ್ಯ ರಕ್ಷಕ ಹುದ್ದೆಗಳಿಗೆ ಮೇ 15ರವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts