More

  ದೇಶದೊಳಗಿನ ಉಗ್ರರು ಇವರು..ಅಪ್ಪ-ಅಮ್ಮನ ಎದುರೇ ಪೊಲೀಸ್​ ಪೇದೆಯನ್ನು ಬರ್ಬರವಾಗಿ ಕೊಂದರು…

  ಛತ್ತೀಸ್​ಗಢ: ಇಲ್ಲಿನ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರ ಅಟ್ಟಹಾಸ ಮಿತಿಮೀರಿದೆ. ಪೊಲೀಸ್​ ಸಿಬ್ಬಂದಿಯೋರ್ವರನ್ನು ಅವರ ಕುಟುಂಬದವರ ಎದುರೇ ಮಾವೋವಾದಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

  ಮಾಟ್​ವಾಡಾ ಹಳ್ಳಿಯಲ್ಲಿ ಘಟನೆ ನಡೆದಿದೆ. ಫಾರ್ಸ್​ಗಡ್​ ಠಾಣೆಯಲ್ಲಿ ಸಹಾಯಕ ಪೊಲಿಸ್ ಪೇದೆಯಾಗಿರುವ ಸೋಮಾರು ಪೋಯಮ್​ ಎಂಬುವರು ವೈದ್ಯಕೀಯಕ್ಕೆ ಸಂಬಂಧಪಟ್ಟ ಕಾರಣದಿಂದ ಜೂ.10ರಿಂದಲೂ ರಜೆ ಹಾಕಿ ಮನೆಯಲ್ಲಿಯೇ ಇದ್ದರು.
  ಬುಧವಾರ ತಡರಾತ್ರಿ ಸುಮಾರು 12 ನಕ್ಸಲರು ಈ ಪೇದೆಯ ಮನೆಗೆ ಆಗಮಿಸಿ, ಅವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಮನೆಯ ಉಳಿದ ಸದಸ್ಯರ ಎದುರೇ, ಕೊಡಲಿ, ಬಿಲ್ಲು-ಬಾಣಗಳಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಕೊಳೆತ ಹೆಣ ತೆಗೆಯಲು ಮಕ್ಕಳ ಬಳಕೆ- ಕ್ಯಾಮೆರಾದಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ!

  ಮಗನ ಮೇಲೆ ಹಲ್ಲೆಯಾಗುತ್ತಿದ್ದನ್ನು ತಡೆಯಲು ಬಂದ ಪೇದೆಯ ತಂದೆ-ತಾಯಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಅವರಿಬ್ಬರೂ ಸಹ ತುಂಬ ಗಾಯಗೊಂಡಿದ್ದಾರೆ.

  ನಕ್ಸಲರ ದಾಳಿಗೆ ಒಳಗಾದ ಪೊಲಿಸ್​ ಪೇದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದಾರೆ. ಮೃತ ಪೊಲೀಸ್ ಪೇದೆಯ ತಂದೆ-ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಕ್ಸಲರ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

  ಹೊಸ ರೂಪದಲ್ಲಿ ಬರಲಿದೆ ಅಣ್ಣಾವ್ರ ಸೂಪರ್​ ಹಿಟ್​ ಸಿನಿಮಾ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts