More

    ರಾತ್ರಿ ಹೊತ್ತು ನಟಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡ ಪೊಲೀಸ್​ ಅಧಿಕಾರಿಗೆ ಎದುರಾಯ್ತು ಸಂಕಷ್ಟ!

    ಕೊಚ್ಚಿ: ನಟಿಯೊಂದಿಗೆ ಪೊಲೀಸ್​ ಅಧಿಕಾರಿ ಕೆಟ್ಟದಾಗಿ ನಡೆದುಕೊಂಡಿರುವುದನ್ನು ಕೇರಳ ಪೊಲೀಸರು ಖಚಿತಪಡಿಸಿದ್ದಾರೆ. ಅನುಚಿತವಾಗಿ ವರ್ತಿಸಿದ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಕೊಚ್ಚಿ ನಗರ ಪೊಲೀಸ್​ ಆಯುಕ್ತ ಸಿ.ಎಚ್​. ನಾಗರಾಜು ಅವರು ಭರವಸೆ ನೀಡಿದ್ದಾರೆ.

    ರಾತ್ರಿ ಹೊತ್ತು ನಟಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡ ಪೊಲೀಸ್​ ಅಧಿಕಾರಿಗೆ ಎದುರಾಯ್ತು ಸಂಕಷ್ಟ!

    ಆರೋಪಿ ಪೊಲೀಸ್​ ಅಧಿಕಾರಿ ಫೋರ್ಟ್​ ಕೊಚ್ಚಿ ಪೊಲೀಸ್​ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಟಿ ಅರ್ಚನಾ, ನಡೆದ ಘಟನೆಯನ್ನು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡ ಬಳಿಕ ಪ್ರಕರಣ ಬೆಳಕಿಗೆ ಬಂದಿತು. ಆದರೆ, ನಟಿ ಯಾವುದೇ ದೂರು ದಾಖಲಿಸಿರಲಿಲ್ಲ. ಆದರೂ ಪೊಲೀಸರೇ ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಿದ್ದು, ವರದಿ ಸಲ್ಲಿಸಿದ್ದಾರೆ. ಅಧಿಕಾರಿಯು ನಟಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡಿರುವುದು ಖಚಿತವಾಗಿದೆ.

    ರಾತ್ರಿ ಹೊತ್ತು ನಟಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡ ಪೊಲೀಸ್​ ಅಧಿಕಾರಿಗೆ ಎದುರಾಯ್ತು ಸಂಕಷ್ಟ!

    ಆದರೆ, ನಟಿ ಮಾಡಿದ್ದ ಆರೋಪವನ್ನು ಪೊಲೀಸ್​ ಅಧಿಕಾರಿ ಅಲ್ಲಗೆಳೆದಿದ್ದಾರೆ. ಬದಲಾಗಿ ನಟಿ ಅರ್ಚನಾ ಅವರೇ ಕೆಟ್ಟದಾಗಿ ನಡೆದುಕೊಂಡರು ಎಂದಿದ್ದಾರೆ. ಗಸ್ತು ತಿರುಗುವ ವೇಳೆ ನಾನು ಕೆಲವೊಂದು ಮಾಹಿತಿಯನ್ನಷ್ಟೇ ಕೇಳಿದೆ. ಆದರೆ, ಕೆಟ್ಟದಾಗಿ ನಡೆದುಕೊಳ್ಳಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಅರ್ಚನಾ ಕವಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪ್ರಕಾರ ಪೊಲೀಸ್ ಅಧಿಕಾರಿ​ ಅವರನ್ನು ಲೈಂಗಿಕ ಕಾರ್ಯಕರ್ತೆಯರಂತೆ ನಡೆಸಿಕೊಂಡರಂತೆ. ನಾನು ಪ್ರಯಾಣಿಸುತ್ತಿದ್ದ ಆಟೋವನ್ನು ತಡೆದರು. ಎಲ್ಲಿಗೆ ಹೋಗುತ್ತಿದ್ದೀರಾ? ಮತ್ತು ಏಕೆ ಹೋಗುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು. ಇದನ್ನೆಲ್ಲ ಯಾಕೆ ವಿಚಾರಿಸುತ್ತಿದ್ದಾರೆ ಎಂದು ನಾನು ಮತ್ತೆ ಕೇಳಿದಾಗ ಬಹಳ ಕೆಟ್ಟದಾಗಿ ಮಾತನಾಡಿದರು ಎಂದು ಆರೋಪಿಸಿದ್ದಾರೆ. ಇದಷ್ಟೇ ಅಲ್ಲದೆ, ಪೊಲೀಸ್​ ಪೇದೆ ಮನೆಗೆ ಹೋಗುವವರೆಗೂ ಹಿಂಬಾಲಿಸಿದರು. ಇದರಿಂದ ಅಸಮಾಧಾನಗೊಂಡಿದ್ದರಿಂದ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ ಎಂದು ನಟಿ ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್​)

    ರಾತ್ರಿ ಹೊತ್ತು ನಟಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡ ಪೊಲೀಸ್​ ಅಧಿಕಾರಿಗೆ ಎದುರಾಯ್ತು ಸಂಕಷ್ಟ!

    ಇವರು ಸಾಮಾನ್ಯ ಮಹಿಳೆಯಲ್ಲ ಜಿಲ್ಲಾಧಿಕಾರಿ: ಪ್ರವಾಹದಲ್ಲಿ ನಲುಗಿದ ಜನರ ಕಣ್ಣೀರೊರೆಸಿದ ಐಎಎಸ್​ ಅಧಿಕಾರಿ

    ನೀವು ಒಂಟಿಯಾಗೇ ಸಾಯುತ್ತೀರಿ… ನೆಟ್ಟಿಗನ ಕಾಮೆಂಟ್​ಗೆ ಸಮಂತಾ ಕೊಟ್ಟ ಖಡಕ್​ ಉತ್ತರ ಹೀಗಿತ್ತು…

    ಪತ್ನಿ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಮೈಸೂರಿನ ಕ್ವಾಟ್ರಸ್​ನಲ್ಲೇ ನೇಣಿಗೆ ಶರಣಾದ ಪೊಲೀಸ್​ ಪೇದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts