More

    ವಿಕಾಸ್​ ದುಬೆ ಎನ್​ಕೌಂಟರ್​ ವೇಳೆ ಗಾಯಗೊಂಡಿದ್ದ ಪೊಲೀಸ್​ ಪೇದೆ ಆಸ್ಪತ್ರೆಗೆ ಹೋದಾಗ ಕಾದಿತ್ತು ಶಾಕ್​ !

    ಕಾನ್ಪುರ: ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಯನ್ನು ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಬಂಧಿಸಿ, ಉತ್ತರ ಪ್ರದೇಶಕ್ಕೆ ಕರೆತರಲಾಗಿತ್ತು. ನಂತರ ಅವನು ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಎನ್​ಕೌಂಟರ್​ ಮಾಡಲಾಗಿತ್ತು.

    ಆದರೆ ಇದೀಗ ಉಜ್ಜಯನಿಯಿಂದ, ಉತ್ತರ ಪ್ರದೇಶಕ್ಕೆ ವಿಕಾಸ್​ ದುಬೆಯನ್ನು ಕರೆದುಕೊಂಡು ಬಂದ ವಾಹನದಲ್ಲಿದ್ದ ಪೊಲೀಸ್​ ಪೇದೆಯೋರ್ವರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ.

    ಪೇದೆಯಲ್ಲಿ ಕರೊನಾ ಇರುವುದು ಶನಿವಾರ ಗೊತ್ತಾಗಿದೆ. ಇದೀಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
    ಪೊಲೀಸ್​ ಪೇದೆಯೊಂದಿಗೆ ಆ ವಾಹನದಲ್ಲಿ ಇದ್ದ ಇನ್ನೂ ನಾಲ್ವರು ಸಿಬ್ಬಂದಿಯನ್ನೂ ತಪಾಸಣೆಗೆ ಒಳಪಡಿಸಲಾಗಿದ್ದು, ಅವರ ವರದಿ ನೆಗೆಟಿವ್​ ಬಂದಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಡ್ರೋನ್​ ಪ್ರತಾಪ್​​ರನ್ನು ಡಿಆರ್​ಡಿಒ ವಿಜ್ಞಾನಿಯಾಗಿ ನೇಮಿಸಿದ್ರಾ? ಏನಿದರ ಸತ್ಯಾಂಶ?

    ವಿಕಾಸ್​ ದುಬೆ ಎನ್​ಕೌಂಟರ್​ ವೇಳೆ ನಡೆದ ಸಣ್ಣ ಅಪಘಾತದಲ್ಲಿ ಈ ಪೊಲೀಸ್​ ಪೇದೆ ಗಾಯಗೊಂಡಿದ್ದರು. ಕೊವಿಡ್​ನ ಲಕ್ಷಣಗಳೂ ಸಣ್ಣ ಪ್ರಮಾಣದಲ್ಲಿ ಇದ್ದಿದ್ದರಿಂದ ತಪಾಸಣೆ ಮಾಡಲಾಗಿತ್ತು. ಅವರಲ್ಲೀಗ ಕರೊನಾ ದೃಢಪಟ್ಟಿದೆ. ಪೇದೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಕಾರ್ಯ ನಡೆಯುತ್ತಿದೆ. (ಏಜೆನ್ಸೀಸ್​)

    ತಪ್ಪು ಮುಚ್ಚಿಹಾಕಲು ಪತ್ನಿಯ ಗಂಟಲು ದ್ರವದ ಮಾದರಿಗೆ ಮನೆಗೆಲಸದವಳ ಹೆಸರು ಕೊಟ್ಟ ಖತರ್ನಾಕ್​ ವೈದ್ಯ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts