More

    ೪ ಎಕರೆಯಲ್ಲಿ ಬಸ್ ನಿಲ್ದಾಣ ನಿರ್ಮಾಣ

    ಆಳಂದ: ಕ್ಷೇತ್ರ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದ್ದು, ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಹೋಗಲು ತಾಲೂಕಿನ ಮೂಲ ಹಾದು ಹೋಗಬೇಕಾಗಿದೆ. ಹೀಗಾಗಿ ವಾಹನ ದಟ್ಟಣೆಗೆ ಅನುಗುಣವಾಗಿ ಸುಮಾರು ೪ ಎಕರೆ ಪ್ರದೇಶದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ಹೇಳಿದರು.

    ಪುರಸಭೆ ವ್ಯಾಪ್ತಿಯ ಹಳೇ ನೀರು ಶುದ್ಧೀಕರಣ ಘಟಕ ಆವರಣದಲ್ಲಿ ೨.೬ ಕೋಟಿ ರೂ. ವೆಚ್ಚದಲ್ಲಿ ೧೦ ಲಕ್ಷ ಲೀಟರ್ ಸಾರ್ಮಥ್ಯದ ಜಲ ಸಂಗ್ರಹಗಾರ ನಿರ್ಮಾಣಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಜಲ ಸಂಗ್ರಹಗಾರ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇದರಿಂದ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಹೆಬಳಿ ರಸ್ತೆಯಲ್ಲಿರುವ ಘಟಕದಲ್ಲಿ ರಾತ್ರಿ ನೀರು ಪೋಲಾಗುತ್ತಿತ್ತು. ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ನಿರ್ಲಕ್ಷ್ಯ ವಹಿಸಿದವರನ್ನು ಅಮಾನತು ಮಾಡಲು ಆದೇಶ ನೀಡಿದ್ದೇನೆ ಎಂದರು.

    ಮುಖ್ಯಾಧಿಕಾರಿ ಶಂಭುಲಿಂಗ ಕಣ್ಣಿ, ಎಇಇ ಎಚ್.ಎನ್.ಸ್ವಾಮಿ, ಕೆಪಿಸಿಸಿ ಸದಸ್ಯ ರಾಜಶೇಖರ ಪಾಟೀಲ್ ಚಿತಲಿ, ಪ್ರಮುಖರಾದ ಗುರುಶರಣ ಪಾಟೀಲ್ ಕೋರಳ್ಳಿ, ಶರಣಗೌಡ ಪಾಟೀಲ್ ಮೋಘಾ, ಸಲಾಂ ಸಗರಿ, ಆಸೀಫ್ ಅನ್ಸಾರಿ, ಮಲ್ಲಪ್ಪ ಹತ್ತರಕಿ, ಗುರುಶಾಂತಪ್ಪ ಪಾಟೀಲ್ ನಿಂಬಾಳ, ಸುಭಾಷ ಪೋಜಿ, ಈರಣ್ಣ ಹತ್ತರಕಿ, ಫೀರ್ದೋಸ್ ಅನ್ಸಾರಿ, ಗುಲಾಬಹುಸೇನ್ ಟಪ್ಪೇವಾಲೆ, ಸಂತೋಷ ಹೂಗಾರ, ಲಿಂಗರಾಜ ಪಾಟೀಲ್, ಪಂಡಿತ ಶೇರಿಕರ, ಕುಮಾರ ದೇಶಮುಖ, ಅಮಜದ್ ಅಲಿ ಕರಜಗಿ ಇತರರಿದ್ದರು.

    ಕ್ಷೇತ್ರದಲ್ಲಿ ಬರ ಆವರಿಸಿದ್ದು, ಜಲಮೂಲಗಳು ಬರಿದಾಗುತ್ತಿವೆ. ಹೀಗಾಗಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ಜನ- ಜಾನುವಾರುಗಳಿವೆ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು. ಅವಶ್ಯಕತೆಯಿದ್ದಲ್ಲಿ ಕೊಳವೆ ಬಾವಿ ಕೊರೆದು ನೀರು ಸರಬರಾಜು ಮಾಡಿ.
    | ಬಿ.ಆರ್.ಪಾಟೀಲ್, ಮುಖ್ಯಮಂತ್ರಿ ಸಲಹೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts