More

    ಮಾನವೀಯ ಮೌಲ್ಯ ಸ್ಥಾಪನೆ ಅಗತ್ಯ

    ವಾಡಿ: ಇಂದಿನ ಗಣಕಯಂತ್ರ ಜಗತ್ತಿನಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು, ಅವುಗಳನ್ನು ಮರುಸ್ಥಾಪಿಸಲು ಸಾಂಸ್ಕೃತಿಕ ಚಳವಳಿ ಸಂಘಟಿಸುವುದು ಅಗತ್ಯವಾಗಿದೆ ಎಂದು ಪ್ರಗತಿಪರ ಚಿಂತಕ ಎಂ.ಶಶಿಧರ್ ಮೈಸೂರ ಹೇಳಿದರು.

    ಪಟ್ಟಣದಲ್ಲಿ ನವೋದಯದ ಹರಿಕಾರ ಈಶ್ವರಚಂದ್ರ ವಿದ್ಯಾಸಾಗರ ಸಾಂಸ್ಕೃತಿಕ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜವನ್ನು ಪ್ರಗತಿಯತ್ತ ಮುನ್ನಡೆಸಬಲ್ಲ ಕಲೆ, ಸಾಹಿತ್ಯ, ಸಂಗೀತ, ನಾಟಕ, ಸಿನಿಮಾಗಳು ಉಳಿಯಬೇಕಿದೆ. ಸಾಂಸ್ಕೃತಿಕ ಚಳವಳಿ ಜೀವಂತವಾಗಿಡಲು ಜನಪರ ವೇದಿಕೆಗಳ ಅಗತ್ಯವಿದೆ. ಈ ಎಲ್ಲ ಚಟುವಟಿಕೆ ನಡೆಸುವುದಕ್ಕೆ ಸಾಂಸ್ಕೃತಿಕ ಭವನ ಬೇಕಾಗುತ್ತದೆ. ವಾಡಿಯಲ್ಲಿ ಸಂಘಟನೆಗಳು, ಪ್ರಗತಿಪರ ಮನಸ್ಸುಗಳಿಂದ ಧನಸಹಾಯ ಪಡೆದು ವಿದ್ಯಾಸಾಗರ ಸಾಂಸ್ಕೃತಿಕ ಭವನ ನಿರ್ಮಿಸಲು ಹೊರಟಿರುವುದು ಉತ್ತಮ ಕಾರ್ಯ ಎಂದರು.

    ಪ್ರಮುಖರಾದ ವೆಂಕಟೇಶ ದೇವದುರ್ಗ, ರಾಜು ಒಡೆಯರಾಜ, ಶರಣು ಹೇರೂರ, ವೀರಭದ್ರಪ್ಪ ಆರ್.ಕೆ., ಎಸ್.ಎಂ.ಶರ್ಮಾ, ಶರಣುಕುಮಾರ ದೋಶೆಟ್ಟಿ, ಮಲ್ಲಣ್ಣ ದಂಡಬಾ, ಗೌತಮ ಪರ್ತೂರ, ದೌಲಪ್ಪ ದೊರೆ, ಸಿದ್ಧಾರ್ಥ ತಿಪ್ಪನೋರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts