More

    ಹೀಗಾದರೆ ರಾಜ್ಯದ ಉದ್ಧಾರ ಹೇಗೆ? ಯಾರು ವೀಕು, ಯಾರು ಫೇಕು?

    ಬೆಂಗಳೂರು: ರಾಜ್ಯ ನಾಯಕತ್ವ ಬದಲಾವಣೆ ಕುರಿತಂತೆ ಬಿಜೆಪಿಯೊಳಗೆ ನಡೆದಿರುವ ಆಂತರಿಕ ಕಚ್ಚಾಟವನ್ನು ಕಾಂಗ್ರೆಸ್ ಲೇವಡಿ ಮಾಡಿದ್ದು, ‘ಹೀಗಾದರೆ ರಾಜ್ಯದ ಉದ್ಧಾರ ಹೇಗೆ?’ ಎಂದು ಪ್ರಶ್ನಿಸಿದೆ.

    ನಾಯಕತ್ವ ಬದಲಾವಣೆ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬೆನ್ನಲ್ಲೇ ಕೇಂದ್ರ ಸಚಿವ ಸದಾನಂದ ಗೌಡ ಪ್ರತಿಕ್ರಿಯೆ ನೀಡಿ, ‘ಬಸನಗೌಡ ಪಾಟೀಲ್ ಯತ್ನಾಳ್ ಯಾರು? ಅವರೇನು ನಮ್ಮ ಪಕ್ಷದ ರಾಜ್ಯ ಘಟಕದ ಯಾವುದೇ ಸ್ಥಾನದಲ್ಲೂ ಇಲ್ಲ. ಅವರೊಬ್ಬ ಸಾಮಾನ್ಯ ಶಾಸಕ ಅಷ್ಟೇ’ ಎಂದಿದ್ದರು.  ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ‘ಶಾಸಕರಲ್ಲಿ ಕ್ಯಾಟಗರಿ ಇದೆ ಎಂದು ಸದಾನಂದ ಗೌಡರಿಂದ ತಿಳಿಯಿತು!’ ಎಂದು ಸಾಮಾಜಿಕ ಜಾಲತಾಣದಲ್ಲಿ ಲೇವಡಿ ಮಾಡಿದೆ. ‘ಆರ್ಡಿನರಿ ಶಾಸಕರು, ಆಪರೇಷನ್ ಶಾಸಕರು, ಅಡ್ನಾಡಿ ಶಾಸಕರು, ಒರಿಜಿನಲ್ ಶಾಸಕರು, ಮೂಲ ಶಾಸಕರು, ವಲಸೆ ಶಾಸಕರು, ಲೂಟಿ ಶಾಸಕರು!’ ಎಂದು ವ್ಯಂಗ್ಯವಾಡಿದ್ದು, ಹೀಗಿರುವಾಗ ರಾಜ್ಯ ಉದ್ಧಾರವಾಗುವುದು ಹೇಗೆ? ಎಂದು ಪ್ರಶ್ನಿಸಿದೆ. ಇದನ್ನೂ ಓದಿರಿ ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ನಿನಗೆ ಗೊತ್ತಾ? ಸುಮ್ನೆ ಚಿಕನ್​ ತಿನ್ಲಾ: ಸಿದ್ದರಾಮಯ್ಯ

    ಜತೆಗೆ ‘ಯಾರು ವೀಕು ಯಾರು ಫೇಕು ಎಂದು ರಾಜ್ಯದ ಜನತೆ ತೋರಿಸಿಕೊಟ್ಟಿದ್ದಾರೆ. 28 ಎಂಪಿ ಕ್ಷೇತ್ರಗಳಲ್ಲಿ 27 ಕ್ಷೇತ್ರಗಳಲ್ಲಿ ಸೋಲು. ಉ.ಚುನಾವಣೆಯ 17 ಎಂಎಲ್​ಎ ಕ್ಷೇತ್ರಗಳಲ್ಲಿ 15 ಸೋಲು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋಲು. ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂಬ ಬಿಜೆಪಿಯ ಕುಟುಕು ಮಾತಿಗೆ ಕಾಂಗ್ರೆಸ್ ಖಾರವಾಗಿ ಪ್ರತಿಕ್ರಿಯೆ ನೀಡಿದೆ.

    ‘ನೆರೆ, ಬರ ಪರಿಹಾರ, ಜಿಎಸ್ಟಿ ಪಾಲು, ಪಿಎಂ ಕೇರ್ಸ್ ಇತ್ಯಾದಿಗಳಲ್ಲಿ ರಾಜ್ಯದ ಪರ ನಿಲ್ಲದ 25 ಸಂಸದರು ಇದ್ದರೆಸ್ಟು ಬಿಟ್ಟರೆಸ್ಟು! ಪ್ರತಿ ರಾಜ್ಯದಲ್ಲೂ ಆಪರೇಷನ್ ಕಮಲದ ಸರ್ಕಾರ ರಚಿಸುವುದು ಮಹಾ ಸಾಧನೆಯೇ? ಇತರ ಪಕ್ಷದವರನ್ನ ಸೆಳೆಯುವುದ ಬಿಟ್ಟು ಸ್ವಂತ ಕಾರ್ಯಕರ್ತರನ್ನ ಗೆಲ್ಲಿಸಿ, ಮೊದಲು ನೀವು ಆತ್ಮನಿರ್ಭರರಾಗಿ ಮಾತನಾಡಿ’ ಎಂದು ಬಿಜೆಪಿಯನ್ನು ಕೆಣಕಿದೆ.

    ಹೊಸ ವರ್ಷ ಆಚರಣೆಯ ಮಾರ್ಗಸೂಚಿ ಬಗ್ಗೆ ಗೃಹ ಸಚಿವ ಹೇಳಿದ್ದೇನು?

    ರಾತ್ರಿಗಿಂತ ಹಗಲಿನಲ್ಲೇ ಕಾಂಡಂ ಮಾರಾಟ ಜಾಸ್ತಿ!

    ಹೋಟೆಲ್​ ಬಿಲ್​ 2 ಸಾವಿರ ಆದ್ರೆ ಬರೋಬ್ಬರಿ 50 ಸಾವಿರ ರೂಪಾಯಿ ಟಿಪ್ಸ್​ ಕೊಡ್ತಾನೆ ಈ ಭೂಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts