ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಬುಟಾ ಸಿಂಗ್ (86) ಅವರು ಶನಿವಾರ ಬೆಳಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಸಿಂಗ್ ಅವರು ಕಳೆದ ಅಕ್ಟೋಬರ್ನಿಂದ ಕೋಮಾದಲ್ಲಿದ್ದರು.
ಸಿಂಗ್ ಮೃತಪಟ್ಟಿರುವುದನ್ನು ಅವರ ಮಗ ಅರ್ವಿಂದರ್ ಸಿಂಗ್ ಫೇಸ್ಬುಕ್ ಮೂಲಕ ಖಚಿತಪಡಿಸಿದ್ದಾರೆ. ನನ್ನ ತಂದೆ ಬುಟಾ ಸಿಂಗ್ ಇಂದು ಬೆಳಗ್ಗೆ ನಿಧನರಾದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅರ್ವಿಂದರ್ ಬರೆದುಕೊಂಡಿದ್ದಾರೆ.
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, ಬುಟಾ ಸಿಂಗ್ ಜೀ ಅನುಭವವುಳ್ಳ ಆಡಳಿತಗಾರರಾಗಿದ್ದರು ಮತ್ತು ಬಡವರ ಧ್ವನಿಯಾಗಿದ್ದ ಅವರು ದಮನಿತರ ಶಕ್ತಿಯಾಗಿದ್ದರು. ಅವರ ಹಠಾತ್ ನಿಧನದಿಂದ ದುಃಖಿತರಾಗಿದ್ದೇವೆ. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ದುಃಖಭರಿಸುವ ಶಕ್ತಿ ನೀಡಲಿ ಎಂದು ಸಂತ್ವಾನ ಹೇಳಿದ್ದಾರೆ.
Shri Buta Singh Ji was an experienced administrator and effective voice for the welfare of the poor as well as downtrodden. Saddened by his passing away. My condolences to his family and supporters.
— Narendra Modi (@narendramodi) January 2, 2021
ಪ್ರಧಾನಿ ಹೊರತುಪಡಿಸಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕುಲದೀಪ್ ಬಿಷ್ಮೋಯ್, ಮಮತಾ ಬ್ಯಾನರ್ಜಿ, ಕೆ.ಸಿ ವೇಣುಗೋಪಾಲ್ ಹಾಗೂ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಬುಟಾ ಸಿಂಗ್ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಪ್ರಧಾನಿಗೆ ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ರೈತ: ಡೆತ್ನೋಟ್ನಲ್ಲಿದೆ ನೋವಿನ ಮಾತು!
In the passing of Shri Buta Singh, the country has lost one of the longest serving parliamentarians with rich administrative experience. He championed the cause of the oppressed and marginalized. Condolences to his family and supporters.
— President of India (@rashtrapatibhvn) January 2, 2021
Saddened at the passing away of Buta Singh ji, eight-time Lok Sabha MP and former Union Cabinet Minister. My heartfelt condolences to his family, friends and supporters
— Mamata Banerjee (@MamataOfficial) January 2, 2021
Deeply disheartened by the sad demise of Sardar Buta Singh ji. A stalwart Congressman and Parliamentarian par distinction, he immensely contributed to nation-building as a Minister of 18 Departments.
I offer my condolences to his family, friends & followers. pic.twitter.com/nTSgqosuOy
— K C Venugopal (@kcvenugopalmp) January 2, 2021
ಆರಂಭದಲ್ಲಿ ಶಿರೋಮನಿ ಅಕಾಲಿದಳದ ಸದಸ್ಯರಾಗಿದ್ದ ಬುಟಾಸಿಂಗ್ 1960ರಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು. ಸಿಂಗ್ 1986-1989ರವರೆಗೆ ರಾಜೀವ್ ಗಾಂಧಿ ಸರ್ಕಾರದಲ್ಲಿ ಪ್ರಮುಖ ದಲಿತ ನಾಯಕ ಮತ್ತು ಕೇಂದ್ರ ಸಚಿವರಾಗಿದ್ದರು. (ಏಜೆನ್ಸೀಸ್)
ವರ್ಷಾಚರಣೆಗೆ ಕೇಕ್ ಕತ್ತರಿಸುತ್ತಿದ್ದ ಯುವಕರ ಹಿಂದೆಯೇ ಹಾದುಹೋದ ದೆವ್ವ! ಭಯಾನಕ ವಿಡಿಯೋ ಇಲ್ಲಿದೆ
54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಇಲ್ಲಿದೆ ಎಕ್ಸ್ಕ್ಲೂಸಿವ್ ಫೋಟೋಸ್
ದುಡ್ಡು ಮಾಡುವ ಆಸೆಯಿಂದ ಖತರ್ನಾಕ್ ಐಡಿಯಾ ಮಾಡಿ ಜೈಲುವಾಸಿಯಾದ ದಂಪತಿ..!