More

    ಕೊಲೆ, ಸಾಕ್ಷಿನಾಶ: ಪೊಲೀಸ್​​ ಇನ್ಸ್​ಪೆಕ್ಟರ್, ಕಾಂಗ್ರೆಸ್​ ನಾಯಕನ ಬಂಧನ

    ಅಹಮದಾಬಾದ್ : ಗುಜರಾತಿನ ವಡೋದರ ಜಿಲ್ಲೆಯಲ್ಲಿ, ಕಳೆದ ಒಂದೂವರೆ ತಿಂಗಳಿಂದ ಕಾಣೆಯಾಗಿದ್ದ ಮಹಿಳೆಯ ಕೊಲೆ ಆರೋಪದ ಮೇಲೆ ಆಕೆಯ ಪೊಲೀಸ್​ ಪತಿಯನ್ನೇ ಬಂಧಿಸಲಾಗಿದೆ. ಸಂತ್ರಸ್ತಳ ಮೃತದೇಹವನ್ನು ಸುಟ್ಟುಹಾಕುವಲ್ಲಿ ಸಹಾಯ ಮಾಡಿದ್ದರೆನ್ನಲಾದ ಓರ್ವ ಕಾಂಗ್ರೆಸ್ ನಾಯಕನನ್ನು ಕೂಡ ಬಂಧಿಸಲಾಗಿದೆ.

    ಜೂನ್​ 4 ರ ತಡರಾತ್ರಿ, ವಡೋದರ ಗ್ರಾಮಾಂತರ ಪೊಲೀಸ್​ ಇನ್ಸ್​ಪೆಕ್ಟರ್​​ ಅಜಯ್​ ದೇಸಾಯಿ, ಜಗಳದ ಹಿನ್ನೆಲೆಯಲ್ಲಿ ತಮ್ಮ ಪತ್ನಿ ಸ್ವೀಟಿ ಪಟೇಲ್​​ರನ್ನು ಕತ್ತು ಹಿಸುಕಿ ಸಾಯಿಸಿದರು. ಮಾರನೇ ಬೆಳಿಗ್ಗೆ ಕಾಂಗ್ರೆಸ್ ನಾಯಕ ಕಿರೀಟ್​ಸಿಂಹ್​ ಜಡೇಜ ಅವರ ಸಹಾಯ ಪಡೆದು, ದೇಹವನ್ನು ಸುಟ್ಟುಹಾಕಿದರು. ನಂತರ ಪತ್ನಿಯ ಸೋದರನಿಗೆ ಫೋನ್ ಮಾಡಿ, ರಾತ್ರಿ ಜಗಳ ನಡೆದ ನಂತರದಿಂದ ತಮ್ಮ ಪತ್ನಿ ಕಾಣಿಸುತ್ತಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ನಡುರಾತ್ರಿ ಪ್ರೇಯಸಿಯ ಮನೆಗೆ ಹೋಗಿ ಸಿಕ್ಕಿಬಿದ್ದ ಯುವಕ; ಮುಂದಾದದ್ದು ಭಾರಿ ದುರಂತ

    ಜೂನ್ 5 ರ ಬೆಳಿಗ್ಗೆ ಮೃತದೇಹವನ್ನು ಬ್ಲಾಂಕೆಟ್​ನಲ್ಲಿ ಸುತ್ತಿ ಕಾರಿನಲ್ಲಿ ಸಾಗಿಸಿದ್ದ ದೇಸಾಯಿ, ಜಡೇಜಗೆ ಸೇರಿದ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಹೊಟೆಲ್​ ಹಿಂಭಾಗದಲ್ಲಿ, ಮೃತದೇಹವನ್ನು ಸುಟ್ಟುಹಾಕಿದ್ದರು ಎನ್ನಲಾಗಿದೆ. ದೇಸಾಯಿ ಮತ್ತು ಜಡೇಜ ಅವರ ವಿರುದ್ಧ ಕೊಲೆ ಮತ್ತು ಸಾಕ್ಷ್ಯನಾಶದ ಆರೋಪಗಳಡಿ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಅಹಮದಾಬಾದ್​ ಕ್ರೈಂ ಬ್ರಾಂಚ್​ ಇನ್ಸ್​ಪೆಕ್ಟರ್ ಡಿ.ಬಿ.ಬರದ್​ ಹೇಳಿದ್ದಾರೆ.

    ಬಂಧನಕ್ಕೊಳಗಾಗಿರುವ ಕಿರೀಟ್​ಸಿಂಹ್​ ಜಡೇಜ, 2020 ರಲ್ಲಿ ವಡೋದರ ಜಿಲ್ಲೆಯ ಕರ್ಜನ್​​ ವಿಧಾನಸಭೆಯ ಬೈಎಲೆಕ್ಷನ್​ನಲ್ಲಿ ಕಾಂಗ್ರೆಸ್​ ಟಿಕೆಟ್​ ಮೇಲೆ ಸ್ಪರ್ಧಿಸಿ ಸೋಲನುಭವಿಸಿದ್ದರು ಎನ್ನಲಾಗಿದೆ. ಅಹಮದಾಬಾದ್​ ಅಪರಾಧ ವಿಭಾಗದ ಪೊಲೀಸರು ಮತ್ತು ರಾಜ್ಯದ ಆ್ಯಂಟಿ ಟೆರರಿಸಂ ಸ್ಕ್ವಾಡ್​ನ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿದ್ದರು. (ಏಜೆನ್ಸೀಸ್)

    ಕಣ್ಣೀರು ಹಾಕುತ್ತಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ ಬಿಎಸ್​ವೈ

    ತುಂಬಾ ಹೊತ್ತು ಕುಳಿತು ಬೆನ್ನು ನೋವೇ? ಈ ಯೋಗಾಸನ ಮಾಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts