More

    ಕಾಂಗ್ರೆಸ್ ಒಂದು ರಿವರ್ಸ್ ಗೇರ್ ಸರ್ಕಾರ, ಅದರಿಂದ ಯಾವ ಅಭಿವೃದ್ಧಿಯೂ ಸಾಧ್ಯವಿಲ್ಲ: ಅಮಿತ್​ ಶಾ ವಾಗ್ದಾಳಿ

    ಹುಬ್ಬಳ್ಳಿ: ಕಾಂಗ್ರೆಸ್ ಒಂದು ರಿವರ್ಸ್ ಗೇರ್ ಸರ್ಕಾರ. ರಿವರ್ಸ್ ಗೇರ್ ಸರ್ಕಾರವನ್ನು ನೀವು ಬಯಸ್ತಿರಾ? ಇಂತಹ ಸರ್ಕಾರದಿಂದ ಯಾವ ಅಭಿವೃದ್ಧಿಯೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ವಾಗ್ದಾಳಿ ನಡೆಸಿದರು.

    ಹುಬ್ಬಳ್ಳಿಯ ಅಣ್ಣಿಗೇರಿಯಲ್ಲಿಂದು ಮಾತನಾಡಿದ ಅಮಿತ್ ಶಾ, ರಾಮಲಿಂಗ ಕಾಮಣ್ಣ ಮಂದಿರಕ್ಕೆ ಪ್ರಣಾಮಗಳು. ಕನ್ನಿಕಾ ಪರಮೇಶ್ವರ, ಅಮೃತೇಶ್ವರ ಮಠ, ಮೂರು ಸಾವಿರ ಮಠಗಳಿಗೂ ನಮನ. ಸಮಾಜ ಸುಧಾರಕ ಬಸವಣ್ಣನವರಿಗೂ ಪ್ರಣಾಮಗಳು ಎಂದು ಮಾತು ಆರಂಭಿಸಿದರು.

    ರಾಹುಲ್ ಬಾಬಾ

    ಮಹಮ್ಮದ್​ ಗೋರಿಯನ್ನು ಮಣಿಸಿದ ಮಹಿಳೆಯರು ಕಿತ್ತೂರು ಕರ್ನಾಟಕದವರು. ಚುನಾವಣೆಯಲ್ಲಿ ಶಂಕರಪಾಟೀಲ ಮತ್ತು ಅನಿಲ್ ಮೆಣಸಿನಕಾಯಿ ಅವರನ್ನು ಗೆಲ್ಲಿಸಿ. ಶಾಸಕರ ಜೊತೆ, ಸಚಿವರನ್ನಾಗಿ ಮಾಡುವ ಚುನಾವಣೆ ಇದು. ಕರ್ನಾಟಕದ ಭವಿಷ್ಯ ಈ ಚುನಾವಣೆ ಮೇಲೆ ನಿಂತಿದೆ. ರಾಹುಲ್ ಬಾಬಾ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವಿದೆ. ಮತ್ತೊಂದೆಡೆ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರವಿದೆ. ಕಾಂಗ್ರೆಸ್ ರಿವರ್ಸ್ ಗೇರ್ ಸರ್ಕಾರ. ರಿವರ್ಸ್ ಗೇರ್ ಸರ್ಕಾರ ಬಯಸ್ತಿರಾ? ರಿವರ್ಸ್ ಗೇರ್ ಸರ್ಕಾರದಿಂದ ಯಾವ ಅಭಿವೃದ್ಧಿಯೂ ಸಾಧ್ಯವಿಲ್ಲ ಎಂದರು.

    ಇದನ್ನೂ ಓದಿ: 5 ನಿಮಿಷ ಮಾತಾಡಲು 10 ಸಾವಿರ ರೂ.: ಒಳ್ಳೇ ಹುಡ್ಗೀರು ಇತಿಹಾಸ ಸೃಷ್ಟಿಸಲಾರರು ಎಂದ ನಟಿ ಕಿರಣ್​

    ವಿವಾದ ಬಗೆಹರಿಸಲಿಲ್ಲ

    ರೈತರ ಮೇಲೆ ಗೋಲಿಬಾರ್ ಮಾಡಿದ್ದು ಇದೇ ಕಾಂಗ್ರೆಸ್. ರೈತರ ಮೇಲೆ ಲಾಠಿ ಚಾರ್ಜ್​ ಮತ್ತು‌ ಗುಂಡೇಟು ಹೊಡೆದ ಕಾಂಗ್ರೆಸ್​ಗೆ ಮತ ಕೇಳುವ ನೈತಿಕತೆಯಿಲ್ಲ. ಯಡಿಯೂರಪ್ಪ ಅವರು ಪ್ರತ್ಯೇಕ ಕೃಷಿ ಬಜೆಟ್ ಮಾಡಿದ್ದರು. ಕೃಷಿಕರ ಕಲ್ಯಾಣಕ್ಕೆ ಶ್ರಮಿಸಿದರು. ಕೇಂದ್ರ, ಕರ್ನಾಟಕ ಮತ್ತು ಗೋವಾದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಆದರೆ, ಮಹಾದಾಯಿ ವಿವಾದವನ್ನು ಬಗೆಹರಿಸಲಿಲ್ಲ ಎಂದು ಹೇಳಿದರು.

    ಹೊಸ ಯೋಜನೆ

    ಉತ್ತರ ಕರ್ನಾಟಕದ ರೈತರ ಜೀವನದಲ್ಲಿ ಮೋದಿ ಖುಷಿ ತಂದರು. ಕಳಸಾ-ಬಂಡೂರಿ ಯೋಜನೆ ಚಾಲನೆಗೆ ಮೋದಿ ಕಾರಣಕರ್ತರಾದರು. ಕಾಂಗ್ರೆಸ್ ಅಧಿಕಾರವಧಿಯಲ್ಲಿ ಇದ್ದ ಕಬ್ಬಿನ ದರವನ್ನು ಬಿಜೆಪಿ ಹೆಚ್ಚಿಸಿತು. ಎಥೆನಾಲ್ ಹೊಸ ಯೋಜನೆಯನ್ನೂ ಮೋದಿ ಜಾರಿಗೆ ತಂದರು ಎಂದು ತಮ್ಮ ಸರ್ಕಾರದ ಸಾಧನೆಗಳನ್ನು ಕೊಂಡಾಡಿದರು.

    ಕರ್ನಾಟಕವನ್ನ ಭದ್ರವಾಗಿಸಲಿದೆ

    ಗದಗಿನ ಲಕ್ಷ್ಮೇಶ್ವರದಲ್ಲಿ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಅಮಿತ್ ಶಾ, ಬಸವಣ್ಣನ ವಚನದಲ್ಲಿ ಸಂಸಾರದ ಪ್ರತಿ ಸಮಸ್ಯಗಳ ಪರಿಹಾರವಿದೆ. ಡಾ. ಚಂದ್ರು ಲಮಾಣಿಗೆ ವೋಟ್ ಹಾಕಿ ಕಳುಹಿಸಿ, ಅವರನ್ನ ದೊಡ್ಡ ವಕ್ತಿಯನ್ನಾಗಿ ಮಾಡ್ತೀನಿ. ನಿಮ್ಮ ಒಂದು ಮತ ಕರ್ನಾಟಕವನ್ನ ಭದ್ರವಾಗಿಸಲಿದೆ. ಮೋದಿಯವರ ಕೈ ಬಲಪಡಿಸಲು ನಿಮ್ಮ ಮತ ಹಾಕಿ. ನಿಮ್ಮದೊಂದು ಮತಭಾರತ ಅಭಿವೃದ್ಧಿಗಾಗಿ. ಪೂರ್ಣ ಬಹುಮತದ ಬಿಜೆಪಿ ಸರ್ಕಾರ ರಚನೆ ಮಾಡಿ. ಕಾಂಗ್ರೆಸ್ ಸರ್ಕಾರ ಬಂದ್ರೆ ರಿವರ್ಸ್ ಗೇರ್​ನಲ್ಲಿ ಹೋಗುತ್ತದೆ ಎಂದರು.

    ಕಾಂಗ್ರೆಸ್ ಏನಾದ್ರೂ ಮಾಡ್ತಾ?

    ಕಾಂಗ್ರೆಸ್ ಪಾರ್ಟಿ ಕಳಸಾ-ಬಂಡೂರಿ ವಿಷಯವಗಿ ಏನಾದ್ರೂ ಮಾಡಿದರಾ? ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಕಾಂಗ್ರೆಸ್ ಏನಾದ್ರೂ ಮಾಡ್ತಾ? ಈ ಎರಡೂ ಯೋಜನೆ ಕೈಗೊಳ್ಳಲ್ಲು ಮುಂದಾಗಿದ್ದು ಮೋದಿ ಮತ್ತು ಬಿಜೆಪಿ ಸರ್ಕಾರ. 70 ಸಾವಿರ ಕೋಟಿ ಏತ ನೀರಾವರಿ ಯೋಜನೆಗೆ ಬಿಜೆಪಿ ಸರ್ಕಾರ ಚಾಲನೆ ಕೊಟ್ಟಿದೆ. ರಾಗಿ, ಜೋಳ ಎಂಎಸ್​ಪಿಯಲ್ಲಿ‌ ಖರೀದಿಯಾಗುತ್ತಿವೆ ಎಂದು ತಿಳಿಸಿದರು.

    ಇದನ್ನೂ ಓದಿ: ಕಾಂಗ್ರೆಸ್​ ಸಮಾವೇಶಕ್ಕೆ ಮಳೆ ಅಡ್ಡಿ; ವರುಣನ ಅಬ್ಬರದ ನಡುವೆ ರಾಹುಲ್​ ಗಾಂಧಿ ಭಾಷಣ

    ಅವಕಾಶ ಇರಲಿಲ್ಲ

    ಪಿಎಫ್​ಐ ಸಂಘಟನೆಯವರು ಬಾಂಬ್ ದಾಳಿ ಮಾಡುತ್ತಿದ್ದರು. ಮೋದಿ ಪಿಎಫ್ಐ ಮೇಲೆ ಬ್ಯಾನ್ ಹೇರಿದ್ದಾರೆ. ಧರ್ಮದ ಆಧಾರದಲ್ಲಿ ಮೀಸತಾತಿಗೆ ಅವಕಾಶ ಇರಲಿಲ್ಲ. ಹೀಗಾಗಿ ಬಿಜೆಪಿ ಮುಸ್ಲಿಂ ಮೀಸಲಾತಿ ರದ್ದು ಮಾಡಿದೆ. ದಲಿತರಿಗೆ, ಆದಿ ವಾಸಿಗಳಿಗೆ ಮತ್ತು ಲಿಂಗಾಯತರಿಗೆ ಮೀಸಲಾತಿ ನೀಡಿದ್ದಾರೆ. ಕಾಂಗ್ರೆಸ್ ಮತ್ತೇ ಮುಸ್ಲಿಮರಿಗೆ ಮೀಸಲಾತಿ ನೀಡುತ್ತೇವೆ ಎನ್ನುತ್ತಿದೆ. ಯಾರ ಮೀಸಲಾತಿ ರದ್ದು ಮಾಡಿ ಮುಸ್ಲಿಮರಿಗೆ ಮೀಸಲಾತಿ ಕೊಡುತ್ತೀರೋ? ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

    ನೆಲಮಂಗಲದಲ್ಲಿ ಕಿಚ್ಚು ಹೊತ್ತಿಸಿದ ಕುಕ್ಕರ್ ಬ್ಲಾಸ್ಟ್!

    ಮೋದಿಗೆ ಅವಮಾನ ಮಾಡುವುದನ್ನ ಯಾರೂ ಕ್ಷಮಿಸಲ್ಲ..ಕಾಂಗ್ರೆಸ್ ಖರ್ಗೆ ವಿರುದ್ಧ ಕ್ರಮ ಕೈಗೊಳ್ಳಬೇಕು: ಶೋಭಾ ಕರಂದ್ಲಾಜೆ

    ಕಾಂಗ್ರೆಸ್​ ಸಮಾವೇಶಕ್ಕೆ ಮಳೆ ಅಡ್ಡಿ; ವರುಣನ ಅಬ್ಬರದ ನಡುವೆ ರಾಹುಲ್​ ಗಾಂಧಿ ಭಾಷಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts