More

    ನೆಲಮಂಗಲದಲ್ಲಿ ಕಿಚ್ಚು ಹೊತ್ತಿಸಿದ ಕುಕ್ಕರ್ ಬ್ಲಾಸ್ಟ್!

    ಬೆಂಗಳೂರು ಗ್ರಾಮಾಂತರ: ನೆಲಮಂಗಲ ತಾಲೂಕು ಸೋಂಪುರ ಹೋಬಳಿ ಹೊನ್ನೇನಹಳ್ಳಿಯಲ್ಲಿ ಕೆಲ ದಿನಗಳ ಹಿಂದೆ ನಡೆದಿದೆ ಎನ್ನಲಾದ ಕುಕ್ಕರ್ ಬ್ಲಾಸ್ಟ್ ವಿಷಯ ವಿವಾದದ ಸ್ಪರೂಪ ಪಡೆದು
    ಕೊಂಡಿದ್ದು, ಕ್ಷೇತ್ರದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ವಾಕ್ಸಮರ, ಆರೋಪ-ಪ್ರತ್ಯಾರೋಪಗಳಿಗೆ ಕಿಚ್ಚು ಹೊತ್ತಿಸಿದೆ.
    ಜಾಲತಾಣಗಳಲ್ಲಿ ವೈರಲ್: ಹೊನ್ನೇನಹಳ್ಳಿಯ ಆಂಜಿನಪ್ಪ ಎಂಬುವರ ಮನೆಯಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿದೆ ಎಂಬ ವಿಷಯ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇತ್ತೀಚೆಗೆ ಕಾಂಗ್ರೆಸ್ ಅಭ್ಯರ್ಥಿ ಎನ್.ಶ್ರೀನಿವಾಸ್ ಮತದಾರರ ಓಲೈಕೆಗೆ ಕುಕ್ಕರ್ ಹಂಚಿದ್ದರು, ಇದೇ ಕುಕ್ಕರ್ ಬ್ಲಾಸ್ಟ್ ಆಗಿದ್ದು, ಪ್ರಕರಣದಲ್ಲಿ ಮನೆಯವರಿಗೆ ಸಣ್ಣಪುಟ್ಟ ಗಾಯವಾಗಿದೆ. ಕಳಪೆ ಕುಕ್ಕರ್‌ನಿಂದ ಇಂಥ ದುರಂತ ಸಂಭವಿಸಿದ್ದು, ಕುಕ್ಕರ್ ಪಡೆದಿರುವ ಎಲ್ಲರೂ ಎಚ್ಚರಿಕೆಯಿಂದಿರಬೇಕು’ ಎಂಬರ್ಥದ ವಿಡಿಯೋ ತುಣುಕುಗಳು ಹರಿದಾಡಿದ್ದವು.
    ಹಳೆ ಕುಕ್ಕರ್ ಒಡೆದಿದೆ ಅಷ್ಟೇ!: ಜಾಲತಾಣಗಳಲ್ಲಿ ಕುಕ್ಕರ್ ಬ್ಲಾಸ್ಟ್ ವಿಷಯ ಸದ್ದು ಮಾಡುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಆಂಜಿನಪ್ಪ ಕುಟುಂಬ, ನಮ್ಮ ಮನೆಯಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿಲ್ಲ. ಹಳೇ ಕುಕ್ಕರ್‌ರ ರಬ್ಬರ್ ತೀರ ಹಳೆಯದಾಗಿದ್ದರಿಂದ ಒಡೆದಿದೆ. ಅದರಲ್ಲೂ ಶ್ರೀನಿವಾಸ್ ಅವರು ನಮಗೆ ಯಾವುದೇ ಕುಕ್ಕರ್ ನೀಡಿಲ್ಲ ಎಂದು ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದರು. ಏತನ್ಮಧ್ಯೆ ಜೆಡಿಎಸ್ ಮುಖಂಡರೊಬ್ಬರು ಈ ವಿವಾದ ಹುಟ್ಟುಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು,
    ಕಾಂಗ್ರೆಸ್ ಕಾರ್ಯಕರ್ತರು ಜಾಲತಾಣಗಳಲ್ಲಿ ಜೆಡಿಎಸ್ ವಿರುದ್ಧ ತರಹೇವಾರಿ ಕಾಮೆಂಟ್‌ಗಳ ಮೂಲಕ ಹರಿಹಾಯ್ದಿದ್ದಾರೆ.

    ಚುನಾವಣಾಧಿಕಾರಿಗಳಿಗೆ ಜೆಡಿಎಸ್ ದೂರು: ಕುಕ್ಕರ್ ಬ್ಲಾಸ್ಟ್ ಪ್ರಕರಣ ವಿವಾದ ಕಾವು ಪಡೆಯುತ್ತಿರುವ ನಡುವೆ ಬುಧವಾರ ಜೆಡಿಎಸ್ ಕಾನೂನು ಘಟಕದ ಕಾರ್ಯಕರ್ತರು ಚುನಾವಣಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಕಾಂಗ್ರೆಸ್‌ನವರು ಜೆಡಿಎಸ್ ಅಭ್ಯರ್ಥಿ ಹಾಗೂ ಮುಖಂಡರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಜೆಡಿಎಸ್ ಸಂಘಟನೆ ಸಹಿಸದೆ ಕಾಂಗ್ರೆಸ್‌ನವರು ಜನರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

    ಕುಕ್ಕರ್ ಬ್ಲಾಸ್ಟ್ ವಿವಾದ ಸಂಬಂಧ ಇತ್ತೀಚೆಗೆ ಕಾಂಗ್ರೆಸ್‌ನ ಕೆಲ ಮುಖಂಡರು ಚುನಾವಣಾಧಿಕಾರಿಗಳಿಗೆ ಜೆಡಿಎಸ್ ಕಾರ್ಯಕರ್ತ ವೆಂಕಟೇಶ್ ಹಾಗೂ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಿದ್ದಾರೆ. ಜೆಡಿಎಸ್ ಸಂಘಟನೆ ಸಹಿಸಿಕೊಳ್ಳಲಾಗದೆ ಸಾರ್ವಜನಿಕರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೆ.ಎನ್.ಸುರೇಶ್ ಜೆಡಿಎಸ್ ಕಾನೂನು ಘಟಕದ ತಾಲೂಕು ಅಧ್ಯಕ್ಷ

    ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಅಲೆ ಇರುವುದನ್ನು ಸಹಿಸದೆ ಜೆಡಿಎಸ್‌ನವರು ದುರದ್ದೇಶಪೂರ್ವಕವಾಗಿ ಇಂಥ ವಿವಾದ ಹುಟ್ಟುಹಾಕಿ ತೇಜೋವಧೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಜಾಲತಾಣಗಳನ್ನು ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಕಾನೂನಡಿ ಕ್ರಮಕ್ಕೆ ಒತ್ತಾಯಿಸಿ ಠಾಣೆಯಲ್ಲಿ ದೂರು ದಾಖಲಿಸಲಾಗುವುದು. ಅಗಳಕುಪ್ಪೆ ಗೋವಿಂದರಾಜು
    ಕಾಂಗ್ರೆಸ್ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts