More

    ಕಾಂಗ್ರೆಸ್ ಎಸ್‌ಸಿ-ಎಸ್‌ಟಿ ಒಬಿಸಿಯ ಹಲವು ತಲೆಮಾರುಗಳನ್ನು ನಾಶಪಡಿಸಿದೆ: ರಾಹುಲ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

    ನವದೆಹಲಿ: ಕಾಂಗ್ರೆಸ್ ವ್ಯವಸ್ಥೆಯು “ಎಸ್‌ಸಿ-ಎಸ್‌ಟಿ ಒಬಿಸಿಯ ಹಲವು ತಲೆಮಾರುಗಳನ್ನು ನಾಶಪಡಿಸಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

    ಇದನ್ನೂ ಓದಿ: ಲೋಕ ಚುನಾವಣಾ ಪ್ರಚಾರ: ವಾರಾಂತ್ಯದಲ್ಲಿ ಬಿಹಾರಕ್ಕೆ ಮತ್ತೆ ಪ್ರಧಾನಿ ಮೋದಿ ಭೇಟಿ

    ನವದೆಹಲಿಯ ದ್ವಾರಕಾದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, “ಕೆಲವೊಮ್ಮೆ ಸುಳ್ಳು ಮಾತನಾಡುವಾಗ, ಶೆಹಜಾದಾ ಬಾಯಿಯಿಂದ ಸತ್ಯ ಹೊರಬರುತ್ತದೆ ಎಂದು ಗುಡುಗಿದ್ದಾರೆ. ಕಾಂಗ್ರೆಸ್​ ಶೆಹಜಾದಾ ದೊಡ್ಡ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ತನ್ನ ಅಜ್ಜಿ, ತಂದೆ, ತಾಯಿಯ ಕಾಲದಲ್ಲಿ ರೂಪುಗೊಂಡ ವ್ಯವಸ್ಥೆಯೂ ದಲಿತರು, ಹಿಂದುಳಿದವರು ಮತ್ತು ಆದಿವಾಸಿಗಳ ವಿರುದ್ಧವಾಗಿತ್ತು ಎಂದು ಅವರು ದೊಡ್ಡ ಸತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

    ಇದಕ್ಕೂ ಮುನ್ನ ಹರಿಯಾಣದ ಪಂಚಕುಲದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ ತಮ್ಮ ತಂದೆ ಮತ್ತು ಅಜ್ಜಿ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ, ಅದು ಯಾರನ್ನು ಬೆಂಬಲಿಸುತ್ತದೆ ಮತ್ತು ರಕ್ಷಿಸುತ್ತದೆ ಎಂದು ನನಗೆ ತಿಳಿದಿದೆ ಎಂದು ಹೇಳಿದ್ದರು.

    ಕಾಂಗ್ರೆಸ್‌ನ ಈ ವ್ಯವಸ್ಥೆಯು ಎಸ್‌ಟಿ, ಎಸ್‌ಸಿ ಮತ್ತು ಒಬಿಸಿಗಳ ತಲೆಮಾರನ್ನು ನಾಶಪಡಿಸಿತು. ಇಂದು, ಶೆಹಜಾದಾ ಇದನ್ನು ಸ್ವತಃ ಒಪ್ಪಿಕೊಂಡಿದ್ದಾರೆ” ಎಂದು ಮೋದಿ ಅವರು ಹೇಳಿದರು.

    ರಾಹುಲ್ ಗಾಂಧಿ ಹೇಳಿದ್ದೇನು?
    ಇಂದು (ಬುಧವಾರ) ಮುಂಜಾನೆ, ರಾಹುಲ್ ಗಾಂಧಿ ಅವರು, ಹರಿಯಾಣದ ಪಂಚಕುಲದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ,ರಾಹುಲ್​ ಗಾಂಧಿ ತಮ್ಮ ತಂದೆ ಮತ್ತು ಅಜ್ಜಿ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ, ಅದು ಯಾರನ್ನು ಬೆಂಬಲಿಸುತ್ತದೆ ಮತ್ತು ರಕ್ಷಿಸುತ್ತದೆ ಎಂದು ನನಗೆ ತಿಳಿದಿದೆ ಎಂದು ಹೇಳಿದ್ದರು.

    “ನನ್ನ ಅಜ್ಜಿ ಪ್ರಧಾನಿ, ನನ್ನ ತಂದೆ ಪ್ರಧಾನಿಯಾಗಿದ್ದರು, ಮತ್ತು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ನಾನು ಪ್ರಧಾನಿ ಮನೆಗೆ ಹೋಗುತ್ತಿದ್ದೆ. ಹಾಗಾಗಿ ವ್ಯವಸ್ಥೆಯು ಒಳಗಿನಿಂದ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನನಗೆ ತಿಳಿದಿದೆ. ನಾನು ನಿಮಗೆ ಒಂದು ವಿಷಯ ಹೇಳಬಲ್ಲೆ, ವ್ಯವಸ್ಥೆಯು ಕೆಳಜಾತಿಗಳ ವಿರುದ್ಧ ತೀವ್ರವಾಗಿ ಮತ್ತು ಪ್ರತಿ ಹಂತದಲ್ಲೂ ಒಗ್ಗೂಡಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

    ನಟ ಶಾರುಖ್ ಖಾನ್ ಆಸ್ಪತ್ರೆಗೆ ದಾಖಲು: ಅಹಮದಾಬಾದ್​ನಲ್ಲಿ ಚಿಕಿತ್ಸೆ! ಏನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts