More

    ಪತ್ನಿ ರಾಧಾ ಜತೆ ದಾಸರಹಳ್ಳಿ ಧನಂಜಯ್ ಮತಯಾಚನೆ

    ಬೆಂಗಳೂರು: ದಾಸರಹಳ್ಳಿ ಕ್ಷೇತ್ರದ ಚೊಕ್ಕಸಂದ್ರ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಾಸರಹಳ್ಳಿ ಜಿ. ಧನಂಜಯಗೌಡ ಹಾಗೂ ಅವರ ಪತ್ನಿ ರಾಧಾ ಧನಂಜಯ ಗೌಡ ಮತಯಾಚಿಸಿದರು.

    ಚೊಕ್ಕಸಂದ್ರ ವಾರ್ಡ್ ವ್ಯಾಪ್ತಿಯಲ್ಲಿ ಬರುವ ನೆಲಗದರನಹಳ್ಳಿ, ಶಿವಪುರ, ಚೊಕ್ಕಸಂದ್ರ ಗ್ರಾಮ, ಡೈನಮೆಟಿಕ್ ಸರ್ಕಲ್ ಹಾಗೂ ಸುತ್ತಮುತ್ತಲ ಪ್ರದೇಶ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್ ವ್ಯಾಪ್ತಿಯಲ್ಲಿ ಬರುವ ರಾಜಗೋಪಾಲ ನಗರ, ಗಣಪತಿ ನಗರ, ಚಾಮುಂಡಿಪುರ, ವಿಧಾನಸೌಧ ಬಡಾವಣೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ರೋಡ್ ಶೋ ಮೂಲಕವೂ ಮತ ಕೇಳಿದರು.

    ಇದನ್ನೂ ಓದಿ: ಅಭಿವೃದ್ಧಿ ನೋಡಿ ಮತ ನೀಡಿ, ಕಣ್ಣೀರಿಗಲ್ಲ: ಎಸ್.ಟಿ. ಸೋಮಶೇಖರ್ ಹೇಳಿಕೆ

    ದಾಸರಹಳ್ಳಿ ಧನಂಜಯ ಗೌಡ ಮಾತನಾಡಿ, ಕ್ಷೇತ್ರಕ್ಕೆ ಅನುದಾನ ಬಂದಿದ್ದರೂ ರಸ್ತೆ, ಮೋರಿ, ಬೀದಿ ದೀಪ, ಫುಟ್​ಪಾತ್​ಗಳು ಅಭಿವೃದ್ಧಿಯಾಗಿಲ್ಲ. ಅನುದಾನ ತರಲು ಹಾಲಿ ಶಾಸಕರಿಗೆ ಸಾಧ್ಯವಾಗುತ್ತಿಲ್ಲ. ಕೇಳಿದರೆ ಕೋರ್ಟ್ ಮುಖಾಂತರ ಅನುದಾನ ತರುವುದಾಗಿ ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪೌರಕಾರ್ವಿುಕರನ್ನು ಕಾಯಂ ಮಾಡುವುದು, ಪೊಲೀಸ್ ಇಲಾಖೆಯಲ್ಲಿ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುವ ಪೇದೆಗಳಿಗೆ ವಿಶೇಷ ಮಾಸಿಕ ಭತ್ಯೆ ಮತ್ತು ಇನ್ನೂ ಹಲವು ಯೋಜನೆಗಳನ್ನು ತರಲಾಗುವುದು ಎಂದರು.

    ಬಿಬಿಎಂಪಿ ಮಾಜಿ ಸದಸ್ಯರಾದ ನಾಗಭೂಷಣ್, ಭಾಸ್ಕರ್ ಆಚಾರಿ, ಮನೋಜ್, ಮಾಲ, ಮುನಿರಾಜು, ರಾಜಶೇಖರ್, ಮುತ್ತುಜಾ, ಸುರೇಶ್, ಮಾಜಿ ನಗರಸಭಾ ಸದಸ್ಯ ರಾಜು, ಕೃಷ್ಣಮೂರ್ತಿ, ಸೋಮು ಮತ್ತು ಪಕ್ಷದ ಪದಾಧಿಕಾರಿಗಳು ಇದ್ದರು.

    ಕೈ ಅಭ್ಯರ್ಥಿ ದಾಸರಹಳ್ಳಿ ಧನಂಜಯ್​ ಪರ ಒಲವು

    ಅಭಿವೃದ್ಧಿ ನೋಡಿ ಮತ ನೀಡಿ, ಕಣ್ಣೀರಿಗಲ್ಲ: ಎಸ್.ಟಿ. ಸೋಮಶೇಖರ್ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts