More

    ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಶಂಕೆ ಕಾಂಗ್ರೆಸ್‍ಗೆ: ಮಣಿಪುರದ ಇಬ್ಬರು ಶಾಸಕರಿಗೆ ಶೋಕಾಸ್ ನೋಟಿಸ್!  

    ಇಂಫಾಲ: ರಾಜ್ಯದ ಏಕೈಕ ರಾಜ್ಯಸಭಾ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಪರವಾಗಿ ಅಡ್ಡ ಮತದಾನ ಮಾಡಿರುವ ಶಂಕೆ ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗಿದೆ. ಪರಿಣಾಮ ಮಣಿಪುರ ಪ್ರದೇಶ ಕಾಂಗ್ರೆಸ್ ಕಮಿಟಿ ತನ್ನದೇ ಇಬ್ಬರು ಶಾಸಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ!

    ವಾಂಗ್‍ಖೇಯಿ ಶಾಸಕ ಓಕ್ರಾಂ ಹೆನ್ರಿ ಸಿಂಗ್‍ ಮತ್ತು ಸಗೋಲ್‍ಬಂದ್ ಶಾಸಕ ರಾಜ್‍ಕುಮಾರ್‍ ಇಮೋ ಸಿಂಗ್ ಶೋಕಾಸ್ ನೋಟಿಸ್ ಪಡೆದವರು. ಶೋಕಾಸ್ ನೋಟಿಸಿನಲ್ಲಿರುವ ಅಂಶ ಇದು-

    “ ಜೂನ್ 19ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತಚಲಾಯಿಸುವ ಮೂಲಕ ನೀವು ಉದ್ದೇಶಪೂರ್ವಕವಾಗಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‍ನ ನಿರ್ಧಾರಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದೀರಿ. ಅಷ್ಟೇ ಅಲ್ಲ, ಪಕ್ಷದ ತತ್ತ್ವಾದರ್ಶ, ನೀತಿಗಳನ್ನು ಪಾಲಿಸುವಲ್ಲಿಯೂ ವಿಫಲರಾಗಿದ್ದೀರಿ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂಬುದು ಶಾಸಕಾಂಗ ಪಕ್ಷದ ತೀರ್ಮಾನವಾಗಿತ್ತು. ಅದನ್ನೂ ಉಲ್ಲಂಘಿಸಿದ್ದೀರಿ. ಈ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ವಿವರಣೆ ಕೊಡಿ”

    ಇದನ್ನೂ ಓದಿ: ಕರೊನಾ ವೈರಸ್ ಓಡಿಸೋಕೆ ಆಗಸ್ಟ್ 5ರ ತನಕ ದಿನಕ್ಕೆ 5 ಸಲ ಹನುಮಾನ್ ಚಾಲೀಸ ಪಠಿಸಿ

    ಕಾಂಗ್ರೆಸ್ ಆರೋಪ: ಶಾಸಕ ಓಕ್ರಾಂ ಅವರು ಬಿಜೆಪಿ ಅಭ್ಯರ್ಥಿ ಗೆದ್ದಾಗ ನಡೆದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ಅವರ ಬಂಗಲೆಯಲ್ಲಿ ನಡೆದಿತ್ತು. ಓಕ್ರಾಂ ಅವರು  ಮಾಜಿ ಸಿಎಂ ಓಕ್ರಾಂ ಇಬೂಬಿ ಸಿಂಗ್‍ ಅವರ ಸೋದರ ಸಂಬಂಧಿಯಾಗಿದ್ದಾರೆ. ಓಕ್ರಾಂ ಇಬೂಬಿ ಸಿಂಗ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಹೌದು.

    ಇದನ್ನೂ ಓದಿ: ಕಾರ್ಗಿಲ್ ವಿಜಯೋತ್ಸವ: ನ್ಯಾಷನಲ್ ವಾರ್ ಮೆಮೋರಿಯಲ್‍ನಲ್ಲಿ ರಕ್ಷಣಾ ಸಚಿವರಿಂದ ಗೌರವ ಸಮರ್ಪಣೆ

    ರಾಜ್ಯಸಭೆ ಚುನಾವಣೆಯಲ್ಲಿ ಮಣಿಪುರದಿಂದ ಲೈಸೆಂಬಾ ಸನಜೌಬಾ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಟಿ.ಮಂಗಿ ಬಾಬು ಅವರ ವಿರುದ್ಧ ಗೆಲುವು ದಾಖಲಿಸಿದ್ದರು. ಸನಜೌಬಾ ಅವರು ಮಣಪುರದ ಟಿಟಿಲಾರ್ ರಾಜಮನೆತನದವರು. ಅವರಿಗೆ 28 ಮತಗಳು ಬಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಬಾಬು 24 ಮತ ಗಳಿಸಿದ್ದರು.

    ಇದನ್ನೂ ಓದಿ: ಕಾರ್ಗಿಲ್​ ಯುದ್ಧದಿಂದ ನಮ್ಮ ಯೋಧರ ಶಕ್ತಿ ಜಗತ್ತಿಗೆ ಪರಿಚಯವಾಗಿದೆ: ಪ್ರಧಾನಿ ಮೋದಿ

    ಇದೇ ರೀತಿ ರಾಜ್‍ಕುಮಾರ್  ಅವರು ಜೂನ್ 30ರಂದು ಮುಖ್ಯಮಂತ್ರಿ ಬೀರೇನ್ ಸಿಂಗ್ ಅವರೊಂದಿಗೆ ಚಾರ್ಟರ್ಡ್ ವಿಮಾನದಲ್ಲಿ ನವದೆಹಲಿಗೆ ತೆರಳಿದ್ದರು. ಇದಕ್ಕೆ ಪಕ್ಷದ ಅನುಮತಿ ಇರಲಿಲ್ಲ. ಶಾಸಕರಿಂದ ಇದಕ್ಕೆ ಇನ್ನೂ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. (ಏಜೆನ್ಸೀಸ್)

    ನಿಶ್ಚಿತಾರ್ಥದಲ್ಲಿ ತೆಲುಗು ನಟ ನಿತಿನ್​ ಧರಿಸಿದ್ದ ಕುರ್ತಾ ಬೆಲೆ ಕೇಳಿದ್ರೆ ಶಾಕ್​ ಆಗೋದು ಖಂಡಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts