More

    ಕರೊನಾ ಹೆಚ್ಚಳದ ಕಳವಳ: ಕೇರಳಕ್ಕೆ ಕೇಂದ್ರದ ತಂಡ

    ನವದೆಹಲಿ : ದೇಶದ ಸುಮಾರು ಅರ್ಧದಷ್ಟು ಕರೊನಾ ಪ್ರಕರಣಗಳನ್ನು ವರದಿ ಮಾಡುತ್ತಿರುವ ಕೇರಳದಲ್ಲಿ ಕಳೆದ ಮೂರು ದಿನಗಳಿಂದ 22,000 ಕ್ಕೂ ಹೆಚ್ಚು ನಿತ್ಯಪ್ರಕರಣಗಳು ವರದಿಯಾಗಿವೆ. ಪಾಸಿಟಿವಿಟಿ ದರವೂ 12.93 ರಷ್ಟಿದ್ದು, ನೆರೆರಾಜ್ಯಗಳಿಗೂ ಇದರಿಂದ ಆತಂಕ ಮೂಡಿದೆ. ಹೀಗಿರುವಾಗ, ರಾಜ್ಯಕ್ಕೆ ಕರೊನಾ ನಿಯಂತ್ರಿಸಲು ಸಹಾಯ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

    ನ್ಯಾಷನಲ್ ಸೆಂಟರ್ ಫಾರ್​ ಡಿಸೀಸ್ ಕಂಟ್ರೋಲ್​(ಎನ್​ಸಿಡಿಸಿ) ನಿರ್ದೇಶಕರ ನೇತೃತ್ವದಲ್ಲಿ 6 ಸದಸ್ಯರ ತಂಡವೊಂದನ್ನು ಕೇಂದ್ರ ಸರ್ಕಾರ ಕೇರಳಕ್ಕೆ ಕಳುಹಿಸುತ್ತಿದೆ. ಕೇರಳವು ಇನ್ನೂ ದೊಡ್ಡ ಸಂಖ್ಯೆಯಲ್ಲಿ ಕೋವಿಡ್​​​ ಪ್ರಕರಣಗಳನ್ನು ದಾಖಲಿಸುತ್ತಿರುವುದರಿಂದ, ರಾಜ್ಯದ ಕೋವಿಡ್​ ನಿರ್ವಹಣೆಯ ಪ್ರಯತ್ನಗಳಲ್ಲಿ ಈ ತಂಡವು ಸಹಾಯ ಒದಗಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸೂಖ್ ಮಾಂಡವೀಯ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಇದನ್ನೂ ಓದಿ: ಕರೊನಾ ವಿಚಾರದಲ್ಲಿ ದಾಖಲೆ ಬರೆದ ಕೇರಳ! ಒಂದೇ ದಿನ 22 ಸಾವಿರಕ್ಕೂ ಅಧಿಕ ಪ್ರಕರಣ ದೃಢ

    ಕರೊನಾ ಸೋಂಕು ಹೆಚ್ಚಿರುವ ಸಮಯದಲ್ಲಿ ಬಕ್ರೀದ್​ ಹಬ್ಬಕ್ಕಾಗಿ ನಿರ್ಬಂಧಗಳನ್ನು ಸಡಿಲಿಗೊಳಿಸಿದ ಕೇರಳದ ಪಿಣರಾಯಿ ವಿಜಯನ್​ ಸರ್ಕಾರದ ನಡೆಯನ್ನು ಸುಪ್ರೀಂ ಕೋರ್ಟ್​ ಮತ್ತು ವೈದ್ಯರ ಸಂಘವು ಖಂಡಿಸಿತ್ತು. ಹೀಗಿರುವಾಗ ರಾಜ್ಯ ಸರ್ಕಾರ ತನ್ನ ವೀಕೆಂಡ್ ಲಾಕ್ಡೌನ್​ ಕ್ರಮವನ್ನು ವಿಸ್ತರಿಸಿ ಆದೇಶ ಮಾಡಿದೆ. (ಏಜೆನ್ಸೀಸ್)

    VIDEO | ಕೊಲೆ ಶಂಕೆ ಮೂಡಿಸಿರುವ ನ್ಯಾಯಾಧೀಶರ ‘ಅಪಘಾತ’ದ ದೃಶ್ಯ!

    ಸಿಎಂ ಬೊಮ್ಮಾಯಿಗೆ ಶುಭಾಶಯ; ಬಿಎಸ್​​ವೈಗೆ, ಬಿಜೆಪಿಗೆ ಟಾಂಗ್! ಮಾರ್ಮಿಕ ಸಂದೇಶ ನೀಡಿದ ಸಿದ್ದರಾಮಯ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts