More

    ಗಡಿ ವಿವಾದ ಎದುರಿಸಲು ರಾಜ್ಯ ಸಜ್ಜು: ಸಮರ್ಥ ವಾದ ಮಂಡನೆಗೆ ಹಿರಿಯ ವಕೀಲರ ತಂಡ ರಚನೆ..

    ಬೆಂಗಳೂರು: ಗಡಿವಿವಾದವನ್ನು ಸಮರ್ಥವಾಗಿ ಎದುರಿಸಲು ರಾಜ್ಯ ಸಜ್ಜಾಗಿದ್ದು, ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಂಡವೊಂದು ಕೂಡ ರಚನೆಯಾಗಿದೆ. ಸಿಎಂ ಅವರ ರೇಸ್ ಕೋರ್ಸ್ ನಿವಾಸದಲ್ಲಿ ಸಭೆ ನಡೆದಿದ್ದು, ಆ ಬಳಿಕ ಅವರು ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ.

    ನಿರಂತರವಾಗಿ ಗಡಿ ವಿವಾದದ ಬಗ್ಗೆ ಸಭೆ ಮಾಡುತ್ತ ಬಂದಿದ್ದೆವು. ಇಂದು ಕೂಡ ಹಿರಿಯ ವಕೀಲರ ಜೊತೆಗೆ ಸಭೆ ಮಾಡಿದ್ದೇವೆ. ಮಾತ್ರವಲ್ಲ ಹಿರಿಯ ವಕೀಲರನ್ನು ಒಳಗೊಂಡ ತಂಡ ಕೂಡ ರಚನೆ ಮಾಡಿದ್ದೇವೆ. ಮುಖುಲ್ ರೋಹ್ಟಗಿ, ಶ್ಯಾಂ ದಿವಾನ್, ಉದಯ್ ಹೊಳ್ಳ ಸೇರಿದಂತೆ ಹಲವರನ್ನು ಒಳಗೊಂಡ ತಂಡ ರಚಿಸಲಾಗಿದೆ ಎಂದು ಸಿಎಂ ತಿಳಿಸಿದರು.

    ಈಗಾಗಲೇ ಎರಡು ಮೂರು ಬಾರಿ ಅವರು ಚರ್ಚೆ ಮಾಡಿದ್ದಾರೆ. ಏನು ವಾದ ಮಾಡಬೇಕು ಅನ್ನೋದ್ರ ಕುರಿತಾಗಿ ಚರ್ಚೆ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕರಿಗೂ ನಾಳೆ ಪತ್ರ ಕಳುಹಿಸಿಕೊಡುತ್ತೇವೆ. ಮಹಾರಾಷ್ಟ್ರದವರ ಅರ್ಜಿಗೆ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಅದನ್ನು ಪರಿಗಣಿಸಬಾರದು ಅಂತ ವಾದ ಮಾಡಲು ಟೀಮ್ ಸಜ್ಜಾಗಿದ್ದು, ಈಗಾಗಲೇ ಎಲ್ಲ ಆಯಮಾದಲ್ಲೂ ಚರ್ಚೆ ಮಾಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.

    ಮಹಾರಾಷ್ಟ್ರದಲ್ಲಿ ಗಡಿ ವಿವಾದವೇ ರಾಜಕೀಯ ಆಗಿದೆ. ಇದುವರೆಗೂ ಅದು ಯಶಸ್ವಿ ಆಗಿಲ್ಲ, ಮುಂದೆಯೂ ಆಗುವುದಿಲ್ಲ. ಕನ್ನಡ ನಾಡು, ನುಡಿ, ನೀರಿನ ಬಗ್ಗೆ ನಾವೆಲ್ಲ ಒಗ್ಗಟ್ಟಾಗಿ ಹೋರಾಡುತ್ತೇವೆ. ಕನ್ನಡದ ಗಡಿ ರಕ್ಷಣೆ ಸಲುವಾಗಿ ಮುಂದೆಯೂ ನಾವೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.

    ಹೋಟೆಲ್​ಗಳಲ್ಲಿ ಶೀಘ್ರವೇ ಬೆಲೆ ಹೆಚ್ಚಳ?; ಈಗಾಗಲೇ ಕೆಲವೆಡೆ ದರ ಪರಿಷ್ಕರಣೆ..

    ಸಿದ್ದರಾಮಯ್ಯ ಅರ್ಜಿ, ಹೈಕಮಾಂಡ್ ಮರ್ಜಿ: ಮುಂದಿನ ಚುನಾವಣೆಯಲ್ಲಿ ಸಿದ್ದು ಸ್ಪರ್ಧೆ ಎಲ್ಲಿಂದ?

    ಶಾಸಕರಿಗೇ ಹೊಡೆದು ಬಟ್ಟೆ ಹರಿದು ಹಾಕಿದ ಜನರು; ಕತ್ತಲಲ್ಲಿ ಹರಿದ ಅಂಗಿಯಲ್ಲೇ ಪರಿಸ್ಥಿತಿ ವಿವರಿಸಿದ ಕುಮಾರಸ್ವಾಮಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts