More

    ಸಿದ್ದರಾಮಯ್ಯ ಅರ್ಜಿ, ಹೈಕಮಾಂಡ್ ಮರ್ಜಿ: ಮುಂದಿನ ಚುನಾವಣೆಯಲ್ಲಿ ಸಿದ್ದು ಸ್ಪರ್ಧೆ ಎಲ್ಲಿಂದ?

    ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆಂಬ ಕುತೂಹಲಕ್ಕೆ ಸೋಮವಾರ ತೆರೆಬೀಳುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಇಂದು ಅವರು ಟಿಕೆಟ್​​ಗೆ ಅರ್ಜಿ ಸಲ್ಲಿಸಿದ್ದರೂ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವುದು ಕುತೂಹಲವಾಗಿಯೇ ಉಳಿದಿದೆ. ಏಕೆಂದರೆ ಸದ್ಯದ ಪರಿಸ್ಥಿತಿ ‘ಸಿದ್ದರಾಮಯ್ಯ ಅರ್ಜಿ, ಹೈಕಮಾಂಡ್ ಮರ್ಜಿ’ ಎಂಬಂತಾಗಿದೆ.

    ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ ಟಿಕೆಟ್​​ಗಾಗಿ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದ ಅರ್ಜಿಯೇನೋ ಸಲ್ಲಿಕೆಯಾಗಿದೆ. ಆದರೆ ಎಲ್ಲಿಂದ ಸ್ಪರ್ಧಿಸಲಿದ್ದಾರೆ ಎಂಬುದು ನಿಗೂಢವಾಗಿಯೇ ಉಳಿದಿದೆ.

    ಸಿದ್ದರಾಮಯ್ಯ ಬಾದಾಮಿಯಿಂದ ಕಣಕ್ಕಿಳಿಯುವುದು ಅನುಮಾನ ಎಂಬ ಸಂದೇಶವನ್ನು ಈಗಾಗಲೇ ರವಾನಿಸಿದ್ದರು. ಕಳೆದ ಚುನಾವಣೆಯಲ್ಲಿ ಸೋಲುಂಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆಗೆ ಹಿಂದೇಟು ಹಾಕಿದ್ದು, ಕೋಲಾರ ಕ್ಷೇತ್ರಕ್ಕೆ ತೆರಳಿ ಕಣಕ್ಕಿಳಿಯುವ ಆಕಾಂಕ್ಷೆಯನ್ನೂ ಹೊರಹಾಕಿದ್ದರು. ಜತೆಗೆ, ವರುಣಾ ಕ್ಷೇತ್ರ ಸೇಫ್ ಎಂದು ಭಾವಿಸಿದ್ದು, ಅಲ್ಲಿಂದ ಕಣಕ್ಕಿಳಿದರೆ ಹೇಗೆಂಬ ಬಗ್ಗೆಯೂ ಆಪ್ತರಲ್ಲಿ ಚರ್ಚೆ ನಡೆಸಿದ್ದರು. ಅದಾಗ್ಯೂ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಬಗೆಹರಿದಿಲ್ಲ.

    ಏಕೆಂದರೆ ಇಂದು ಸಿದ್ದರಾಮಯ್ಯ ಕಡೆಯಿಂದ ಅರ್ಜಿ ಸಲ್ಲಿಕೆಯಾಗಿದ್ದರೂ ಎಲ್ಲಿಂದ ಎಂಬುದು ನಿಗದಿಯಾಗಿಲ್ಲ. ಸಿದ್ದರಾಮಯ್ಯ ಪರವಾಗಿ ವೆಂಕಟೇಶ್ ಹಾಗೂ ಪ್ರಭಾಕರ್ ಜತೆಯಾಗಿ ಅರ್ಜಿಯೇನೋ ಸಲ್ಲಿಸಿದ್ದಾರೆ. ಆದರೆ ಕ್ಷೇತ್ರ ಯಾವುದು ಎಂಬ ಸ್ಥಳದಲ್ಲಿ “ಹೈ ಕಮಾಂಡ್ ಸೂಚನೆ ಮೇರೆಗೆ” ಎಂಬುದಾಗಿ ನಮೂದಿಸಲಾಗಿದೆ. ಇದು ಹಲವು ಕುತೂಹಲಗಳನ್ನು ಮೂಡಿಸಿದೆ. ಮಾತ್ರವಲ್ಲ ಕ್ಷೇತ್ರದ ಆಯ್ಕೆ ಬಗ್ಗೆ ಸಿದ್ದು ಇನ್ನೂ ಗೊಂದಲದಲ್ಲಿ ಇದ್ದಾರೆಯೇ ಅಥವಾ ಕ್ಷೇತ್ರದ ಆಯ್ಕೆಯ ಸ್ವಾತಂತ್ರ್ಯ ಸಿದ್ದರಾಮಯ್ಯ ಅವರ ಕೈಯಲ್ಲಿಲ್ಲವೇ ಎಂಬಿತ್ಯಾದಿ ಪ್ರಶ್ನೆಗಳನ್ನು ಇದು ರಾಜಕೀಯ ವಲಯದಲ್ಲಿ ಹುಟ್ಟುಹಾಕಿದೆ.

    ಸಿದ್ದರಾಮಯ್ಯರನ್ನು ಮುಜುಗರಕ್ಕೆ ಈಡುಮಾಡಿದ ಉಗ್ರಪ್ಪ; ‘ತಿಂದಿದ್ದು ಅರಗಲ್ವಾ?’ ಎಂದು ಉಗ್ರಪ್ಪ ಬಾಯ್ಮುಚ್ಚಿಸಿದ ಸಿದ್ದು..

    ಶಾಸಕರಿಗೇ ಹೊಡೆದು ಬಟ್ಟೆ ಹರಿದು ಹಾಕಿದ ಜನರು; ಕತ್ತಲಲ್ಲಿ ಹರಿದ ಅಂಗಿಯಲ್ಲೇ ಪರಿಸ್ಥಿತಿ ವಿವರಿಸಿದ ಕುಮಾರಸ್ವಾಮಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts