More

    ರೈತರಿಗೆ 5, ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ. ನೆರವು ಘೋಷಿಸಿದ ಸಿಎಂ ಬಿಎಸ್​ವೈ

    ಬೆಂಗಳೂರು: ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ಸಂಕಷ್ಟ ಅನುಭವಿಸಿದ ಮೆಕ್ಕೆಜೋಳ ಬೆಳೆದ ಪ್ರತಿ ರೈತರಿಗೆ 5 ಸಾವಿರ ಹಾಗೂ ಕೋವಿಡ್​ ವಿರುದ್ಧ ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ. ಪ್ರೋತ್ಸಾಧನವನ್ನು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಘೋಷಿಸಿದರು.

    ಶುಕ್ರವಾರ ಮಧ್ಯಾಹ್ನ ತುರ್ತು ಪತ್ರಿಕಾಗೋಷ್ಠಿ ಕರೆದ ಸಿಎಂ ಬಿಎಸ್​ವೈ ಮೊದಲ ಎಪಿಎಂಸಿ ಕಾಯ್ದೆ ಬಗ್ಗೆ ಇದ್ದ ಗೊಂದಲವನ್ನು ನಿವಾರಿಸಿದರು. ಎಪಿಎಂ ಕಾಯ್ದೆ ತಿದ್ದುಪಡಿ ಬಗ್ಗೆ ಕೆಲವು ತಪ್ಪು ಅಭಿಪ್ರಾಯಗಳು ಕೆಲವರಿಂದ ಕೇಳಿ ಬರುತ್ತಿವೆ. ನಾನು ರೈತ ಪರ ಬಜೆಟ್​ ಮಂಡಿಸಿದವನು. ಹಸಿರು ಶಾಲೂ ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದವನು, ನನ್ನಿಂದ ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗಲು ಸಾಧ್ಯವಿಲ್ಲ ಎಂದರು.

    ಇದನ್ನೂ ಓದಿ: ಬೆಂಗಳೂರು ಜನರಿಗೆ ನಂ.653 ಸಂಕಟ- ದಕ್ಷಿಣ ಕನ್ನಡ, ಉಡುಪಿಗೆ ದುಬೈ ಕಂಟಕ: ಸಾವಿರದ ಗಡಿ ದಾಟಿದ ಸೋಂಕು!

    ರೈತನ ಬೆಳೆಗೆ ದುಪ್ಪಟ್ಟ ಬೆಲೆ ಬರಬೇಕೆಂಬ ಆಶಯದಿಂದ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಹಲವು ವರ್ಷಗಳ ಹಿಂದೆಯೇ ನಾನು ಶಿಕಾರಿಪುರ ಎಪಿಎಂಸಿ ಮುಂದೆ ಧರಣಿ ಮಾಡಿ ಕಾಯ್ದೆ ತಿದ್ದುಪಡಿಗೆ ಒತ್ತಾಯಿಸಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿಯಿಂದ ರೈತ ಸಮುದಾಯಕ್ಕೆ ಅನುಕೂಲವಾಗಲಿದೆ. ರೈತ ತಾನು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸ್ವತಂತ್ರ ನೀಡುವುದು ಇದರ ಉದ್ದೇಶವಾಗಿದೆ ಎಂದು ಸ್ಪಷ್ಟನೆ ನೀಡಿದರು.

    ರೈತರ ಉತ್ಪನ್ನಗಳು ದುಪ್ಪಾಟಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಕಾರ್ಯಕ್ರಮಗಳನ್ನು ತಂದಿದ್ದಾರೆ. ದೇಶದಲ್ಲೇ ಮೊದಲೇ ಬಾರಿ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್​ ಘೋಷಣೆ ಮಾಡಿದ್ದಾರೆ. ಎಪಿಎಂಸಿಯಲ್ಲೇ ಮಾರಾಟ ಮಾಡಬೇಕೆಂಬ ನಿರ್ಧಾರ ಸರಿಯಲ್ಲ ಎಂದು ಹೋರಾಟ ಮಾಡಿಕೊಂಡು ಬಂದವನು ನಾನು. ಎಪಿಎಂಸಿಗೆ ರೈತನ ಅನುಕೂಲಕ್ಕಾಗಿ ಕೆಲ ತಿದ್ದುಪಡಿಗಳನ್ನು ತಂದಿದ್ದೇನೆ. ಎಪಿಎಂಸಿ ಕಾಯ್ದೆಯಿಂದ ಎಪಿಎಂಸಿ ಸಮತಿಗಳಿಗೆ ಯಾವುದೇ ಧಕ್ಕೆಯಿಲ್ಲ. ರೈತನಿಗೆ ಎಲ್ಲಿ ಒಳ್ಳೆಯ ಬೆಲೆ ಸಿಗುತ್ತದೆ ಅಲ್ಲಿ ಮಾರಾಟ ಮಾಡಬಹುದು ಎಂದರು.

    ಇದನ್ನೂ ಓದಿ: ವರುಣನ ಆರ್ಭಟಕ್ಕೆ ಟೋಲ್ ಧ್ವಂಸ, ಕರೊನಾ ವಾರಿಯರ್ಸ್​ ಬಚಾವ್​!

    ಮೊದಲನೇ ಭಾಗದಲ್ಲಿ 1610 ಕೋಟಿ ಪ್ಯಾಕೇಜ್​ ಘೋಷಣೆ ಮಾಡಿದೆ. ಎರಡನೇ ಬಾರಿ 160 ಕೋಟಿ ರೂ. ಹಣಕಾಸು ನೆರವು ಘೋಷಿಸಿದೆ. ಮೂರನೇ ಪ್ಯಾಕೇಜ್​ನಲ್ಲಿ​ ಮೆಕ್ಕೆಜೋಳ ಬೆಳೆದ ರೈತನಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ಘೋಷಿಸುತ್ತಿದ್ದೇನೆ. ರಾಜ್ಯದಲ್ಲಿ 10 ಲಕ್ಷ ಮೆಕ್ಕೆಜೋಳ ರೈತರಿದ್ದಾರೆ. ಒಬ್ಬ ರೈತನಿಗೆ 5 ಸಾವಿರ ರೂ. ನೀಡಲಾಗುವುದು. ಇದಕ್ಕಾಗಿ ಸುಮಾರು 500 ಕೋಟಿ ರೂ,ಗಳನ್ನು ಮೀಸಲಿಡಲಾಗುವುದು ಎಂದು ತಿಳಿಸಿದರು.

    ಕೋವಿಡ್​ ಸಂಕಷ್ಟ ಸಮಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಏನಾದರೂ ನೆರವು ನೀಡಬೇಕೆಂದು ಸಾಕಷ್ಟು ಕೂಗು ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರಿಗೆ ಸಹಕಾರಿ ಇಲಾಖೆಯಿಂದ 3 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಇದಕ್ಕಾಗಿ 12.5 ಕೋಟಿ ರೂ. ಹಣ ಮೀಸಲಿಡಲಾಗುವುದು.

    ಇದನ್ನೂ ಓದಿ: ನಗರಕ್ಕೆ ಗುಡ್​ಬೈ ಹಳ್ಳಿಕಡೆಗೆ ಜೈ: ಗಗನಮುಖಿಯಾಗಿದ್ದ ಮನೆ ಬಾಡಿಗೆಯಲ್ಲಿ ಇಳಿಕೆ

    ಇದಲ್ಲದೇ ಸೈಸರ್ಗಿಕ ವಿಕೋಪ ಅಪಘಾತದಿಂದ ಮೃತಪಟ್ಟ ಜಾನುವಾರುಗಳಿಗೆ 5000 ಸಾವಿರ ಪರಿಹಾರ ಹಣ ನೀಡುತ್ತೇವೆ ಎಂದು ಬಿಎಸ್​​ವೈ ಹೇಳಿದರು.

    ಮನೆಮನೆ ತೆರಳಿ ಆರೋಗ್ಯ ಕರೊನಾ ವೈರಸ್​ ಪರೀಕ್ಷೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts