More

    ರೈತರ ಧರಣಿ ಸ್ಥಳಕ್ಕೆ ಬೊಮ್ಮಾಯಿ ಭೇಟಿ; ಮೈಶುಗರ್​ ಕಾರ್ಖಾನೆ ವಿಷಯದಲ್ಲಿ ‘ಸಿಹಿ ಸುದ್ದಿ’ ಎಂದರು!

    ಮಂಡ್ಯ: ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ನಡೆಸುವಂತೆ ಆಗ್ರಹಿಸಿ ರೈತ ಮುಖಂಡರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಯಿ ಭೇಟಿ ನೀಡಿದರು. ಅ.18 ರಂದು ಈ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳೋಣ ಎಂದ ಬೊಮ್ಮಾಯಿ, ಕಾರ್ಖಾನೆ ವಿಚಾರದಲ್ಲಿ ಸಿಹಿ ಸುದ್ದಿ ನೀಡ್ತೇನೆ ಎಂದು ಹೇಳಿ ಸರ್ಕಾರದ ಮುಂದಿನ ಹೆಜ್ಜೆಯ ಬಗ್ಗೆ ಕುತೂಹಲ ಮೂಡಿಸಿದರು.

    ಇಂದು ದಸರಾಗೆ ಮೈಸೂರಿಗೆ ತೆರಳುವ ವೇಳೆ ಸಿಎಂ ಕಾರು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದ ಸ್ಥಳದಲ್ಲಿ ನಿಂತಿತು. ಕಾರಿನಿಂದಿಳಿದು ಧರಣಿ ಸ್ಥಳಕ್ಕೆ ಹೋಗಿ ಕೂತು ನಂತರ ಮೈಕು ಹಿಡಿದು ಮಾತನಾಡಿದ ಸಿಎಂ ಬೊಮ್ಮಾಯಿ, “ಕಳೆದ ಬಾರಿ ಧರಣಿ ಸ್ಥಳಕ್ಕೆ ಬರಬೇಕಿತ್ತು. ಈ ಬಾರಿ ಮೈಸೂರಿಗೆ ಹೋಗುವಾಗ ಮನವಿ ಕೊಡ್ತೀರಿ ಎಂದು ಬಂದಿದ್ದೇನೆ. 18 ರಂದು ನಿಮ್ಮೆಲ್ಲರನ್ನು ಕರೆಸಿ ಚರ್ಚಿಸಿ ಒಂದು ನಿರ್ಣಯ ತೆಗೆದುಕೊಳ್ಳೋಣ. ಮೈಶುಗರ್ ಕಾರ್ಖಾನೆ ಇತಿಹಾಸ ಹೊಂದಿದೆ. ಮಂಡ್ಯ ಅಂದ್ರೆ ಸಕ್ಕರೆ ನಾಡು, ಸಕ್ಕರೆ ನಾಡಿನಲ್ಲಿ ಈ ಕಾರ್ಖಾನೆ ಉಳಿಯಬೇಕು. ಕಬ್ಬು ನುರಿಸಿದ್ರೆ ಮಾತ್ರ ಮಂಡ್ಯಕ್ಕೆ ಹೆಸರು. ರೈತರ ಕಬ್ಬು ನುರಿಸುವ ಕೆಲಸ ಆಗಬೇಕು. 18 ರಂದು ಇದಕ್ಕೆ ಒಂದು ಅಂತ್ಯ ಹಾಡೋಣ” ಎಂದರು.

    ಇದನ್ನೂ ಓದಿ: ಮೆಂಟಲ್​ ಆಸ್ಪತ್ರೆಯಲ್ಲಿ ಇರಬೇಕಿದ್ದವರ ಬಗ್ಗೆ ಮಾತಾಡಲ್ಲ: ಸೊಗಡು ಶಿವಣ್ಣಗೆ ಡಿಕೆಶಿ ತಿರುಗೇಟು

    ರೈತರ ಧರಣಿ ಸತ್ಯಾಗ್ರಹ 33ನೇ ದಿನಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮೈಶುಗರ್​​ ಕಾರ್ಖಾನೆ ಖಾಸಗೀಕರಣಕ್ಕೆ ಅವಕಾಶ ನೀಡಬಾರದು ಎಂಬ ಮುಖಂಡರ ಮನವಿ ಸ್ವೀಕರಿಸಿದ ಸಿಎಂ, “ಒಂದು ಸಾರಿ ಕಾರ್ಖಾನೆ ಶುರುವಾದ್ರೆ, ಮತ್ತೆ ನಿಲ್ಲಬಾರದು. ಎಲ್ಲ ಸಚಿವರು, ನೀವು, ಎಲ್ಲರೂ ಬನ್ನಿ. ಚರ್ಚೆ ಮಾಡೋಣ. ಮಾತು ಕೊಟ್ಟ ಮೇಲೆ ನಡೆಸಬೇಕು. ನೀವು ಬರಬೇಕು ಅಂದ್ರಿ, ಬಂದಿದ್ದೇನೆ. ನಿಮ್ಮ ಮೇಲೆ ಗೌರವ ಇದೆ. 18ನೇ ತಾರೀಕು ಬನ್ನಿ, ಚರ್ಚೆ ಮಾಡೋಣ. ಮಂಡ್ಯ ಜನರ ಬಗ್ಗೆ ಗೊತ್ತಿದೆ, ಮೈಶುಗರ್ ಕಾರ್ಖಾನೆ ವಿಚಾರದಲ್ಲಿ ಸಿಹಿ ಸುದ್ದಿ ನೀಡ್ತೇನೆ” ಎಂದು ಹೇಳಿದರು.

    ಭಾರತದಲ್ಲಿ ಕರೊನಾ: ಹೊಸ ಸೋಂಕಿಗಿಂತ ಹೆಚ್ಚಾದ ಚೇತರಿಕೆ

    JEE Advanced 2021 ಫಲಿತಾಂಶ: ಇತಿಹಾಸ ರಚಿಸಿದ ಜೈಪುರದ ಮೃದುಲ್​ ಅಗರ್​​ವಾಲ್​

    ರೈತಪ್ರತಿಭಟನೆ ಸ್ಥಳದಲ್ಲಿ ಯುವಕನ ಶವ; ಕೈಕಾಲು ತುಂಡರಿಸಿ ದೇಹವನ್ನು ನೇತುಹಾಕಿದ್ದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts