More

    ಬಿ.ಎಸ್. ಯಡಿಯೂರಪ್ಪ ಮನೆಗೆ ಸಿಎಂ ಬೊಮ್ಮಾಯಿ‌ ದೌಡು, ವಸ್ತುಸ್ಥಿತಿ ವಿಚಾರ ವಿನಿಮಯ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಚುನಾವಣಾ ಫಲಿತಾಂಶ ಕುರಿತು ವಸ್ತುಸ್ಥಿತಿ ವಿಚಾರ ವಿನಿಮಯ ಮಾಡಿಕೊಂಡು, ಮುಂದಿನ ಹೆಜ್ಜೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ.

    ಮತದಾನೋತ್ತರ ಅಂಕಿ-ಅಂಶಗಳ ವಿವರ ತರಿಸಿಕೊಂಡು ಖುದ್ದು ವರಿಷ್ಠರಿಗೆ ಕರೆ ಮಾಡಿ, ಮತ ಹಾಗೂ ಸ್ಥಾನಗಳ ಗಳಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ವರಿಷ್ಠರು ಕೂಡಾ ತೃಪ್ತಿ ವ್ಯಕ್ತಪಡಿಸಿ, ಸರ್ಕಾರ ರಚನೆಯ ವಿಶ್ವಾಸ ವ್ಯಕ್ತಪಡಿಸಿದರು ಎಂಬ ವಿಷಯವನ್ನು ಬಿಎಸ್​ವೈ ಗಮನಕ್ಕೆ ತಂದರು ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಕುದರಗುಂಡಿ ಕೆರೆಗೆ ರಾಸಾಯನಿಕ ಮಿಶ್ರಿತ ನೀರು ಹರಿದ ಪರಿಣಾಮ: ಲಕ್ಷಾಂತರ ಮೀನುಗಳ ಮಾರಣಹೋಮ

    ಸಚಿವರ ಭೇಟಿ

    ಬೊಮ್ಮಾಯಿ‌ ಬರುವುದಕ್ಕೆ ಮುನ್ನ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಪಕ್ಷಕ್ಕೆ ಬಹುಮತ ಬರಲಿದೆ ಎಂಬ ವಿಶ್ವಾಸವನ್ನು ಬಿಎಸ್​ವೈ ತುಂಬಿದರು ಎನ್ನಲಾಗಿದೆ.

    105 ರಿಂದ 120ಕ್ಕೆ

    ಕಾವೇರಿ ನಿವಾಸದ ಬಳಿ ಎನ್.ರವಿಕುಮಾರ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನಾವು ಏನೇ ಹೇಳಿದರೂ ನಾಳೆ ರಿಸಲ್ಟ್​ನಲ್ಲಿ ವಾಸ್ತವ ಗೊತ್ತಾಗಲಿದೆ. ನಾವು 105-120ರವರೆಗೆ ತಲುಪುತ್ತೇವೆ. ನನ್ನ ಪ್ರಕಾರ ಕಲ್ಯಾಣ ಕರ್ನಾಟಕದಲ್ಲಿ 15ಕ್ಕಿಂತ ಕಡಿಮೆ ಬರುವುದಿಲ್ಲ. ಬೆಂಗಳೂರಿನಲ್ಲಿ ಕೂಡ 15ಕ್ಕಿಂತ ಹೆಚ್ಚು ಸ್ಥಾನ ಗಳಿಸುತ್ತೇವೆ. ಕರಾವಳಿಯಲ್ಲಿ ಅತಿ ಹೆಚ್ಚು ಗೆಲ್ಲುತ್ತೇವೆ. ಒಟ್ಟಾರೆ ರಾಜ್ಯದ ವಿಚಾರ ತೆಗೆದುಕೊಂಡ್ರೆ 105ಕ್ಕಿಂತ ಹೆಚ್ಚು ಗೆಲುವು ನಿಶ್ಚಿತ. ಕಾಂಗ್ರೆಸ್ ಏನೇ ಹೇಳಬಹುದು, ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದರು.

    ಬಾಜಿ ಕಟ್ಟುವವರಿದ್ದರೆ ಬನ್ನಿ! ದಾವಣಗೆರೆಯಲ್ಲಿ ಚುನಾವಣಾ ಬೆಟ್ಟಿಂಗ್ ಜೋರು, ಡಂಗುರ ಸಾರಿಸಿ ಪಂಥಾಹ್ವಾನ

    1964ರಲ್ಲಿ 7 ಸಾವಿರ ರೂ.ಗೆ ಖರೀದಿ: ಈಗ ಹರಾಜಿನಲ್ಲಿ ರೊಲೆಕ್ಸ್​ ಸೇಲಾದ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!​

    ಮರಕ್ಕೆ ಡಿಕ್ಕಿ ಹೊಡೆದ 2 ಕೋಟಿ ರೂ. ಪೋರ್ಷೆ ಕಾರು ಸುಟ್ಟು ಭಸ್ಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts