More

    ಸಿದ್ದಾಪುರ ಕೆರೆ ಒತ್ತುವರಿ ತೆರವು

    ಭದ್ರಾವತಿ: ನಗರಸಭೆ ವ್ಯಾಪ್ತಿಯ ಕೆರೆಗಳ ಒತ್ತುವರಿ ತೆರವುಗೊಳಿಸಲು ನಗರಸಭೆ ಅಧಿಕಾರಿಗಳು ಮಂಗಳವಾರದಿಂದ ಕಾರ್ಯಾಚರಣೆೆ ಆರಂಭಿಸಿದ್ದಾರೆ.

    ಸಿದ್ದಾಪುರ, ಸಂಕ್ಲೀಪುರ ಭಾಗದ ಗೋಣಿಕಟ್ಟೆ ಕೆರೆಯನ್ನು ಸುಮಾರು ಒಂದು ಎಕರೆ ಒತ್ತುವರಿ ಮಾಡಿ ರೈತರೊಬ್ಬರು ಅಡಕೆ ಗಿಡ ನೆಟ್ಟಿದ್ದರು. ನಗರಸಭೆ, ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕೆರೆ ಒತ್ತುವರಿ ತೆರವುಗೊಳಿಸಿ ಗಡಿ ಗುರುತಿಸಿದರು.
    ಕೆರೆಗಳ ಸರ್ವೇ ನಡೆಸಿ ಗಡಿ ನಿರ್ಮಿಸಿದ್ದ ತಾಲೂಕು ಆಡಳಿತ ಹಾಗೂ ನಗರಸಭೆ ಅಧಿಕಾರಿಗಳು ಜನ್ನಾಪುರ ಕೆರೆ ಸೇರಿ ಕೆಲವು ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಈಗಾಗಲೇ ನಡೆದಿತ್ತು. ಕೆಲವು ದಿನಗಳ ನಂತರ ಮತ್ತೊಮ್ಮೆ ಕಾರ್ಯಾಚರಣೆ ಆರಂಭವಾಗಿದೆ. ಬುಧವಾರ ಬೊಮ್ಮನಕಟ್ಟೆ ಕೆರೆಯಲ್ಲಿ ಒತ್ತುವರಿ ತೆರವು ನಡೆಯಲಿದೆ. ಪೌರಾಯುಕ್ತ ಮನುಕುಮಾರ್, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts