More

    ಅನಾಥ ಮಕ್ಕಳ ಶಿಕ್ಷಣಕ್ಕೆ ಉಳಿತಾಯ ಹಣ ನೀಡಿದ ಬಾಲಕ! ಜಿಲ್ಲಾಧಿಕಾರಿ ಅಭಿನಂದಿಸಿದ ರೀತಿಗೆ ನೆಟ್ಟಿಗರು ಫಿದಾ

    ಕೊಚ್ಚಿ: ಆಲಪ್ಪುಳ ಜಿಲ್ಲಾಧಿಕಾರಿ ಕೃಷ್ಣ ತೇಜ ಕೇರಳದಲ್ಲಿ ಸಿಕ್ಕಾಪಟ್ಟೆ ಫೇಮಸ್​. ಆತನ ಫೇಸ್​ಬುಕ್​ ಪೋಸ್ಟ್​ ಸಾಮಾನ್ಯವಾಗಿ ಅನೇಕರ ಗಮನವನ್ನು ತನ್ನತ್ತ ಸೆಳೆಯುತ್ತದೆ. ನಿನ್ನೆ(ನ.23)ಯಷ್ಟೇ ಅವರು ಶೇರ್​ ಮಾಡಿರುವ ವಿಡಿಯೋ ಮತ್ತು ಬರಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ವಿಡಿಯೋದಲ್ಲಿ ಮೂರನೇ ತರಗತಿ ವಿದ್ಯಾರ್ಥಿಯ ಮನಮುಟ್ಟುವ ದೃಶ್ಯವಿದೆ. ತನ್ನ ಉಳಿತಾಯದ ಹಣವನ್ನು ತೆಗೆದುಕೊಂಡು ಜಿಲ್ಲಾಧಿಕಾರಿ ಭೇಟಿಗೆ ಬಂದ ಬಾಲಕ ನಿಧಿನ್​, ಅನಾಥ ಮಕ್ಕಳಿಗೆ ತನ್ನ ಹಣ ನೀಡುವಂತೆ ಕೇಳಿಕೊಂಡನು. ಬಾಲಕನ ಹೃದಯ ವೈಶಾಲತೆಗೆ ಕರಗಿ ಹೋದ ಜಿಲ್ಲಾಧಿಕಾರಿ ಕೃಷ್ಣ ತೇಜ, ಆತನನ್ನು ತಬ್ಬಿಕೊಂಡು ಅಭಿನಂದನೆ ಸಲ್ಲಿಸಿದ ಕ್ಷಣ ಮನಕಲಕುವಂತಿತ್ತು.

    ತಮ್ಮ ಫೇಸ್​ಬುಕ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಿರುವ ಕೃಷ್ಣ ತೇಜ, ನಿನ್ನೆ ಕಚೇರಿಯಲ್ಲಿ ಸಾರ್ವಜನಿಕರ ಭೇಟಿಯ ವೇಳೆ ಬಾಲಕನೊಬ್ಬ ತನ್ನ ಎನ್​ವಲಪ್​ನೊಂದಿಗೆ ನನ್ನ ಬಳಿ ಬಂದ. ಅದೊಂದು ಮನವಿ ಪತ್ರ ಅಂದುಕೊಂಡು ನಾನು ಓಪನ್​ ಮಾಡಿದೆ. ಆದರೆ, ಅದರಲ್ಲಿ ಒಂದಿಷ್ಟು ಹಣ ಇದ್ದಿದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಂತರ ಬಾಲಕನನ್ನು ಹಣದ ಬಗ್ಗೆ ಪ್ರಶ್ನೆ ಮಾಡಿದಾಗ, ಓಣಂ ಮತ್ತು ವಿಶು ಹಬ್ಬವನ್ನು ಆಚರಿಸದೇ ಸಂಗ್ರಹಿಸಿದ ಹಣ ಎಂದು ಹೇಳಿದನು.

    ಆ ಬಾಲಕ ತನ್ನ ಉಳಿತಾಯದ ಹಣವನ್ನು ಅನಾಥ ಮಕ್ಕಳಿಗೆ ಬುಕ್ಸ್​ ಸೇರಿದಂತೆ ಅಧ್ಯಯನ ಸಾಮಾಗ್ರಿಗಳನ್ನು ಕೊಳ್ಳಲು ಸರ್ಕಾರದ ಬಾಲನಿಧಿ ಯೋಜನೆಗೆ ದೇಣಿಗೆ ನೀಡಿದ. ಕೆಲವು ಅನುಭವಗಳು ಅವಿಸ್ಮರಣೀಯ. ಅದರಲ್ಲಿ ಇದೂ ಒಂದಾಗಿತ್ತು. ನಿಧಿನ್ ಮತ್ತು ಅವನ ಹೆತ್ತವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ. (ಏಜೆನ್ಸೀಸ್​)

    ಎಲ್ಲ ಮುಸ್ಲಿಮರನ್ನು ಕೊಂದು ಹಿಂದು ರಾಷ್ಟ್ರ ನಿರ್ಮಾಣ ಮಾಡಿ: ಮುಸ್ಲಿಂ ಮುಖಂಡ ಮೊಹಮ್ಮದ್ ಖಾಲಿದ್ ಆಕ್ರೋಶ

    ಸರ್ಕಾರಿ ವಲಯದಲ್ಲೂ ಇಲ್ಲ ಉದ್ಯೋಗ ಭದ್ರತೆ! ರೈಲ್ವೆ ಇಲಾಖೆಯಿಂದ ನೌಕರರಿಗೆ ಬಿಗ್​ ಶಾಕ್

    ಕೊನೆಗೂ ತುಳು ಭಾಷೆಯಲ್ಲಿ ಬಿಡುಗಡೆಯಾಗಲು ಸಜ್ಜಾದ ಕಾಂತಾರ; ಡಿಸೆಂಬರ್​ನಲ್ಲಿ ತೆರೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts