More

    VIDEO| ನಾಯಿಯನ್ನು ತೋಳ ಎಂದು ನಂಬಿಸುತ್ತಿರುವ ಚೀನಾ ಮೃಗಾಲಯ: ವಿಡಿಯೋ ವೈರಲ್​!

    ಬೀಜಿಂಗ್​: ಚೀನಾದ ಮೃಗಾಲಯವೊಂದರಲ್ಲಿ ನಾಯಿಯನ್ನು ತೋಳ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿರುವುದು ವೈರಲ್​ ಆಗಿರುವ ವಿಡಿಯೋ ಒಂದರಿಂದ ಬಹಿರಂಗವಾಗಿದೆ.

    ಮೃಗಾಲಯದ ಹೊರಭಾಗದಲ್ಲಿ ತೋಳ ಎಂದು ಬರೆಯಲಾಗಿದೆ. ಆದರೆ, ಬೋನಿನ ಒಳಗೆ ನಾಯಿ ನೋಡಿ ಪ್ರವಾಸಿಗರು ಶಾಕ್​ ಆಗಿದ್ದಾರೆ. ವಿಡಿಯೋವನ್ನು ಕೇಂದ್ರ ಚೀನಾದ ಹುಬೇ ಪ್ರಾಂತ್ಯದ ಕ್ಸಿಯಾನಿಂಗ್​ ನಗರದಲ್ಲಿರುವ ಕ್ಸಿಯಾಂಗ್‌ವುಶನ್ ಮೃಗಾಲಯದಲ್ಲಿ ಸೆರೆಹಿಡಿಯಲಾಗಿದೆ.

    ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರೊಬ್ಬರು ಈ ವಿಡಿಯೋ ಮಾಡಿದ್ದು, ನೀನು ತೋಳವಾ ಎಂದು ಪ್ರವಾಸಿಗಾ ನಾಯಿಯನ್ನು ಕೇಳಿರುವುದು ವೈರಲ್​ ಆಗಿದೆ. ಚೀನಾದ ಸಾಮಾಜಿಕ ಜಾಲತಾಣ ವೇದಿಕೆಗಳನ್ನು ಈ ವಿಡಿಯೋ ವೈರಲ್​ ಆಗಿದೆ.

    ಇದನ್ನೂ ಓದಿರಿ: 19 ಸಿಡಿಗಳಿವೆ ಎಂದು ನಾನೆಲ್ಲೂ ಹೇಳಿಲ್ಲ: ರಾಜಶೇಖರ ಮುಲಾಲಿ

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೃಗಾಲಯ ಸಿಬ್ಬಂದಿ ಮೊದಲು ಆ ಬೋನಿನಲ್ಲಿ ತೋಳವಿತ್ತು. ಆದರೆ, ತೋಳ ವಯಸ್ಸಾಗಿ ಮೃತಪಟ್ಟಿದ್ದರಿಂದ ನಾಯಿಯನ್ನು ತಾತ್ಕಾಲಿಕವಾಗಿ ಒಳಗಡೆ ಇಡಲಾಗಿತ್ತು ಎಂದಿದ್ದಾರೆ.

    ಇನ್ನು ಕರೊನಾ ಹೊಡೆತದಿಂದಾಗಿ ಮೃಗಾಲಯ ತತ್ತರಿಸಿ ಹೋಗಿದೆ. ಪ್ರವಾಸಿಗರು ಸಹ ಜೂ ಕಡೆಗೆ ಮುಖ ಮಾಡುತ್ತಿಲ್ಲ. ನಾಯಿಯನ್ನು ತೋಳ ಎಂದು ಬಿಂಬಿಸುತ್ತಿರುವ ಘಟನೆ ಚೀನಾದಲ್ಲಿ ಇದೇ ಮೊದಲೇನಲ್ಲ. ಈ ಹಿಂದೆಯು ಇಂತಹ ಘಟನೆಗಳು ನಡೆದಿವೆ. (ಏಜೆನ್ಸೀಸ್​)

    ಉತ್ತರಾಖಂಡ ಸಿಎಂ ಸ್ಥಾನಕ್ಕೆ ತಿರತ್ ಸಿಂಗ್ ರಾವತ್ ಆಯ್ಕೆ: ಸಂಜೆ 4ಕ್ಕೆ ಪ್ರಮಾಣ ವಚನ ಸ್ವೀಕಾರ

    ಕೆಂಪು ಕೋಟೆ ಹಿಂಸಾಚಾರ : ಪರಾರಿ ಆಗುತ್ತಿದ್ದ ಡಚ್​ ಪ್ರಜೆ ಪೊಲೀಸರ ವಶಕ್ಕೆ

    ಬಾಯ್​ಫ್ರೆಂಡ್​ ಜತೆ 1 ಗಂಟೆ ಮಾತನಾಡಿ ಸಂಪರ್ಕ ಕಡಿದುಕೊಂಡ ಯುವತಿ ಮನೆಯಲ್ಲೇ ದುರಂತ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts