More

    ಚೀನಾದ 20 ಯುದ್ಧವಿಮಾನ ತೈವಾನ್​ ಜಲಗಡಿ ಪ್ರವೇಶ!

    ತೈಪೆ: ಚೀನಾದ 20 ಯುದ್ಧವಿಮಾನಗಳು ತೈವಾನ್ ಜಲಗಡಿ ರೇಖೆ ಒಳಪ್ರವೇಶಿಸಿದ್ದು, ಇದರಿಂದ ಬೆಚ್ಚಿಬಿದ್ದ ಆದೇಶದ ರಕ್ಷಣಾ ಸಚಿವಾಲಯವು ತನ್ನ ವಾಯುಪಡೆಯನ್ನು ನಿಯೋಜಿಸಿತು.

    ಇದನ್ನೂ ಓದಿ: ದೆಹಲಿ ವಾಯುಮಾಲಿನ್ಯಕ್ಕೆ ಒಣಹುಲ್ಲು ಸುಡುವುದೂ ಕಾರಣ!

    ಬೀಜಿಂಗ್ ದ್ವೀಪವು ಚೀನಾ ಮತ್ತು ತೈವಾನ್​ನ ನಡುವಿನ ಅನೌಪಚಾರಿಕ ಗಡಿರೇಖೆಯಾಗಿದೆ. ಅನಿರ್ದಿಷ್ಟ ಸಂಖ್ಯೆಯ ಫೈಟರ್ ಜೆಟ್‌ಗಳು ಮತ್ತು ಡ್ರೋನ್‌ಗಳು ಒಳಗೊಂಡಂತೆ ಚೀನಾದ ವಿಮಾನಗಳು ಗುರುವಾರ ಮಧ್ಯಾಹ್ನ ತೈವಾನ್‌ನ ಉತ್ತರ, ಮಧ್ಯ ಮತ್ತು ನೈಋತ್ಯ ವಲಯವನ್ನು (ಎಡಿಐಜೆಡ್) ಪ್ರವೇಶಿಸಿದವು. ಇದನ್ನು ವಾಯುಪಡೆ ಗುರುತಿಸಿತು ಎಂದು ತೈವಾನ್​ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

    ಚೀನಾದ ವಿಮಾನಗಳಿಗೆ ಎಚ್ಚರಿಕೆ ನೀಡಲು ತೈವಾನ್ ಗಡಿ ರೇಖೆ ಬಳಿ ಸೇನೆಯ ವಿಮಾನಗಳನ್ನು ನಿಯೋಜಿಸಿತು. ಕ್ಷಿಪಣಿ ವ್ಯವಸ್ಥೆಯನ್ನೂ ಸಜ್ಜುಗೊಳಿಸಲಾಯಿತು. ಸ್ವತಂತ್ರ ದೇಶವಾಗಿರುವ ತೈವಾನ್ ತನ್ನ ಭೂಪ್ರದೇಶವೆಂದು ಚೀನಾ ಮೊದಲಿನಿಂದಲೂ ಹೇಳಿಕೊಳ್ಳುತ್ತಿದೆ. ಹೇಗಾದರೂ ಮಾಡಿ ತೈವಾನ್​ ತನ್ನ ಕೈವಶಮಾಡಿಕೊಳ್ಳಬೇಕೆಂದು ಹವಣಿಸುತ್ತಿರುವ ಚೀನಾ ಇತ್ತೀಚಿನ ವರ್ಷಗಳಲ್ಲಿ ನಿತ್ಯ ವಾಯುಪಡೆಯ ವಿವಿಧ ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ ದೇಶದ ನೈಋತ್ಯ ಭಾಗದಲ್ಲಿ ಬುಧವಾರದಿಂದ ಗುರುವಾರದವರೆಗೆ 37 ಚೀನೀ ವಿಮಾನಗಳ ಹಾರಾಟ ನಡೆದಿದೆ. ಈ ವಾರ ಚೀನಾದ ಮಿಲಿಟರಿ ಚಟುವಟಿಕೆಯು ಗಡಿಯಲ್ಲಿ ಹೆಚ್ಚಿದೆ ಎಂದು ತೈವಾನ್ ಆರೋಪಿಸಿದೆ.

    ತೈವಾನ್​ ಮೇಲೆ ಚೀನಾ ಮಿಲಿಟರಿ ಒತ್ತಡ ಹೆಚ್ಚಿಸುತ್ತಿದೆ. ಇದನ್ನು ತಗ್ಗಿಸಬೇಕೆಂದು ಅಮೆರಿಕಾ ಚೀನಾದ ಮೇಲೆ ಒತ್ತಡ ಹೇರುತ್ತಿದೆ. ಬೀಜಿಂಗ್ ಮತ್ತು ವಾಷಿಂಗ್ಟನ್ ನಡುವೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉನ್ನತ ಮಟ್ಟದ ಮಾತುಕತೆ ಸಹ ನಡೆಯುತ್ತಿದೆ.

    ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಕಳೆದ ವಾರ ಅಮೆರಿಕದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಇದರಲ್ಲಿ ಎರಡು ಕಡೆಯವರು ಮುಂದಿನ ದಿನಗಳಲ್ಲಿ ಸರಣಿ ಮಾತುಕತೆ ನಡೆಸಲು ಒಪ್ಪಿಕೊಂಡಿದ್ದಾರೆ. ಈ ವಾರದ ಆರಂಭದಲ್ಲಿ ಅಮೆರಿಕಾ ರಾಯಲ್ ಕೆನಡಿಯನ್ ಯುದ್ಧ ನೌಕೆಯನ್ನು ತೈವಾನ್ ಜಲಸಂಧಿಗೆ ರವಾನಿಸಿತ್ತು. ಹೀಗಾಗಿ ಚೀನಾ ಸೇನೆ ಗಡಿಯಲ್ಲಿ ಸೇನಾ ಯುದ್ಧ ವಿಮಾನಗಳನ್ನು ಹಾರಿಸುವ ತಂತ್ರಗಾರಿಕೆ ಅನುಸರಿಸುತ್ತಿದೆ ಎನ್ನಲಾಗಿದೆ.

    ಉದ್ಯೋಗಿಗಳ ಯೋಗಕ್ಷೇಮದದಲ್ಲಿ ಜಪಾನ್​​ಗೆ ಕೊನೆಯ ಸ್ಥಾನ, ಹಾಗಾದರೆ ಭಾರತ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts