More

    ಖಜಕಸ್ತಾನದಲ್ಲಿ ಕರೊನಾಗಿಂತಲೂ ಮಾರಕವಾದ ಅಪರಿಚಿತ ನ್ಯುಮೋನಿಯಾದ ಹಾವಳಿ

    ಬೀಜಿಂಗ್​: ಖಜಕಸ್ತಾನದಲ್ಲಿ ಕರೊನಾಗಿಂತ ಮಾರಕವಾದ ಅಪರಿಚಿತ ನ್ಯುಮೋನಿಯಾ ಸೋಂಕು ಸಾಂಕ್ರಾಮಿಕವಾಗಿದೆ. ಜೂನ್​ವೊಂದರಲ್ಲೇ 600ಕ್ಕೂ ಹೆಚ್ಚು ಜನರು ಇದಕ್ಕೆ ಬಲಿಯಾಗಿದ್ದಾರೆ ಎಂದು ಖಜಕಸ್ತಾನದಲ್ಲಿನ ಚೀನಾದ ರಾಯಭಾರ ಕಚೇರಿ ಹೇಳಿದೆ.

    ಖಜಕಸ್ತಾನದಲ್ಲಿರುವ ತನ್ನ ಪ್ರಜೆಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಿರುವ ಚೀನಾ ರಾಯಭಾರ ಕಚೇರಿ, ಈ ಸೋಂಕಿಗೆ ತುತ್ತಾದವರು ಸಾಯುವ ಪ್ರಯಾಣ ಹೆಚ್ಚಾಗಿದೆ ಎಂದು ಹೇಳಿದೆ.

    ಇದನ್ನೂ ಓದಿ: ಚೀನಾದ ಕಪಿಮುಷ್ಠಿಯಲ್ಲಿ ನೇಪಾಳ- ಭಾರತದ ಟಿ.ವಿ.ಚಾನೆಲ್‌ಗಳು ಬ್ಯಾನ್‌!

    ಖಜಕಸ್ತಾನ ತನ್ನ ವಾಯವ್ಯ ಭಾಗದಲ್ಲಿ ಚೀನಾದ ಕ್ಸಿನ್ಜಿಯಾಂಗ್​ ಬಳಿ ಗಡಿಯನ್ನು ಹಂಚಿಕೊಂಡಿದೆ. ಕ್ಸಿಜಿಯಾಂಗ್​ ಉಯ್ಗುರು ಸ್ವಾಯತ್ತ ಪ್ರದೇಶವಾಗಿದೆ.
    ಈ ವರ್ಷದ ಮೊದಲ ಆರು ತಿಂಗಳಲ್ಲಿ ಖಜಕಸ್ತಾನದಲ್ಲಿ ಈ ಅಪರಿಚಿತ ನ್ಯುಮೋನಿಯಾಕ್ಕೆ 1,772 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜೂನ್​ವೊಂದರಲ್ಲೇ 600 ಜನ ಇದಕ್ಕೆ ಬಲಿಯಾಗಿದ್ದಾರೆ. ಈ ನ್ಯುಮೋನಿಯಾ ಕೋವಿಡ್​-19ಕ್ಕಿಂತಲೂ ಮಾರಕವಾಗಿದೆ ಎಂದು ಚೀನಾ ಹೇಳಿದೆ.

    ಅಲ್ಲಗಳೆದ ಖಜಕಸ್ತಾನ: ತಮ್ಮ ನಾಡಿನಲ್ಲಿ ಯಾವುದೇ ರೀತಿಯ ಅಪರಿಚಿತ ನ್ಯುಮೋನಿಯಾ ಸಾಂಕ್ರಾಮಿಕ ಹಬ್ಬಿಲ್ಲ. ಈ ಕುರಿತು ಚೀನಾದ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳೆಲ್ಲವೂ ಸುಳ್ಳು ಮತ್ತು ಆಧಾರರಹಿತವಾಗಿರುವಂಥದ್ದು ಎಂದು ಖಜಕಸ್ತಾನದ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
    ರಾಷ್ಟ್ರದಲ್ಲಿ ಬ್ಯಾಕ್ಟೀರಿಯಲ್​, ಫಂಗಲ್​ ಮತ್ತು ವೈರಲ್​ ನ್ಯುಮೋನಿಯಾ ಸೋಂಕು ಇದೆ. ಇದರಲ್ಲಿ ಅಸ್ಪಷ್ಟವಾದ ಪ್ರಕರಣಗಳೂ ಇವೆ. ಇವೆಲ್ಲವೂ ವಿಶ್ವ ಆರೋಗ್ಯ ಸಂಸ್ಥೆ ವಿವರಿಸಿರುವ ನ್ಯುಮೋನಿಯಾದ ವ್ಯಾಪ್ತಿಯಲ್ಲೇ ಇವೆ ಎಂದು ಹೇಳಿದೆ.

    ‘ಸೂಪರ್​ ಮಾಮ್’ ಹುಲಿ ಬದುಕಿನ ರೋಚಕಥೆ ನೀವೊಮ್ಮೆ ನೋಡಲೇ ಬೇಕು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts