More

    ‘ಸೂಪರ್​ ಮಾಮ್’ ಹುಲಿ ಬದುಕಿನ ರೋಚಕತೆ ನೀವೊಮ್ಮೆ ನೋಡಲೇ ಬೇಕು…

    ಮಧ್ಯಪ್ರದೇಶ: ಕಾಡಿನ ಕೆರೆಯಲ್ಲಿ ಮೂರು ಮರಿಗಳೊಂದಿಗೆ ತಾಯಿ ಹುಲಿ ನೀರು ಕುಡಿಯುತ್ತಿರುವ ಫೋಟೋ ಎಲ್ಲೆಡೆ ವೈರಲ್​ ಆಗುತ್ತಿದೆ. ಈ ದೃಶ್ಯವನ್ನು ಸೆರೆಹಿಡಿದ ವೈಲ್ಡ್ ಲೈಫ್​ ಫೋಟೋಗ್ರಾಫರ್​ ಸರೋಶ್ ಅವರು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ‘ಲವ್​ಯೂ ಸೂಪರ್ ಮಾಮ್’, ‘ಪೆಂಚ್ ಕ್ವೀನ್​’.. ಎಂದೆಲ್ಲ ನೆಟ್ಟಿಗರು ಕಮೆಂಟ್ಸ್ ಕೊಡುತ್ತಿದ್ದಾರೆ.

    ಹೌದು, ಇದು ಅಂತಿಂಥ ಹುಲಿ ಅಲ್ಲ. ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೊಂದರ ಸ್ಟಾರ್​ ಆಫ್​ ಅಟ್ರ್ಯಾಕ್ಷನ್​. ಹದಿನಾಲ್ಕೂವರೆ ವರ್ಷ ವಯಸ್ಸಿನ ಹುಲಿ ಇದುವರೆಗೂ ಬರೋಬ್ಬರಿ ಮೂವತ್ತು ಮರಿಗಳಿಗೆ ಜನ್ಮನೀಡಿದ್ದು, ‘ಸೂಪರ್​ ಅಮ್ಮ’ ಎನಿಸಿಕೊಂಡಿದೆ. ಕ್ವೀನ್​ ಆಫ್​ ಪೆಂಚ್ ಎಂದೇ ಕರೆಯಲ್ಪಡುವ ಈ ಹುಲಿಯ ಮತ್ತೊಂದು ಹೆಸರು ‘ಕಾಲರ್​ವಲ್ಲಿ ಬಾಗಿನ್​’. ಇದನ್ನೂ ಓದಿರಿ ಒಂದು ವಿಭಿನ್ನ ಪ್ರತಿಭಟನೆ… ತಮ್ಮ ವಿವಾಹಕ್ಕೆ ಕುಂದು ತಂದ ಲಾಕ್​ಡೌನ್ ನಿಯಮಾವಳಿಗಳ ವಿರುದ್ಧ ಇಟಲಿಯ ಯುವತಿಯರು ಮಾಡಿದ್ದೇನು?

    2005ರ ಅಕ್ಟೋಬರ್​ನಲ್ಲಿ ಜನಿಸಿದ ಕಾಲರ್​ವಲ್ಲಿ ಬಾಗಿನ್​ಗೆ 2008ರಿಂದ 2019ರವರೆಗೂ ಒಟ್ಟು ಎಂಟು ಬಾರಿ ಹೆರಿಗೆಯಾಗಿದ್ದು, 30 ಮರಿಗಳು ಜನಿಸಿವೆ. ಅಂದಹಾಗೆ ಈ ‘ಕಾಲರ್​ವಲ್ಲಿ ಬಾಗಿನ್​’ ಇರೋದು ಭಾರತದ ಪ್ರಮುಖ ಹುಲಿ ನಿಕ್ಷೇಪಗಳಲ್ಲಿ ಒಂದಾದ ಪೆಂಚ್ ನ್ಯಾಷನಲ್ ಪಾರ್ಕ್(ಪೆಂಚ್ ಟೈಗರ್ ರಿಸರ್ವ್) ನಲ್ಲಿ. ಈ ಉದ್ಯಾನವನ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳ ಮಧ್ಯೆ ಇದ್ದು, ಬಹುತೇಕ ಭಾಗ ಮಧ್ಯಪ್ರದೇಶ ವ್ಯಾಪ್ತಿಯಲ್ಲಿದೆ.

    ಪೆಂಚ್‌ ಟೈಗರ್​ ಅರಣ್ಯಪ್ರದೇಶದಲ್ಲಿ ಮೊದಲ ಬಾರಿಗೆ ರೇಡಿಯೋ ಕಾಲರ್​ ಅಳವಡಿಸಿದ್ದು ‘ಸೂಪರ್​ ಅಮ್ಮ’ ಎಂಬ ಹುಲಿಗೆ. 2008ರ ಮಾರ್ಚ್​ನಲ್ಲಿ ಈ ಹುಲಿಗೆ ರೇಡಿಯೋ ಕಾಲರ್​ ಹಾಕಲಾಗಿತ್ತು. ಹಾಗಾಗಿ ಇದಕ್ಕೆ ಕಾಲರ್​ವಲ್ಲಿ ಬಾಗಿನ್​ ಎಂದು ಹೆಸರು ಇಡಲಾಯಿತು.

    ಭಾರತದ ಈ ರಾಷ್ಟ್ರೀಯ ಉದ್ಯಾನಕ್ಕೆ ‘ಪೆಂಚ್’ ಎಂಬ ಹೆಸರು ಬರೋದಕ್ಕೂ ಒಂದು ಕಾರಣವಿದೆ. ಈ ಕಾಡಿನಲ್ಲಿ ಉತ್ತರದಿಂದ ದಕ್ಷಿಣಕ್ಕೆ ‘ಪೆಂಚ್’ ಎಂಬ ನದಿ ಹರಿಯುತ್ತಿದೆ. ಆಗಾಗಿ ಈ ಹೆಸರು ಬಂದಿದೆ.

    ಇದೇ ತಿಂಗಳ(ಜುಲೈ) 6ರಂದು ಕಾಲರ್​ವಲ್ಲಿ ತನ್ನ ಮರಿಗಳೊಂದಿಗೆ ಕೆರೆಯಲ್ಲಿ ನೀರು ಕುಡಿಯುತ್ತಿದ್ದ ದೃಶ್ಯವನ್ನು ವೈಲ್ಡ್ ಲೈಫ್​ ಫೋಟೋಗ್ರಾಫರ್​ ಸರೋಶ್ ಅವರು ಸೆರೆ ಹಿಡಿದಿದ್ದು, ಈ ಫೋಟೋಗಳು ಸಖತ್​ ವೈರಲ್​ ಆಗಿವೆ. ತನ್ನ ಮರಿಗಳೊಂದಿಗೆ ಕಾಲರ್​ವಲ್ಲಿಯನ್ನು ಕಂಡ ಪ್ರಾಣಿಪ್ರಿಯರು ಫುಲ್​ ಖುಷಿಯಾಗಿದ್ದಾರೆ.

    ಬೆಂಗಳೂರಲ್ಲಿ 1928ರಲ್ಲೇ ಕಾಣಿಸಿಕೊಂಡಿತ್ತೊಂದು ರೋಗ… ಆಗಿನ ಕೌನ್ಸಿಲ್ ಆಡಳಿತ ಹೊರಡಿಸಿದ್ದ ಆದೇಶ ಪ್ರತಿ ಈಗ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts