More

  ಕೆಎಸ್​ಆರ್​ಟಿಸಿ ಸಿಬ್ಬಂದಿಗೆ 1 ವರ್ಷ ವೇತನ ರಹಿತ ರಜೆ, ಲಕ್ಷಕ್ಕೂ ಹೆಚ್ಚು ನೌಕರರ ಪಾಲಿಗೆ ಮರಣಶಾಸನ?

  ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಮುಂದಿನ 1 ವರ್ಷ ವೇತನ ಮತ್ತು ಭತ್ಯೆ ರಹಿತ ರಜೆ ಮಂಜೂರು ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ.

  ಸಂಸ್ಥೆಯ ನಾಲ್ಕೂ ನಿಗಮಗಳಿಗೆ ಎದುರಾಗಿರುವ ಆರ್ಥಿಕ ಸಂಕಷ್ಟ ಹಾಗೂ ನೌಕರರ ಆರೋಗ್ಯ ಸಂರಕ್ಷಣೆಗಾಗಿ ಸಿಬ್ಬಂದಿಗೆ 1 ವರ್ಷ ರಜೆ ಮಂಜೂರಿಗೆ ಚಿಂತನೆ ನಡೆಸಲಾಗಿದೆ. ಇದನ್ನೂ ಓದಿರಿ video/ ಧಾರಾಕಾರ ಮಳೆಯಲ್ಲೂ ಪೇದೆ ಮಾಡಿದ ಕೆಲಸಕ್ಕೆ ಸಿಕ್ತು ಭರ್ಜರಿ ಮೆಚ್ಚುಗೆ!

  ಕರೊನಾಗಿಂತ ಮುಂಚೆ ನಾಲ್ಕು ನಿಗಮಗಳ ಬಸ್​ಗಳಲ್ಲಿ ನಿತ್ಯ ಸುಮಾರು 1 ಕೋಟಿ ಜನರು ಪ್ರಯಾಣಿಸುತ್ತಿದ್ದರು. ಆದರೀಗ ಆ ಸಂಖ್ಯೆ 15 ಲಕ್ಷಕ್ಕಿಂತ ಕಡಿಮೆಯಾಗಿದೆ. ಹೀಗಾಗಿ ನಿಗಮಗಳು 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ಆರ್ಥಿಕ ನಷ್ಟಕ್ಕೀಡಾಗಿವೆ.

  ಅಲ್ಲದೆ ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದ್ದು, ಸಿಬ್ಬಂದಿ ಭಯದಲ್ಲೇ ಕೆಲಸ ಮಾಡುವಂತಾಗಿದೆ. ಹೀಗಾಗಿ, ಅಗತ್ಯವಿರುವವರಿಗೆ ವೇತನ ಮತ್ತು ಭತ್ಯೆ ರಹಿತ ರಜೆ ನೀಡಲು ಸಾಧ್ಯವೇ ಎಂಬ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಬಿಎಂಟಿಸಿ, ಎನ್​ಡಬ್ಲ್ಯುಕೆಆರ್​ಟಿಸಿ, ಎನ್​ಇಕೆಆರ್​ಟಿಇಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಪತ್ರ ಬರೆದಿದ್ದಾರೆ.

  ಆದರೆ, ಕೆಎಸ್​ಆರ್​ಟಿಸಿ ಸಿದ್ಧಪಡಿಸಿರುವ ಈ ಪ್ರಸ್ತಾವನೆಗೆ ನೌಕರರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಇದು ಅನುಷ್ಠಾನ ಆದಲ್ಲಿ ಸಾರಿಗೆ ಸಂಸ್ಥೆಯಲ್ಲಿನ 1.30 ಲಕ್ಷ ನೌಕರರಿಗೆ ಮರಣಶಾಸನವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿವೆ.

  ಇದನ್ನೂ ಓದಿರಿ ಬೆಂಗಳೂರಲ್ಲಿ 1928ರಲ್ಲೇ ಕಾಣಿಸಿಕೊಂಡಿತ್ತೊಂದು ರೋಗ… ಆಗಿನ ಕೌನ್ಸಿಲ್ ಆಡಳಿತ ಹೊರಡಿಸಿದ್ದ ಆದೇಶ ಪ್ರತಿ ಈಗ ವೈರಲ್

  ಷರತ್ತು ಅನ್ವಯ: ರಜೆ ಪಡೆಯುವ ಸಿಬ್ಬಂದಿ ಕಾಯಂ ನೌಕರರಾಗಿರಬೇಕು, ರಜೆ ಅವಧಿಯನ್ನು ಸ್ಪಷ್ಟವಾಗಿ ನಮೂದಿಸಬೇಕು. ವಿಶೇಷ ರಜೆ, ಬೇರೆ ರಜೆಗಳೊಂದಿಗೆ ಸೇರ್ಪಡೆಗೊಳಿಸಬಾರದು… ಹೀಗೆ ಹಲವು ನಿಬಂಧನೆಗಳನ್ನು ಹೇರಲಾಗುತ್ತದೆ. ರಜೆ ಅವಧಿಯಲ್ಲಿ ಯಾವುದಾದರೂ ಕಾನೂನು ತೊಡಕಿಗೆ ಸಿಲುಕಿದರೆ, ಅದಕ್ಕೆ ನಿಗಮಗಳು ಹೊಣೆಯಾಗುವುದಿಲ್ಲ. ಈ ಕುರಿತಂತೆ ರಜೆ ಪಡೆಯುವ ನೌಕರ ಇಂಡೆಮಿನಿಟಿ ಬಾಂಡ್​ ನೀಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

  ಒಂದೊಮ್ಮೆ ರಜೆ ಅವಧಿ ಪೂರ್ಣಗೊಳ್ಳದಿದ್ದರೂ, ವಾಪಸ್​ ಕೆಲಸಕ್ಕೆ ಬರುತ್ತೇನೆಂದರೆ ನಿಗಮದ ಹಿರಿಯ ಅಧಿಕಾರಿಗಳು ತಿಳಿಸುವವರೆಗೂ ಕಾಯಬೇಕು. ಷರತ್ತನ್ನು ಉಲ್ಲಂಘಿಸಿದರೂ ಸೇವೆಯಿಂದ ವಜಾ ಮಾಡುವ ಅಧಿಕಾರ ಅಧಿಕಾರಿಗಳಿಗೆ ಇರಲಿದೆ. ಅಲ್ಲದೆ, ರಜೆ ಅವಧಿಯಲ್ಲಿ ನಿಗಮದಿಂದ ಯಾವುದೇ ರೀತಿಯ ಆರ್ಥಿಕ ನೆರವನ್ನು ನೌಕರರಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

  ಇದನ್ನೂ ಓದಿರಿ ನಟ ಶಿವರಾಜ್​ಕುಮಾರ್​ ನಿವಾಸಕ್ಕೆ ಡಿಕೆಶಿ ಭೇಟಿ

  ನೌಕರರಿಗೆ ಒಂದು ವರ್ಷ ವೇತನ ಹಾಗೂ ಭತ್ಯೆ ರಹಿತ ರಜೆ ನೀಡುವ ಪ್ರಸ್ತಾವನೆ ಅಮಾನವೀಯ ಹಾಗೂ ಅಸಾಂವಿಧಾನಿಕ. ಕೂಡಲೇ ಈ ಪ್ರಸ್ತಾವನೆ ಹಿಂಪಡೆಯದಿದ್ದರೆ ಹೊರಾಟ ನಡೆಸಲಾಗುವುದು ಎಂದು ಕೆಎಸ್​ಆರ್​ಟಿಸಿ ಸ್ಟಾಫ್ ಆ್ಯಂಡ್​ ವರ್ಕರ್​ ಯೂನಿಯನ್​ ಅಧ್ಯಕ್ಷ ಎಚ್​.ವಿ.ಅನಂತಸುಬ್ಬರಾವ್​ ಎಚ್ಚರಿಸಿದ್ದಾರೆ.

  ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕೆಎಸ್​ಆರ್​ಟಿಸಿ ಎಂಡಿ ಶಿವಯೋಗಿ ಸಿ.ಕಳಸದ, ಈ ಪತ್ರವನ್ನು ಸಾರಿಗೆ ನಿಗಮಗಳಲ್ಲಿ ಅಭಿಪ್ರಾಯ, ಸಲಹೆ ಕೋರಿ ರವಾನಿಸಲಾಗಿದೆ. ಈ ಪತ್ರ ಇನ್ನೂ ಅಭಿಪ್ರಾಯ ಕೋರುವ ಹಂತದಲ್ಲಿದೆ. ಇದರಲ್ಲಿ ಯಾವುದೇ ಒತ್ತಡ ಅಥವಾ ನಿರ್ಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  ಈ ಹಿಂದೆಯೂ ಸಾರಿಗೆ ನಿಗಮಗಳಲ್ಲಿ ನೌಕರರು ಹೆಚ್ಚಿನ ವ್ಯಾಸಂಗ, ಆರೋಗ್ಯ ಹಾಗೂ ಇತರೆ ತುರ್ತು ಪರಿಸ್ಥಿತಿಯಲ್ಲಿ ಎರಡು ವರ್ಷಗಳ ಕಾಲ ವೇತನ ರಹಿತ ರಜೆ ಪಡೆಯಲು ಅವಕಾಶವಿತ್ತು. ಅದರನ್ವಯ ಕೆಲವು ಅಧಿಕಾರಿಗಳು ಹೆಚ್ಚಿನ ವಿದ್ಯಾರ್ಹತೆಗೆ ತೆರಳಿ ಮತ್ತೆ ವಾಪಸ್ ಬಂದಿರುತ್ತಾರೆ. ಕೆಲವರು ಕೆಎಎಸ್​ಗೆ ಆಯ್ಕೆಯಾಗಿದ್ದಾರೆ. ಇದೀಗ ಆ ಸೌಲಭ್ಯವನ್ನು ಮುಂದುವರಿಸುವ ಸಂಬಂಧ ಅಭಿಪ್ರಾಯ ಕೋರಿ ಪತ್ರ ರವಾನಿಸಲಾಗಿದೆಯಂತೆ.

  ಜಮೀನು ಸರ್ವೇ ಮಾಡಲು ಬಂದ ತಹಸೀಲ್ದಾರ್​ ಎದೆಗೆ ಚಾಕು ಇರಿದು ಕೊಂದ ನಿವೃತ್ತ ಶಿಕ್ಷಕ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts