More

    ಭಾರತದ ವಿರುದ್ಧ ಚೀನಾ ಸೈಬರ್​ ದಾಳಿ; ಬ್ಯಾಂಕಿಂಗ್​ ವ್ಯವಸ್ಥೆ, ಎಟಿಎಂಗಳೇ ಗುರಿ

    ನವದೆಹಲಿ: ಲಡಾಖ್​ ಗಡಿಯಲ್ಲಿ ಹಿಂಸಾತ್ಮಕ ಸಂಘರ್ಷದ ಬಳಿಕ ಮತ್ತೊಂದು ದಾಳಿಯನ್ನು ಚೀನಾ ಕಳೆದೆರಡು ದಿನಗಳಿಂದ ನಡೆಸುತ್ತಿದೆ. ಆದರೆ, ಅದರಲ್ಲಿ ಯಶಸ್ಸು ಕಂಡಿಲ್ಲ ಎಂದು ಗುಪ್ತಚರ ಇಲಾಖೆ ವರದಿ ಮಾಡಿದೆ.

    ಈ ಬಾರಿ ಚೀನಾ ಸೈಬರ್​ ದಾಳಿ ನಡೆಸುತ್ತಿದೆ. ಸರ್ಕಾರಿ ವೆಬ್​ಸೈಟ್​ಗಳು, ಬ್ಯಾಂಕಿಂಗ್​ ವ್ಯವಸ್ಥೆ ಹಾಗೂ ಎಟಿಎಂಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗುತ್ತಿದೆ ಎಂದು ಸೈಬರ್​ ತಜ್ಞರು ಹೇಳಿದ್ದಾರೆ.

    ಇದನ್ನೂ ಓದಿ; ಗಡಿ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಯೋಧರೆಷ್ಟು? ಪತ್ತೆ ಹಚ್ಚಿದೆ ಅಮೆರಿಕ ಗುಪ್ತಚರ ಸಂಸ್ಥೆ 

    ಇದನ್ನು ಡಿಸ್ಟ್ರಿಬ್ಯುಟೆಡ್​ ಡಿನಾಯಲ್​ ಆಫ್​ ಸರ್ವೀಸ್​ (ಡಿಡಿಒಎಸ್​) ಎಂದು ಕರೆಯಲಾಗುತ್ತದೆ. ಮಾಹಿತಿ ವೆಬ್​ಸೈಟ್​ಗಳು, ಪಾವತಿ ವ್ಯವಸ್ಥೆ ಮೊದಲಾದವುಗಳ ಮೇಲೆ ದಾಳಿ ನಡೆಸುತ್ತಿದೆ. ಕೃತಕವಾಗಿ ಇಂಟರ್​ನೆಟ್​ ಟ್ರಾಫಿಕ್​ನ್ನು ಹೆಚ್ಚಿಸಿ ಸೇವೆಯಲ್ಲಿ ವ್ಯತ್ಯಯವಾಗುವಂತೆ ಮಾಡುವುದು. ಮುಖ್ಯವಾಗಿ ಇವರ ಗುರಿ ವೆಬ್​ಸೈಟ್​, ಬ್ಯಾಂಕಿಂಗ್​ ವ್ಯವಸ್ಥೆ ಹಾಗೂ ಎಟಿಎಂಗಳಾಗಿವೆ ಎಂದು ತಜ್ಞರು ಹೇಳಿದ್ದಾರೆ.

    ಈ ಮೊದಲು ಪಾಕಿಸ್ತಾನ ಮಧ್ಯ ಯುರೋಪ್​ನಿಂದ ಬಾಡಿಗೆಗೆ ಪಡೆದ ಹ್ಯಾಕರ್​ಗಳಿಂದ ಸೈಬರ್​ ದಾಳಿ ನಡೆಸುತ್ತಿತ್ತು. ಆದರೆ, ಕಳೆದೆರಡು ದಿನಗಳಿಂದ ಚೀನಾದಿಂದಲೇ ಅದೂ ಕೂಡ ಸಿಚುವಾನ್​ ಪ್ರಾಂತ್ಯದ ರಾಜಧಾನಿ ಚೆಂಗ್ಡುವಿನಿಂದ ದಾಳಿ ನಡೆಸಲಾಗುತ್ತಿದೆ. ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿಯ ಕೇಂದ್ರದ ಪ್ರಮುಖ ಘಟಕವೂ ಇಲ್ಲಿದೆ. ಅಲ್ಲದೇ, ಹೆಚ್ಚಿನ ಹ್ಯಾಕರ್​ಗಳು ಇಲ್ಲಿದ್ದಾರೆ.

    ಇದನ್ನೂ ಓದಿ; ಭಾರತ- ಚೀನಾ ಸಂಘರ್ಷದ ವಿಡಿಯೋ; ಗಾಯಾಳು ಯೋಧನ ರಕ್ಷಣೆಗೆ ನಿಂತ ಜತೆಗಾರರು

    ಆದರೆ, ಚೀನಾದ ಸೈಬರ್​ ದಾಳಿ ಈವರೆಗೆ ಯಶಸ್ವಿಯಾಗಿಲ್ಲ. ಆದರೆ, ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ತಜ್ಞರು ಹೇಳಿದ್ದಾರೆ. ಜತೆಗೆ ಚೀನಾದ 52 ಆ್ಯಪ್​ಗಳ ಬಳಕೆ ನಿಲ್ಲಿಸಬೇಕೆಂದು ಸೂಚಿಸಿದ್ದಾರೆ.

    ರಾಷ್ಟ್ರೀಯ ಭದ್ರತಾ ಮಂಡಳಿ ನೀಡಿದೆ ಎಚ್ಚರಿಕೆ …! ಈ ಚೀನಿ ಆ್ಯಪ್​ಗಳಿದ್ದರೆ ಅಪಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts