More

    ಇಂದಿನ ಮಕ್ಕಳಿಗೆ ಮಾದರಿ ವ್ಯಕ್ತಿಗಳ ಕೊರತೆ

    ಶಿವಮೊಗ್ಗ: ಇಂದು ವಿದ್ಯಾರ್ಥಿಗಳ ಎದುರಿಗೆ ಸಮರ್ಪಕವಾದ ಮಾದರಿ ವ್ಯಕ್ತಿಗಳೇ ಇಲ್ಲದಂತಾಗಿದೆ. ಹೀಗಾಗಿ ಅವರಿಗೆ ಯಾರನ್ನು ಅನುಕರಿಸಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

    ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಪೀಳಿಗೆಗೆ ಮಾದರಿಯ ಕೊರತೆ ಎದುರಾಗಿದೆ. ಆದ್ದರಿಂದ ಸಮರ್ಥ ಮಾರ್ಗದರ್ಶನವೂ ಸಿಗುತ್ತಿಲ್ಲ ಎಂದರು.
    ಜಿಲ್ಲಾ ಕಸಾಪದಲ್ಲಿ 150ಕ್ಕೂ ಹೆಚ್ಚು ದತ್ತಿಗಳಿವೆ. ಆದರೆ ಇದರಿಂದ ಬರುವ ಬಡ್ಡಿಯಿಂದ ಪ್ರತ್ಯೇಕವಾಗಿ ದತ್ತಿ ಉಪನ್ಯಾಸ ಏರ್ಪಡಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಎರಡು-ಮೂರು ದತ್ತಿಗಳನ್ನು ಸೇರಿಸಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
    ಅರ್ಚಕ ಸಂದೇಶ ಉಪಾಧ್ಯ ಅವರು ತಮ್ಮ ತಂದೆ ಶಂಕರನಾರಾಯಣ ಉಪಾಧ್ಯ ಅವರ ಸ್ಮರಣೆಗಾಗಿ ನೀಡಿರುವ ದತ್ತಿಯ ಆಶಯದಂತೆ ಸಮಾಜ ಸೇವೆಯ ಸಾರ್ಥಕತೆ ವಿಚಾರವಾಗಿ ವಕೀಲೆ ಆರ್.ಪರಿಮಳಾ ಮಾತನಾಡಿ, ಇಂದು ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯ, ಆರೋಗ್ಯ ಸೌಲಭ್ಯಗಳು ಉಚಿತವಾಗಿ ದೊರೆಯುತ್ತಿದೆ. ಬೇರೆ ಬೇರೆ ಸಂಸ್ಥೆಗಳು ಉಚಿತ ಸೇವೆ ನೀಡುತ್ತಿವೆ ಎಂದರು.
    ಎಚ್ಚಪ್ಪರ ಎಚ್ಚಜ್ಜ ಮತ್ತು ಎಚ್ಚಪ್ಪರ ಹನುಮಮ್ಮ ದತ್ತಿನಿಧಿ ಆಶಯದಂತೆ ವಚನ ಸಾಹಿತ್ಯಕ್ಕೆ ಅಕ್ಕಮಹಾದೇವಿ ಕೊಡುಗೆ ಕುರಿತು ಸಾಹಿತಿ ಡಾ. ಬಿ.ಎನ್.ತಂಬೂಳಿ ಮಾತನಾಡಿ, ಅಕ್ಕಮಹಾದೇವಿ ಕನ್ನಡದ ಮೊದಲ ವಚನಗಾರ್ತಿ. ಮೃದು, ಮಧುರವಾದ ವಚನಗಳ ಮೂಲಕ ನೈತಿಕ ಮತ್ತು ಆಧ್ಯಾತ್ಮಿಕ ಜೀವನ ನಡೆಸಿದರು. ವಚನ ಸಾಹಿತ್ಯಕ್ಕೆ ಅಕ್ಕಮಹಾದೇವಿ ಕೊಡುಗೆ ಬಹಳ ದೊಡ್ಡದು ಎಂದು ತಿಳಿಸಿದರು.
    ನಾಗಸುಬ್ರಹ್ಮಣ್ಯ ಸೇವಾ ಸಮಿತಿ ಅಧ್ಯಕ್ಷ ರಾಮಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಅರ್ಚಕ ಸಂದೇಶ ಉಪಾಧ್ಯ, ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿ, ಜಿಲ್ಲಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ಶಿವಪ್ಪಗೌಡ, ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಕೆ.ಜಿ.ವೆಂಕಟೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts