More

    ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿ

    ಅಳವಂಡಿ: ಶಾಲಾ ಪೂರ್ವ ಶಿಕ್ಷಣದ ಬಲವರ್ಧನೆಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಪಾಲಕರು ಸದುಪಯೋಗ ಪಡೆದು ಮಕ್ಕಳನ್ನು ಅಂಗನವಾಡಿಗೆ ಕಳಿಸುವ ಮೂಲಕ ಕಲಿಕೆಗೆ ಪ್ರೋತ್ಸಾಹಿಸಿ ಎಂದು ಅಂಗನವಾಡಿ ಮೇಲ್ವಿಚಾರಕಿ ಬಸಮ್ಮ ಹಡಪದ ತಿಳಿಸಿದರು.

    ಇದನ್ನೂ ಓದಿ: ಕನ್ನಡ ಕಲಿಕೆಗೆ ಒತ್ತು: ಶೈಕ್ಷಣಿಕ ವಲಯದಲ್ಲಿ ಇನ್ನಷ್ಟು ಪ್ರಯತ್ನಗಳು ಆಗಬೇಕು

    ಸಮೀಪದ ಬೆಳಗಟ್ಟಿ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿದ್ದ ‘ಪಾಲಕರ ನಡೆ ಅಂಗನವಾಡಿ ಕಡೆ’ ಸಮಾರಂಭದಲ್ಲಿ ಗುರುವಾರ ಮಾತನಾಡಿದರು.

    ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ ಅಗತ್ಯ. ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳೊಂದಿಗೆ ಲವಲವಿಕೆಯಿಂದ ಚಟುವಟಿಕೆಯಲ್ಲಿ ಭಾಗವಹಿಸಿ ಮಕ್ಕಳ ಮನಸ್ಸು ಗೆಲ್ಲಬೇಕು, ಆಗಲೇ ಅವರು ಆಟ ಪಾಠಗಳಲ್ಲಿ ಆಸಕ್ತಿ ತೋರಿಸಬಲ್ಲರು. ಪಾಲಕರು ಅಂಗನವಾಡಿಗೆ ಭೇಟಿ ನೀಡಿ ಮಕ್ಕಳ ಓದಿಗೆ ಬೆಂಬಲಿಸಬೇಕು ಎಂದು ಸಲಹೆ ನೀಡಿದರು.

    ಅಜೀಂ ಪ್ರೇಮ್‌ಜೀ ಫೌಂಡೇಷನ್ ಸಂಚಾಲಕ ದೇವರಾಜ ಕೊಡಬಾಳ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಸಾವಿತ್ರಿ, ಪ್ರಮುಖರಾದ ಮೋದಿನಸಾಬ್ ಆಲೂರು, ಶಿವನಗೌಡ ಪಾಟೀಲ, ಕನಕನಗೌಡ ಪಾಟೀಲ, ಗುಡದಪ್ಪ ಕುರ್ತಕೋಟಿ, ಕೆಎಚ್‌ಪಿಟಿಯ ಸುಷ್ಮಾ ಸಂಗರಡ್ಡಿ, ಶಿಲ್ಪಾ, ಅಂಗನವಾಡಿ ಕಾರ್ಯಕರ್ತೆಯರಾದ ಸರೋಜಾ ಕೊರ್ಲಗಟ್ಟಿ, ರುಕ್ಮಿಣಿ ಕುರ್ತಕೋಟಿ, ಸಹಾಯಕಿಯರಾದ ಶೋಭಾ ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts