More

    ಮಕ್ಕಳ ಫೀಸ್​ ಕಟ್ಟಿದ್ದೀರಾ? ಇಲ್ಲವಾದರೆ ಮಕ್ಕಳಿಗೆ ಆನ್​ಲೈನ್​ ಕ್ಲಾಸ್​ ಮಿಸ್​ ಆಗಬಹುದು…!

    ಮುಂಬೈ: ಕೋವಿಡ್​-19 ಲಾಕ್​ಡೌನ್​ ಹಾಗೂ ಅನ್​ಲಾಕ್​ ಗೊಂದಲಗಳ ನಡುವೆ ಸದ್ಯ ಶಾಲೆ-ಕಾಲೇಜುಗಳ ಆರಂಭ ಅನಿರ್ದಿಷ್ಟಾವಧಿ ಮುಂದಕ್ಕೆ ಹೋಗಿದೆ. ಹೀಗಾಗಿ ಶಾಲೆಗಳು ಶೈಕ್ಷಣಿಕ ವರ್ಷದ ಪಾಠಪ್ರವಚನ ಮುಗಿಸುವ ತರಾತುರಿಗೆ ಬಿದ್ದು, ಆನ್​ಲೈನ್​ ತರಗತಿಗಳನ್ನು ಆರಂಭಿಸಿವೆ. ಕೆಲ ಪಾಲಕರಿಂದ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದರೂ ಅದನ್ನು ಲೆಕ್ಕಿಸದೆ ಆನ್​ಲೈನ್​ ತರಗತಿಗಳು ಮುಂದುವರಿದಿವೆ.

    ಈ ನಡುವೆ ಹೊಸ ಸಮಸ್ಯೆಯೊಂದು ಉದ್ಭವಿಸಿದೆ. ಶಾಲೆಯ ಶುಲ್ಕಗಳನ್ನು ಪಾವತಿಸಿಲ್ಲ ಎಂಬ ಕಾರಣಕ್ಕಾಗಿ ಮಕ್ಕಳಿಗೆ ನೀಡಲಾಗುತ್ತಿದ್ದ ಆನ್​ಲೈನ್​ ತರಗತಿಗಳ ಸೌಲಭ್ಯವನ್ನು ಕಡಿತಗೊಳಿಸಲಾಗುತ್ತಿದೆ. ಮುಂಬೈನ ಕಾಂಡಿವಿಲಿ ಶಾಲೆಯೊಂದು ಇಂಥ ಕ್ರಮ ಕೈಗೊಂಡಿದ್ದು, ಮಕ್ಕಳ ಪಾಲಕರನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಅವರು ಮಹಾರಾಷ್ಟ್ರದ ಶಾಲಾ ಶಿಕ್ಷಣ ಇಲಾಖೆಗೆ ಶಾಲೆಯ ವಿರುದ್ಧ ದೂರು ನೀಡಿದ್ದಾರೆ.

    ಇದನ್ನೂ ಓದಿ: ಕಳ್ಳತನ ಇಲ್ಲವೇ ಭಿಕ್ಷೆ ಬೇಡಿಯಾದ್ರೂ ಲ್ಯಾಪ್​ಟಾಪ್ ​ತಗೋಬೇಕಂತೆ.. ವಿದ್ಯಾರ್ಥಿಗಳಿಗೆ ಪ್ರೊಫೆಸರ್​ ವಾರ್ನಿಂಗ್!

    ತಾವು ತಯಾರಿಸಿಕೊಂಡಿರುವ ವೇಳಾಪಟ್ಟಿಯಂತೆ ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಲೇ ಶಾಲೆಗಳ ಮುಖ್ಯಸ್ಥರು ವಾರ್ಷಿಕ ಶುಲ್ಕ ಪಾವತಿಸುವಂತೆ ಸೂಚಿಸಿ ಮಕ್ಕಳ ಪಾಲಕರಿಗೆ ನೋಟಿಸ್​ ಕಳುಹಿಸಿದ್ದರು. ಆದರೆ, ಕೆಲ ಮಕ್ಕಳ ಪಾಲಕರಿಗೆ ಶುಲ್ಕ ಪಾವತಿಸಲು ಸಾಧ್ಯವಾಗಿರಲಿಲ್ಲ. ಮೇ 8ರಂದು ಆದೇಶ ಹೊರಡಿಸಿದ್ದ ಶಿಕ್ಷಣ ಇಲಾಖೆ ಬಲವಂತವಾಗಿ ಶಾಲಾ ಶುಲ್ಕ ವಸೂಲಿ ಮಾಡದಂತೆ ಮಹಾರಾಷ್ಟ್ರದ ಎಲ್ಲ ಶಾಲೆಗಳ ಮುಖ್ಯಸ್ಥರಿಗೆ ಸೂಚಿಸಿತ್ತು. ಆದರೂ ಕೆಲ ಶಾಲೆಗಳು ಈ ಆದೇಶವನ್ನು ನಿರ್ಲಕ್ಷಿಸಿ, ಶುಲ್ಕ ವಸೂಲಿಗೆ ಮುಂದಾಗಿವೆ. ಅದರಂತೆ ಕಾಂಡಿವಿಲಿಯ ಈ ಶಾಲೆಯ ಮುಖ್ಯಸ್ಥರು ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಹಲವು ವಿದ್ಯಾರ್ಥಿಗಳ ಆನ್​ಲೈನ್​ ತರಗತಿಯ ಸೌಲಭ್ಯವನ್ನು ರದ್ದುಗೊಳಿಸಿದ್ದಾರಂತೆ. ಈ ಹಿನ್ನೆಲೆಯಲ್ಲಿ ಅಂಥ ಮಕ್ಕಳ ಪಾಲಕರು ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

    ಇದೀಗ ಎಚ್ಚೆತ್ತುಕೊಂಡಿರುವ ಶಾಲೆಯ ಆಡಳಿತ ಮಂಡಳಿ, ಸರ್ಕಾರದ ಆದೇಶ ನಮ್ಮ ಗಮನಕ್ಕೆ ಬಂದಿರಲಿಲ್ಲ. ಶುಲ್ಕ ಪಾವತಿಸಿಲ್ಲ ಎಂದು ಮಕ್ಕಳಿಗೆ ಆನ್​ಲೈನ್​ ತರಗತಿಯ ಸೌಲಭ್ಯ ರದ್ದುಗೊಳಿಸುವುದು ಸರಿಯಲ್ಲ. ಆದ್ದರಿಂದ, ತಕ್ಷಣವೇ ಎಲ್ಲ ಮಕ್ಕಳಿಗೂ ಈ ಸೌಲಭ್ಯವನ್ನು ಒದಗಿಸುವಂತೆ ಶಾಲೆಯ ಮುಖ್ಯಸ್ಥರಿಗೆ ಸೂಚಿಸಿರುವುದಾಗಿ ಹೇಳಿದೆ.

    ಮೂವರ ಮೇಲೆ ದಾಳಿ ಮಾಡಿದ ಹುಚ್ಚುನಾಯಿ ವೃದ್ಧೆಯ ಮುಖವನ್ನೇ ಕಚ್ಚಿ ತಿಂದಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts