More

    ನಿಮ್ಮ ಮಕ್ಕಳ ಪ್ರೀ-ವೆಡ್ಡಿಂಗ್ ಫೋಟೋಶೂಟ್​ಗೆ ನಿರ್ಬಂಧ ಹೇರಿ! ಖಡಕ್ ಸೂಚನೆ ನೀಡಿದ ಮಹಿಳಾ ಆಯೋಗ

    ಛತ್ತೀಸ್​ಗಢ: ವಿಚ್ಛೇದನದ ಬಳಿಕ ಮಹಿಳೆಯರಿಗೆ ತಮ್ಮ ಮದುವೆಯಯ ಸಂದರ್ಭದಲ್ಲಿ ತೆಗಿದಿರುವ ಪ್ರೀ-ವೆಡ್ಡಿಂಗ್ ಫೋಟೋ(Pre-wedding shoots)ಗಳು ಸಮಸ್ಯೆ ತಂದೊಡ್ಡಬಹುದು. ಭವಿಷ್ಯದ ಹಿತದೃಷ್ಟಿಯಿಂದ ತಮ್ಮ ಮಕ್ಕಳು ಮದುವೆಗೂ ಮೊದಲು ಫೋಟೋಶೂಟ್ ಮಾಡದಂತೆ ನೋಡಿಕೊಳ್ಳಿ ಎಂದು ಪಾಲಕರನ್ನು ಒತ್ತಾಯಿಸುತ್ತೇನೆ ಎಂದು ಛತ್ತೀಸ್‌ಗಢ ಮಹಿಳಾ ಆಯೋಗ ಅಧ್ಯಕ್ಷೆ ಕಿರಣ್ಮಯಿ ನಾಯಕ್ ಹೇಳಿದ್ದಾರೆ.

    ಮಹಿಳಾ ಆಯೋಗದ ಸಭೆ

    ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಮಹಿಳಾ ಆಯೋಗದ 172ನೇ ಸಾರ್ವಜನಿಕ ಸಭೆ ನಡೆದಿದೆ. ಕಿರಣ್ಮಯಿ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 25 ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಿ ಚರ್ಚಿಸಲಾಗಿದೆ. ಈ ಸಂದರ್ಭ ವಿವಾಹದ ನಂತರ ಉಂಟಾಗುವ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚಿತವಾಗಿದೆ.

    ಇದನ್ನೂ ಓದಿ: ಗೌಡ್ರ ಹುಡುಗನನ್ನೇ ಹುಡುಕಿ ಕೊಡಿ… ಮದ್ವೆಯಾಗ್ತೀನಿ; ಹಸೆಮಣೆ ಏರಲು ತಯಾರಾದ್ರಾ ರಮ್ಯ?

    ದಾಂಪತ್ಯ ಸಮಸ್ಯೆಗಳ ವಿಚಾರಣೆ

    ಮಹಿಳಾ ಆಯೋಗದ ಸಭೆಯಲ್ಲಿ ಅಂತಿಮ ಹಂತದಲ್ಲಿ ಮದುವೆ ಮುರಿದು ಬಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಅರ್ಜಿದಾರರು ಮಹಿಳಾ ಆಯೋಗಕ್ಕೆ ದೂರು ಸಲ್ಲಿದ್ದರು. ವಿಚಾರಣೆಯ ಸಂದರ್ಭದಲ್ಲಿ ವರನ ಕುಟುಂಬಸ್ಥರು ಮದುವೆ ಸಿದ್ಧತೆಗಾಗಿ ಮಾಡಿದ್ದ ಖರ್ಚನ್ನು ಹಿಂತಿರುಗಿಸಲು ಒಪ್ಪಿದ್ದಾರೆ. ಹೀಗಾಗಿ ಪ್ರಕರಣವನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ವಧುವಿನ ಕುಟುಂಬಸ್ಥರು ತಿಳಿಸಿದ್ದಾರೆ. ಅಲ್ಲದೆ ಮದುವೆಗೂ ಮೊದಲು ತೆಗೆಸಿರುವ ಪ್ರೀ-ವೆಡ್ಡಿಂಗ್ ಫೋಟೋಗಳನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾರೆ ಎಂದು ಅರ್ಜಿದಾರರು ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ರಸ್ತೆ ಬದಿ ನಿಲ್ಲಿಸಿದ್ದ ವಾಹನ ಒಮ್ಮಿಂದೊಮ್ಮೆಲೇ ಸ್ಫೋಟ: ಕಾರುಗಳು ಬೆಂಕಿಗಾಹುತಿ

    ಸೈಬರ್ ಕ್ರೈ ಠಾಣೆಗೆ ದೂರು ನೀಡಿ

    ಮುಂದಿನ ದಿನಗಳಲ್ಲಿ ವಧುವಿನ ಅನುಮತಿ ಇಲ್ಲದೆ ಮದುವೆಯ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೆ ಸೈಬರ್ ಠಾಣೆಗೆ ದೂರು ನೀಡಬಹುದು. ಪ್ರಸ್ತುತ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಜನರು ಹೆಚ್ಚು ಪ್ರಭಾವಿತರಾಗಿದ್ದಾರೆ. ಇದು ನಮ್ಮ ಭಾರತೀಯ ಸಂಸ್ಕೃತಿಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಿರಣ್ಮಯಿ ನಾಯಕ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts