More

    ಸ್ಕೂಟರ್​​ನಲ್ಲಿ ತೆರಳುವಾಗ ಸೀಟ್ ಬೆಲ್ಟ್ ಧರಿಸಿಲ್ಲವೆಂದು ಫೈನ್; ಚಲನ್ ನೋಡಿ ಗೊಂದಲಕ್ಕೊಳಗಾದ ಸವಾರ!

    ಬಿಹಾರ: ಸೀಟ್​ ಬೆಲ್ಟ್ ಧರಿಸಿಲ್ಲವೆಂದು ದ್ವಿಚಕ್ರ ಸವಾರರೊಬ್ಬರಿಗೆ ದಂಡ ಪಾವತಿಸಲು ಚಲನ್ ಬಂದಿರುವ ಅಚಾತುರ್ಯದ ಘಟನೆ ಬಿಹಾರದಲ್ಲಿ ನಡೆದಿದೆ. ಕೃಷ್ಣಕುಮಾರ್ ಝಾ ಎಂಬುವವರಿಗೆ ಪೊಲೀಸರು ದಂಡದ ಚಲನ್ ಕಳುಹಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.

    2020ರಲ್ಲಿ ನಿಯಮ ಉಲ್ಲಂಘಟನೆ ಮಾಡಿರುವಾಗಿ ಚಲನ್​ನಲ್ಲಿ ಉಲ್ಲೇಖವಾಗಿದ್ದು, ಈ ಘಟನೆ ಸಮತಿಪುರದಲ್ಲಿ ನಡೆದಿದೆ. ಸ್ಕೂಟರ್ ಸವಾರ ಕೃಷ್ಣಕುಮಾರ್ ಝಾ ಎಂಬುವರಿಗೆ ನಿಯಮ ಉಲ್ಲಂಘಿಸಿದ್ದಕ್ಕೆ 1000 ರೂ. ದಂಡ ಪಾವತಿಸುವಂತೆ ಚಲನ್ ಬಂದಿದೆ.

    ಇದನ್ನೂ ಓದಿ: ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಪ್ರಸ್ತಾಪ | ‘ಕೈ’ ನಾಯಕರಲ್ಲೇ ಗೊಂದಲ; ನಿಷೇಧ ಕೈಬಿಡುವಂತೆ ಹಲವರಿಂದ ಒತ್ತಾಯ

    1000 ರೂ. ದಂಡ

    “ನನ್ನ ಬಳಿ ಸ್ಕೂಟಿ ಇದ್ದು, ಏಪ್ರಿಲ್ 27 ರಂದು ನಾನು ಬನಾರಸ್​ಗೆ ಹೋಗುತ್ತಿದ್ದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ನನ್ನ ಹೆಸರಿನಲ್ಲಿ 1,000 ರೂ. ಮೊತ್ತದ ಚಲನ್ ನೀಡಲಾಗಿದೆ ಎಂದು ಸಂದೇಶ ಬಂತು. ವಿವರಗಳನ್ನು ಪರಿಶೀಲಿಸಿದಾಗ ಅಕ್ಟೋಬರ್ 2020ರಲ್ಲಿ ಸೀಟ್ ಬೆಲ್ಟ್ ಧರಿಸಿಲ್ಲ ಎಂದು ಉಲ್ಲೇಖಿಸಲಾಗಿತ್ತು” ಕೃಷ್ಣಕುಮಾರ್ ತಿಳಿಸಿದ್ದಾರೆ.

    ಅಚ್ಚರಿಯ ಸಂಗತಿಯೆಂದರೆ ದಂಡದ ಮೊತ್ತವನ್ನು ಪಾವತಿಸಲಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿತ್ತು. ನನ್ನ ನೆನಪಿನ ಪ್ರಕಾರ ನಾನು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ. ಪೊಲೀಸರ ಕಣ್ತಪ್ಪಿನಿಂದ ಈ ಅಚಾತುರ್ಯ ಸಂಭವಿಸಿರಬಹುದು ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ವಿಜಯಪುರ | ಸಾವಿಗೆ ಶರಣಾದ ಹದಿಹರೆಯದ ಪ್ರೇಮಿಗಳು!

    ಪೊಲೀಸರಿಂದ ಸ್ಪಷ್ಟನೆ

    ಅಚಾತುರ್ಯದ ಬಗ್ಗೆ ಕೃಷ್ಣಕುಮಾರ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಾಂತ್ರಿಕ ದೋಷದಿಂದ ಈ ರೀತಿ ಸಂಭವಿಸಿರಬಹುದು ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಬಿಹಾರ ಟ್ರಾಫಿಕ್ ಪೊಲೀಸ್ ಅಧಿಕಾರಿ ಬಲ್ಬೀರ್ ದಾಸ್ ತಿಳಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts