More

    VIDEO | ಸಿಎಸ್‌ಕೆ ನೆಟ್ಸ್‌ನಲ್ಲಿ ಭರ್ಜರಿ ಸಿಕ್ಸರ್‌ ಸಿಡಿಸುತ್ತಿದ್ದಾರೆ ಚೇತೇಶ್ವರ ಪೂಜಾರ!

    ಮುಂಬೈ: ಚೇತೇಶ್ವರ ಪೂಜಾರ ತಾಳ್ಮೆಯ ಬ್ಯಾಟಿಂಗ್‌ಗೆ ಹೆಸರುವಾಸಿ. ಇವರನ್ನು ಭಾರತೀಯ ಟೆಸ್ಟ್ ತಂಡದ ಜೂನಿಯರ್ ವಾಲ್ ಎಂದೂ ಹೇಳಲಾಗುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಇವರು ಭಾರತ ತಂಡದ ಆಧಾರಸ್ತಂಭ. ಆದರೆ ಸೀಮಿತ ಓವರ್ ಕ್ರಿಕೆಟ್‌ನಿಂದ ಇವರು ಸದಾ ಕಡೆಗಣನೆಗೆ ಒಳಗಾಗುತ್ತ ಬಂದವರು. ಐಪಿಎಲ್‌ನಲ್ಲೂ ಈ ಹಿಂದೆ ಆರ್‌ಸಿಬಿ, ಕೆಕೆಕೆಆರ್, ಪಂಜಾಬ್ ತಂಡಗಳ ಪರ ಆಡಿದ್ದರೂ ಬಳಿಕ ಇತ್ತೀಚೆಗಿನ ವರ್ಷಗಳಲ್ಲಿ ಆಟಗಾರರ ಹರಾಜಿನಲ್ಲಿ ಯಾವುದೇ ತಂಡಕ್ಕೆ ಮಾರಾಟವಾಗದೆ ನಿರಾಸೆ ಅನುಭವಿಸುತ್ತ ಬಂದಿದ್ದರು. ಆದರೆ ಈ ಬಾರಿ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಚೇತೇಶ್ವರ ಪೂಜಾರ ಅವರನ್ನು ಖರೀದಿಸಿ ಅಚ್ಚರಿ ಮೂಡಿಸಿತ್ತು. ಇದೀಗ ಸಿಎಸ್‌ಕೆ ತಂಡದ ನೆಟ್ಸ್‌ನಲ್ಲಿ ಪೂಜಾರ ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಚೆನ್ನೈ ತಂಡದ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸುತ್ತಿದ್ದಾರೆ.

    ಮುಂಬೈನಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ತರಬೇತಿ ಶಿಬಿರವನ್ನು ಪೂಜಾರ ಇತ್ತೀಚೆಗೆ ಸೇರಿಕೊಂಡಿದ್ದು, ಅಭ್ಯಾಸದ ವೇಳೆ ಆಕ್ರಮಣಕಾರಿ ಬ್ಯಾಟಿಂಗ್‌ನತ್ತ ಹೆಚ್ಚಿನ ಗಮನ ಹರಿಸಿದ್ದಾರೆ. ಇದರ ಭಾಗವಾಗಿ ಚೆಂಡನ್ನು ಗಾಳಿಯಲ್ಲಿ ಹೆಚ್ಚಾಗಿ ಬಾರಿಸುತ್ತಿರುವ ಅವರು, ಚೆಂಡನ್ನು ಮೈದಾನದ ಆಚೆಗೆ ಅಟ್ಟುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಟಿ20 ಕ್ರಿಕೆಟ್‌ನ ಆಕ್ರಮಣಕಾರಿ ಬ್ಯಾಟಿಂಗ್‌ಗಾಗಿ ಪೂಜಾರ ತಮ್ಮ ಬ್ಯಾಟಿಂಗ್ ಭಂಗಿಯನ್ನೂ ಬದಲಾಯಿಸಿಕೊಂಡಿರುವುದು ಗಮನಾರ್ಹವಾಗಿದೆ.

    ಇದನ್ನೂ ಓದಿ: ಸಖತ್ ಟ್ರೋಲ್ ಆಗುತ್ತಿದೆ ಪಂಜಾಬ್ ಕಿಂಗ್ಸ್ ತಂಡದ ಹೊಸ ಜೆರ್ಸಿ!

    ಕಳೆದ ಫೆಬ್ರವರಿಯಲ್ಲಿ ನಡೆದ ಹರಾಜಿನಲ್ಲಿ ಪೂಜಾರ 50 ಲಕ್ಷ ರೂಪಾಯಿ ಮೂಲಬೆಲೆಗೆ ಸಿಎಸ್‌ಕೆ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಅವರು 7 ವರ್ಷಗಳ ಬಳಿಕ ಐಪಿಎಲ್ ತಂಡವೊಂದರ ಪರ ಆಡುವ ಅವಕಾಶ ಪಡೆದುಕೊಂಡಿದ್ದಾರೆ. ಭಾರತ ಟೆಸ್ಟ್ ತಂಡಕ್ಕೆ ನೀಡಿರುವ ಕೊಡುಗೆಗಳಿಗಾಗಿ ಪೂಜಾರ ಈ ಗೌರವಕ್ಕೆ ಅರ್ಹರು ಎಂದು ಸಿಎಸ್‌ಕೆ ತಂಡದ ಬೌಲಿಂಗ್ ಕೋಚ್ ಎಲ್. ಬಾಲಾಜಿ ಇತ್ತೀಚೆಗೆ ಹೇಳಿದ್ದರು.

    ‘ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಧೋನಿ ಅವರೇ ಭಾರತ ತಂಡದ ನಾಯಕರಾಗಿದ್ದರು. ಇದೀಗ ಮತ್ತೊಮ್ಮೆ ಅವರದೇ ಸಾರಥ್ಯದ ತಂಡದಲ್ಲಿ ಆಡಲಿರುವುದು ಭಾವನಾತ್ಮಕ ಕ್ಷಣವಾಗಿದೆ. ಟಿ20 ಕ್ರಿಕೆಟಿಗನಾಗಿ ನಾನು ಎಲ್ಲಿ ನಿಲ್ಲುತ್ತೇನೆ ಎಂಬುದು ಗೊತ್ತಿಲ್ಲ. ಆದರೆ ಈಗ ನನಗೂ ಐಪಿಎಲ್‌ನಲ್ಲಿ ಯಾವ ರೀತಿ ಆಡಬೇಕೆಂಬುದು ಅರ್ಥವಾಗಿದೆ. ಕ್ರಿಕೆಟ್ ಆಡುವುದನ್ನು ನಾನು ಇಷ್ಟಪಡುತ್ತೇನೆ. ಅದು ಯಾವುದೇ ಮಾದರಿಯ ಕ್ರಿಕೆಟ್ ಇರಲಿ. ಕ್ರಿಕೆಟಿಗನಾಗಿ ಬೆಳೆಯಲು ನನಗೆ ಐಪಿಎಲ್‌ನ ಈ ಅವಕಾಶ ಸಹಾಯಕವಾಗಲಿದೆ’ ಎಂದು ಭಾರತ ಪರ 85 ಟೆಸ್ಟ್, 5 ಏಕದಿನ ಪಂದ್ಯವಾಡಿರುವ 33 ವರ್ಷದ ಪೂಜಾರ ಹೇಳಿದ್ದಾರೆ.

    ಐಪಿಎಲ್ 14ನೇ ಆವೃತ್ತಿಗೆ ಹೊಸ ನಿಯಮಗಳನ್ನು ಪ್ರಕಟಿಸಿದ ಬಿಸಿಸಿಐ

    ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನೂತನ ಸಾರಥಿ ನೇಮಕ

    ಕ್ರೀಡೆಯಲ್ಲೂ ಮಿಂಚುತ್ತಿದ್ದಾರೆ ಈ ಗ್ಲಾಮರ್ ನಟಿ, ಸರ್ಫಿಂಗ್‌ನಲ್ಲಿ ಚಿನ್ನದ ಪದಕ ಸಾಧನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts