More

    ಕೇಂದ್ರ ಸಚಿವೆಯ ನಕಲಿ ಪತ್ರ ಕಳುಹಿಸಿ 80 ಲಕ್ಷ ರೂ. ದೋಖಾ!

    ಬೆಂಗಳೂರು: ಹೃದಯ ತಜ್ಞ ಅಂತ ಮಹಿಳೆ ಮುಂದೆ ಪೋಸ್ ಕೊಟ್ಟಿದ್ದ ನಕಲಿ ವೈದ್ಯನೊಬ್ಬ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ನಕಲಿ ಪತ್ರ ಕಳುಹಿಸಿ ಬರೋಬ್ಬರಿ 80 ಲಕ್ಷ ರೂ. ಲಪಟಾಯಿಸಿದ್ದಾನೆ.

    ಬನಶಂಕರಿ ನಿವಾಸಿ ಸಂಧ್ಯಾ ಗಾಯತ್ರಿ (50) ಕೊಟ್ಟ ದೂರಿನ ಆಧಾರದ ಮೇಲೆ ವಿದೇಶಿ ಪ್ರಜೆ ಡೇವಿಸ್ ಹಾರ್ಮನ್‌ ಎಂಬಾತನ ವಿರುದ್ಧ ಬನಶಂಕರಿ ಠಾಣೆ ಪೊಲೀಸರು ಎಫ್ಐಅರ್ ದಾಖಲಸಿಕೊಂಡಿದ್ದಾರೆ.

    ಕಳೆದ ಜ.23ರಂದು ಸಂಧ್ಯಾ ಅವರಿಗೆ ಇನ್‌ಸ್ಟಾ ಗ್ರಾಂನಲ್ಲಿ ಡೇವಿಸ್ ಫಾಲೋ ರಿಕ್ವೆಸ್ಟ್ ಕಳುಹಿಸಿದ್ದ. ಸಂಧ್ಯಾ ರಿಕ್ವೆಸ್ಟ್ ಸ್ವೀಕರಿಸಿದ ಕೂಡಲೇ ಆಪ್ತವಾಗಿ ಮಾತನಾಡಲು ಅರಂಭಿಸಿದ್ದು, ಕ್ರಮೇಣ ಇಬ್ಬರೂ ಸ್ನೇಹಿತರಾಗಿದ್ದರು. ಡೇವಿಸ್ ತನ್ನನ್ನು ಹೃದಯ ತಜ್ಞನೆಂದು ಪರಿಚಯಿಸಿಕೊಂಡಿದ್ದ, ಇತ್ತ ಸಂಧ್ಯಾ ಅವರೂ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಡೇವಿಸ್ ಜತೆ ಆಗಾಗ ಅಂತಾರ್ಜಾಲ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಚರ್ಚಿಸುತ್ತಿದ್ದರು. ಇನ್‌ಸ್ಟಾಗ್ರಾಂನಲ್ಲಿ ಮಹಿಳೆಯ ವಾಟ್ಸ್‌ಆಪ್ ನಂಬರ್ ಪಡೆದ ಡೇವಿಸ್, ಆಕೆಗೆ ಸಲಹೆ ನೀಡುವಂತೆ ನಾಟಕವಾಡಿದ್ದ. ಫೆ.6ರಂದು ಇನ್‌ಸ್ಟಾಗ್ರಾಂನಲ್ಲಿ ಸಂದೇಶವೊಂದನ್ನು ಕಳುಹಿಸಿದ ಡೇವಿಸ್ ‘ನಿಮಗೆ ಉಡುಗೊರೆಯೊಂದನ್ನು ಕಳುಹಿಸಿದ್ದು, ಅದರಲ್ಲಿ 35 ಸಾವಿರ ರೂ. ಪೌಂಡ್ಸ್ ಬೆಲೆ ಬಾಳುವ ವಿದೇಶಿ ಕರೆನ್ಸಿ, ಒಡವೆಗಳಿದ್ದು, ಕಸ್ಟಮ್ಸ್ ಶುಲ್ಕ ಪಾವತಿಸಿ ಅದನ್ನು ಪಡೆದುಕೊಳ್ಳಿ’ ಎಂದು ತಿಳಿಸಿದ್ದ.

    ಇದಾದ ಕೆಲ ಸಮಯದ ಬಳಿಕ ಅಪರಿಚಿತ ಮಹಿಳೆಯೊಬ್ಬರು ಸಂಧ್ಯಾಗೆ ಕರೆ ಮಾಡಿ ತನ್ನನ್ನು ಕಸ್ಟಮ್ಸ್ ಕೊರಿಯರ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದರು. ಶೀಘ್ರವೇ ಕಸ್ಟಮ್ಸ್ ಶುಲ್ಕ ಪಾವತಿಸಿ ನಿಮಗೆ ವಿದೇಶದಿಂದ ಬಂದಿರುವ ಐಶಾರಾಮಿ ಉಡುಗೊರೆಯನ್ನು ಸ್ವೀಕರಿಸುವಂತೆ ಒತ್ತಡ ಹೇರಿದ್ದಳು.

    ಕೇಂದ್ರ ಸಚಿವೆ ಹೆಸರಲ್ಲಿ ನಕಲಿ ಪತ್ರ:
    ಸಂಧ್ಯಾ ಅವರಿಗೆ ಈಕೆಯ ಮೇಲೆ ಅನುಮಾನ ಬಂದು ಹಣ ಕಳುಹಿಸಿರಲಿಲ್ಲ. ಎರಡು ದಿನದ ನಂತರ ಮತ್ತೆ ಕಸ್ಟಮ್ಸ್ ಎಂದು ಹೇಳಿ ಕರೆ ಮಾಡಿದ ಯುವತಿ, ನೀವು ತುಂಬಾ ದಿನವಾದರೂ ಉಡುಗೊರೆ ಪಾರ್ಸೆಲ್ ಸ್ವೀಕರಿಸಿಲ್ಲ. ವಿತ್ತ ಸಚಿವಾಲಯದಿಂದ ನಿಮ್ಮ ಹೆಸರಿಗೆ ನೋಟಿಸ್ ಬಂದಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ತಯಾರಿಸಿದ ನಕಲಿ ನೋಟಿಸ್ ಪತ್ರದ ಸ್ಟ್ರೀನ್‌ಶಾಟ್‌ವೊಂದನ್ನು ಸಂಧ್ಯಾ ಅವರ ವಾಟ್ಸ್‌ಆಪ್‌ಗೆ ಕಳುಹಿಸಿದ್ದಳು.

    ಈ ಪತ್ರ ನೋಡಿದ ಸಂಧ್ಯಾ ನೈಜವಾಗಿ ತನಗೆ ಉಡುಗೊರೆ ಬಂದಿರಬಹುದು ಎಂದು ನಂಬಿದ್ದರು. ಆರೋಪಿಗಳ ಸೂಚನೆಯಂತೆ ಫೆ.9 ರಿಂದ ಏ.19ರ ವರೆಗೆ ಹಂತ-ಹಂತವಾಗಿ ಅವರು ಸೂಚಿಸಿದ ಬ್ಯಾಂಕ್ ಖಾತೆಗೆ ಒಟ್ಟು 80 ಲಕ್ಷ ರೂ. ವರ್ಗಾವಣೆ ಮಾಡಿದ್ದರು. 80 ಲಕ್ಷ ರೂ. ಜಮೆಯಾಗುತ್ತಿದ್ದಂತೆ ಡೇವಿಸ್ ಸಂಧ್ಯಾ ಸಂಪರ್ಕಕ್ಕೆ ಸಿಗಲಿಲ್ಲ. ಇದಾದ ಬಳಿಕ ತಿಂಗಳು ಕಳೆದರೂ ಸಂಧ್ಯಾ ಅವರಿಗೆ ಯಾವುದೇ ಉಡುಗೊರೆ ಕಳುಹಿಸದೇ, ಹಣವನ್ನು ಮರಳಿಸದೇ ಇದ್ದಾಗ ತಾನು ಮೋಸ ಹೋದ ಸಂಗತಿ ಬೆಳಕಿಗೆ ಬಂದಿತ್ತು.

    ಕಾನ್​ಸ್ಟೇಬಲ್ ಪರೀಕ್ಷೆ ಬರೆದು ಮೋಸ ಮಾಡಿದ್ದ ಐವರು ಪೇದೆಗಳು ವಜಾ; 61 ಮಂದಿ ಅಂದರ್

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಗಂಡನನ್ನು ಕೊಂದು ಆತನ ಮರ್ಮಾಂಗ ಫ್ರೈ ಮಾಡಿದ ಹೆಂಡತಿ! ಮಹಿಳೆಯ ಹುಚ್ಚಾಟ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts