More

    ರೈತರಿಂದ ಸೆಗಣಿ ಖರೀದಿಗೆ ಮುಂದಾಗಿದೆ ಸರ್ಕಾರ

    ಛತ್ತೀಸಗಢ: ಛತ್ತೀಸಗಢ ಸರ್ಕಾರವು ಜೂನ್‌ 25ರಂದು ಗೋಧನ್‌ ನ್ಯಾಯ ಯೋಜನೆ ಎನ್ನುವ ಯೋಜನೆಯನ್ನು ಆರಂಭಿಸಿದೆ. ಸಾವಯವ ವಿಧಾನದಲ್ಲಿ ಕೃಷಿ ಬೆಳೆಯುವುದನ್ನು ಉತ್ತೇಜಿಸುವ ಸಲುವಾಗಿ ಇಂಥದ್ದೊಂದು ಯೋಜನೆಯನ್ನು ಸರ್ಕಾರ ಆರಂಭಿಸಿದೆ.

    ಈ ಯೋಜನೆಯ ಭಾಗವಾಗಿ ಇದೀಗ ಕೃಷಿಕರಿಂದ ರಾಜ್ಯ ಸರ್ಕಾರ ಹಸುವಿನ ಸೆಗಣಿ ಖರೀದಿಗೆ ಮುಂದಾಗಿದೆ. ಪ್ರತಿ ಕಿಲೋಗ್ರಾಂಗೆ 1.50 ರೂಪಾಯಿಯಂತ ಸೆಗಣಿ ಖರೀದಿಸಲು ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಎಲ್ಲೆಲ್ಲೂ ಕರೊನಾ! 239 ವಿಜ್ಞಾನಿಗಳಿಂದ ಬಂದಿದೆ ಆತಂಕದ ವರದಿ…

    ಕೃಷಿ ಸಚಿವ ರವೀಂದ್ರ ಚೌಬೆ ನೇತೃತ್ವದ ಸಚಿವಸಂಪುಟದ ಉಪಸಮಿತಿಯು ಕಳೆದ ಶನಿವಾರ ಸೆಗಣಿ ಖರೀದಿಸಲು ಶಿಫಾರಸು ಮಾಡಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಛತ್ತೀಗಢದ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಅವರು ಜೂನ್25ರಂದು ಗೋಧನ್‌ ನ್ಯಾಯ ಯೋಜನೆ ಆರಂಭಿಸಿದ್ದರು. ದೊಡ್ಡ ಪ್ರಮಾಣದಲ್ಲಿ ಎರೆಹುಳುಗೊಬ್ಬರ ತಯಾರಿಸುವ ನಿಟ್ಟಿನಲ್ಲಿ ಇದನ್ನು ಬಳಸಿಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.

    ಚಟುವಟಿಕೆಗಳು. ಜಾನುವಾರು ಸಾಕಣೆಯನ್ನು ಉತ್ತೇಜಿಸುವುದು, ಜಾನುವಾರುಗಳ ಸುರಕ್ಷತೆಯನ್ನು ಖಾತರಿಪಡಿಸುವುದು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ರೈತರಿಂದ ನೇರವಾಗಿ ಸೆಗಣಿ ಸಂಗ್ರಹ ಮಾತ್ರವಲ್ಲದೇ ಸ್ವಸಹಾಯ ಗುಂಪುಗಳ ಮಹಿಳೆಯರು ಮನೆ ಮನೆಗೆ ತೆರಳಿ ಸಗಣಿ ಸಂಗ್ರಹಿಸುವುದಕ್ಕೂ ಇಲ್ಲಿ ಅನುಮತಿ ನೀಡಲಾಗಿದೆ. (ಏಜೆನ್ಸೀಸ್‌)

    ‘ಕರೊನಾ ನೆಗೆಟಿವ್‌ ಪ್ರಮಾಣಪತ್ರ ಬೇಕೇ ಇಲ್ಲಿ ಬನ್ನಿ’ ಎಂದಿದ್ದ ಆಸ್ಪತ್ರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts