More

    ಅಡಕೆ ಸಿಪ್ಪೆಯಿಂದ ಗೊಬ್ಬರ ತಯಾರಿಸಿ

    ಚಿಕ್ಕಮಗಳೂರು: ಅಡಕೆ ಸಿಪ್ಪೆ ವ್ಯರ್ಥ ಮಾಡುವ ಬದಲು ಅಡಕೆ ಬೆಳೆಗೆ ಸೂಕ್ತವಾದ ಅಧಿಕ ಪೊಟ್ಯಾಷ್ ಹೊಂದಿರುವ ಸಾವಯವ ಗೊಬ್ಬರ ತಯಾರಿಸಿಕೊಳ್ಳಬಹುದು ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ಎಂ.ವೈ.ಉಲ್ಲಾಸ್ ತಿಳಿಸಿದರು.

    ಮೂಗ್ತಿಹಳ್ಳಿ ಪ್ರಗತಿಪರ ಕೃಷಿಕ ಚಂದ್ರಶೇಖರ್ ತೋಟದಲ್ಲಿ ಅಡಕೆ ಸಿಪ್ಪೆಯಿಂದ ಸಾವಯವ ಗೊಬ್ಬರ ತಯಾರಿಸುವ ಪ್ರಾತ್ಯಕ್ಷಿಕೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ 63,587 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತದೆ. ಅಡಕೆ ಸಿಪ್ಪೆ ವ್ಯರ್ಥ ಮಾಡುವ ಬದಲು ರಸಗೊಬ್ಬರ ತಯಾರಿಸಿಕೊಂಡರೆ ತೋಟವನ್ನು ಇನ್ನಷ್ಟು ಫಲವತ್ತತೆ ಮಾಡಿಕೊಳ್ಳುವ ಜತೆಗೆ ಹೆಚ್ಚು ಇಳುವರಿ ಪಡೆಯಲು ಸಾಧ್ಯವಿದೆ ಎಂದು ಹೇಳಿದರು.
    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೈತ ಮೂಗ್ತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಅಡಕೆ ಸಿಪ್ಪೆ ತ್ಯಾಜ್ಯವಲ್ಲ. ಅದೊಂದು ಸಾವಯವ ಪದಾರ್ಥ. ಅಡಕೆ ಸಿಪ್ಪೆಯಲ್ಲಿಯೇ ಅಡಕೆ ಬೆಳೆಗೆ ಬೇಕಾದ ಪೌಷ್ಟಿಕಾಂಶವಿದೆ. ಅಡಕೆ ಸಿಪ್ಪೆ ಗೊಬ್ಬರ ಬಳಸುವುದರಿಂದ ಮಣ್ಣಿನಲ್ಲಿ ನೀರು ಹಾಗೂ ಪೋಷಕಾಂಶ ಹಿಡಿದಿಡುವ ಶಕ್ತಿಯೂ ಹೆಚ್ಚಾಗುತ್ತದೆ. ಇದರಿಂದ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಹೆಚ್ಚಿ ಗಿಡಗಳಿಗೆ ಸುಲಭವಾಗಿ ಪೋಷಕಾಂಶಗಳು ದೊರೆಯುತ್ತವೆ ಎಂದು ತಿಳಿಸಿದರು.
    ಪ್ರಾತ್ಯಕ್ಷಿಕೆಯಲ್ಲಿ ರೈತರಾದ ಸೋಮಣ್ಣ, ಭಾನುಪ್ರಕಾಶ್, ಶಾಂತಪ್ಪ, ಹಾಲಪ್ಪ ಸೇರಿದಂತೆ 25ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts