More

    ಖಾಜಿ ಸಾಹೇಬ್ ಕುರಾನ್ ಪಠಣ ಮಾಡಿಲ್ಲ; ಚನ್ನಕೇಶವ ದೇವಾಲಯ ವ್ಯವಸ್ಥಾಪನಾ ಸಮಿತಿ ಸ್ಪಷ್ಟನೆ

    ಹಾಸನ: ವಿಶ್ವಪ್ರಸಿದ್ದ ಬೇಲೂರು ಚೆನ್ನಕೇಶವ ದೇವಾಲಯ ರಥೋತ್ಸವ ವೇಳೆ ಥೇರಿನ ಮುಂದೆ ಕುರಾನ್ ಪಠಣ ವಿವಾದಕ್ಕೆ ಅಂತಿಮ ತೆರೆ ಬಿದ್ದಿದ್ದು, ರಥದ ಮುಂದೆ ಕುರಾನ್ ಪಠಣಕ್ಕೆ ಅವಕಾಶ ಇಲ್ಲ ಎಂದು ಧಾರ್ಮಿಕ ದತ್ತಿ ಆಯುಕ್ತರ ಕಚೇರಿಯಿಂದ ಆದೇಶ ಹೊರಡಿಸಲಾಗಿತ್ತು.

    ಇಂದು ಬೆಳಗ್ಗೆ ನಡೆಯುವ ಚೆನ್ನಕೇಶವ ರಥೋತ್ಸವದ ವೇಳೆ ಥೇರಿನ ಮುಂದೆ ಕುರಾನ್​ ಪಠಣ ಮಾಡುವಂತಿಲ್ಲ. ಮೇದೂರು ಖಾಜಿಸಾಹೇಬರು ಬಂದು ಗೌರವವನ್ನು ಮಾತ್ರ ಸ್ವೀಕರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಆದೇಶದಂತೆ ಖಾಜಿ‌ಸಾಹೇಬ್ ದೇವಾಲಯದ ಕಟ್ಟೆಯ ಬಾವಿ ಬಳಿ ನಿಂತು ಚೆನ್ನಕೇಶವನಿಗೆ ವಂದಿಸಿ, ಪ್ರಾರ್ಥಿನೆ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ಕಾಣೆಯಾದ ಐಎಎಸ್ ಅಧಿಕಾರಿಯ ನಾಯಿ; ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಿಸಿದ ಪೊಲೀಸರು!

    ಕುರಾನ್ ಪಠಣೆ ಮಾಡಿಲ್ಲ‌ ಎಂದು ‌ಖಾಜಿ‌ಸಾಹೇಬ್ ನಮಗೆ ಬರೆದು ಕೊಟ್ಟು ಹೋಗಿದ್ದಾರೆ. ಹೀಗಾಗಿ ಅವರು ಕುರಾನ್ ಪಠಣ ಮಾಡಿಲ್ಲ. ದೇವಾಲಯ ಕಟ್ಟೆಯ ಬಾವಿ ಬಳಿ ನಿಂತು ಚೆನ್ನಕೇಶವನಿಗೆ ವಂದನೆ ಸಲ್ಲಿಸಿದ್ದಾರೆ ಎಂದು ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣ್ ಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಬಳಿಕ ಖಾಜಿ ಸಾಹೇಬರನ್ನು ಭದ್ರತೆಯಲ್ಲಿ ಪೊಲೀಸರು ವಾಹನ ಹತ್ತಿ ಕಳುಹಿಸಿಕೊಟ್ಟಿದ್ದಾರೆ.

    ಕೆಲ ವರ್ಷಗಳಿಂದ ರಥದ ಮುಂಭಾಗ ಕುರಾನ್ ಪಠಣ ಮಾಡಿದ ನಂತರ ರಥೋತ್ಸವ ನಡೆದುಕೊಂಡು ಬಂದಿತ್ತು. ಹಿಂದುಪರ ಸಂಘಟನೆಗಳು ವಿರೋಧ ಮಾಡಿ ಪ್ರತಿಭಟನೆ ಮಾಡಿದ್ದ ಹಿನ್ನೆಲೆ, ರಾಜ್ಯ ಧಾರ್ಮಿಕ ದತ್ತಿ‌ಇಲಾಖೆ ಆಗಮ ಪಂಡಿತರನ್ನು ಕಳುಹಿಸಿ ಮಾಹಿತಿ ಸಂಗ್ರಹಿಸಿತ್ತು. ಆಗಮ ಪಂಡಿತರು ನೀಡಿದ ಮಾಹಿತಿ ಮೇರೆಗೆ ದೇವಾಲಯ ರಥದ ಮುಂದೆ ಕುರಾನ್ ಪಠಣ ಮಾಡಲು ಅವಕಾಶ ಇಲ್ಲ. ಖಾಜಿ ಸಾಹೇಬರು ಚೆನ್ನಕೇಶವನಿಗೆ ವಂದಿಸಿ ಗೌರವ ಪಡೆಯತಕ್ಕದ್ದು ಎಂದು‌ ಅಂತಿಮವಾಗಿ ಆದೇಶವಾಗಿತ್ತು.

    ಧಾರ್ಮಿಕ ದತ್ತಿ ಆಯುಕ್ತರ ಕಚೇರಿಯಿಂದ ಕುರಾನ್ ಪಠಣಕ್ಕೆ ಅವಕಾಶ ಇಲ್ಲ ಎಂದು ಆದೇಶ ಹೊರಬಿದ್ದ ಹಿನ್ನೆಲೆ, 400ಕ್ಕೂ ಹೆಚ್ಚು ಪೊಲೀಸ್ ಹಾಗೂ ಪ್ಯಾರಮಿಲಿಟರಿ ಸಿಬ್ಬಂದಿಗಳ ಬಂದೋಬಸ್ತ್​​ನಲ್ಲಿ ರಥೋತ್ಸವ ನಡೆದಿದೆ. ಇದನ್ನೂ ಓದಿ: ಬಿಜೆಪಿ ಟಿಕೆಟ್‌ಗಾಗಿ CPI ಹುದ್ದೆಗೆ ರಾಜೀನಾಮೆ; ನಾಗಠಾಣ ಮೀಸಲು ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧ

    ಖಾಜಿ ಸಾಹೇಬ್ ಕುರಾನ್ ಪಠಣ ಮಾಡಿಲ್ಲ; ಚನ್ನಕೇಶವ ದೇವಾಲಯ ವ್ಯವಸ್ಥಾಪನಾ ಸಮಿತಿ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts