More

  ಆನ್‌ಲೈನ್ ಗೇಮಿಂಗ್ ಆ್ಯಪ್‌ನಲ್ಲಿ 49 ರೂ. ಹೂಡಿಕೆ ಮಾಡಿದ ವ್ಯಕ್ತಿ ರಾತ್ರೋರಾತ್ರಿ ಕೋಟಿ ರೂ. ಒಡೆಯನಾದ!

  ಮಧ್ಯಪ್ರದೇಶ: ಐಪಿಎಲ್ ಆರಂಭವಾಗಿದ್ದು, ಕ್ರಿಕೆಟ್ ಪ್ರೀಯರು ಎಂಜಾಯ್ ಮಾಡುತ್ತಿದ್ದಾರೆ. ಜತೆಗೆ ಆನ್​​ಲೈನ್ ಕ್ರಿಕೆಟ್ ಬೆಟ್ಟಿಂಗ್ ಆ್ಯಪ್​ಗಳು ಹೆಚ್ಚು ಸಕ್ರೀಯವಾಗಿದ್ದು, ಯುವಸಮೂಹವನ್ನು ಆಕರ್ಷಿಸುತ್ತಿದೆ. ತಮ್ಮದೇ ತಂಡ ರಚಿಸಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಇದೀಗ ಯುವಕನೊಬ್ಬನ ಅದೃಷ್ಟ ಬದಲಾಗಿದ್ದು, ಕೋಟಿ ರೂಪಾಯಿ ಮೊತ್ತವನ್ನೇ ಗೆದ್ದುಕೊಂಡಿದ್ದಾನೆ.

  ಯುವಕನೊಬ್ಬ ಆನ್​ಲೈನ್​ ಗೇಮಿಂಗ್​ನಲ್ಲಿ 49 ರೂಪಾಯಿ ಹೂಡಿಕೆ ಮಾಡಿ, ಬರೋಬ್ಬರಿ 1.5 ಕೋಟಿ ರೂ. ಗೆದ್ದಿದ್ದಾನೆ. ಗೇಮಿಂಗ್ ಆ್ಯಪ್​ನಲ್ಲಿ ವರ್ಚುವಲ್ ಕ್ರಿಕೆಟ್ ತಂಡವನ್ನು ರಚಿಸುವ ಮೂಲಕ ಕೋಟಿ ರೂಪಾಯಿ ಗೆಲ್ಲಲು ಸಾಧ್ಯವಾಗಿದೆ. 

  ಇದನ್ನೂ ಓದಿ: ಕಾಣೆಯಾದ ಐಎಎಸ್ ಅಧಿಕಾರಿಯ ನಾಯಿ; ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಿಸಿದ ಪೊಲೀಸರು!

  ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಶಹಾಬುದ್ದೀನ್ ಮನ್ಸೂರಿ ಎಂಬ ಚಾಲಕ 1.5 ಕೋಟಿ ರೂಪಾಯಿ ಅನ್​ಲೈನ್ ಗೇಮಿಂಗ್ ಮೂಲಕ ಗೆದ್ದುಕೊಂಡ ಯುವಕ. ಈತ ಚಾಲಕನಾಗಿ ದುಡಿಯುತ್ತಿದ್ದು, ಕಳೆದ ಭಾನುವಾರ ಕೊಲ್ಕತಾ ಮತ್ತು ಪಂಜಾಬ್ ನಡುವಿನ ತಂಡ ರಚಿಸಿ ಆನ್​ಲೈನ್​ನಲ್ಲಿ ಕ್ರಿಕೆಟ್ ಆಡಿದ್ದಾನೆ. ಕಳೆದ ಎರಡು ವರ್ಷಗಳಿಂದ ಆನ್‌ಲೈನ್ ಕ್ರಿಕೆಟ್ ಆಟದಲ್ಲಿ ತಂಡಗಳನ್ನು ರಚಿಸುತ್ತಾ ಅದೃಷ್ಟ ಪರೀಕ್ಷಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ.

  ಸದ್ಯ ಶಹಾಬುದ್ದೀನ್ ತನ್ನ ಆ್ಯಪ್ ವ್ಯಾಲೆಟ್‌ನಿಂದ 20 ಲಕ್ಷ ರೂ. ವಿತ್ ಡ್ರಾ ಮಾಡಿಕೊಂಡಿದ್ದಾನೆ. ವಿಜೇತ ಮೊತ್ತದ 1.5 ಕೋಟಿ ರೂ.ನಲ್ಲಿ ಒಟ್ಟು 6 ಲಕ್ಷ ರೂ. ತೆರಿಗೆ ಕಡಿತವಾಗಿದೆ. ಮಧ್ಯಪ್ರದೇಶದ ಸೆಂಧ್ವಾ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶಹಾಬುದ್ದೀನ್, ಇದೀಗ ಗೆದ್ದ ಹಣದಲ್ಲಿ ಸ್ವಂತ ಮನೆ ಕಟ್ಟುವ ಯೋಜನೆ ಹಾಕಿಕೊಂಡಿದ್ದೇನೆ. ಉಳಿದ ಮೊತ್ತದಲ್ಲಿ ಸ್ವಂತ ಉದ್ಯಮ ಆರಂಭಿಸುವ ಗುರಿ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ. (ಏಜೆನ್ಸೀಸ್) 

  ಇದನ್ನೂ ಓದಿ: ಕೊನೆಗೂ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 13 ಮಕ್ಕಳ ತಂದೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts