More

    ಚೆನ್ನಕೇಶವ ಸ್ವಾಮಿ ರಥದ ಮುಂದೆ ಕುರಾನ್ ಪಠಣಕ್ಕೆ ಅವಕಾಶವಿಲ್ಲ: ಧಾರ್ಮಿಕ ದತ್ತಿ ಆಯುಕ್ತರ ಆದೇಶ

    ಹಾಸನ: ವಿಶ್ವಪ್ರಸಿದ್ದ ಬೇಲೂರು ಚೆನ್ನಕೇಶವ ದೇವಾಲಯ ರಥೋತ್ಸವ ವೇಳೆ ಥೇರಿನ ಮುಂದೆ ಕುರಾನ್ ಪಠಣ ವಿವಾದಕ್ಕೆ ಅಂತಿಮ ತೆರೆ ಬಿದ್ದಿದೆ. ಧಾರ್ಮಿಕ ದತ್ತಿ ಆಯುಕ್ತರ ಕಚೇರಿಯಿಂದ ಆದೇಶ ಹೊರಬಿದ್ದಿದ್ದು, ರಥದ ಮುಂದೆ ಕುರಾನ್ ಪಠಣಕ್ಕೆ ಅವಕಾಶ ಇಲ್ಲ ಎಂದು ಹೇಳಿದೆ.

    ಇಂದು ಬೆಳಗ್ಗೆ 10 ಗಂಟೆಗೆ ಚೆನ್ನಕೇಶವ ರಥೋತ್ಸವ ನಡೆಯಲಿದೆ. ಈ ವೇಳೆ ಥೇರಿನ ಮುಂದೆ ಕುರಾನ್​ ಪಠಣ ಮಾಡುವಂತಿಲ್ಲ. ಮೇದೂರು ಖಾಜಿಸಾಹೇಬರು ಬಂದು ಗೌರವವನ್ನು ಮಾತ್ರ ಸ್ವೀಕರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಇದನ್ನೂ ಓದಿ: ಯಾರು ಹಿತವರು ನಿನಗೆ?; ಹೊಂದಾಣಿಕೆಗೆ ಪ್ರಾಶಸ್ತ್ಯವಿಲ್ಲದ ಬದುಕು ಬದುಕಲ್ಲ

    ಕುರಾನ್ ಪಠಣ ನಂತರವೇ ಚೆನ್ನಕೇಶವ ಥೇರು ಎಳೆಯುವ ಪದ್ದತಿ ಕೆಲ ವರ್ಷಗಳಿಂದ ರೂಢಿಯಲ್ಲಿತ್ತು. ಆದರೆ, ಕೇಶವನಿಗೆ ಬೇಕಿಲ್ಲ ಕುರಾನ್ ಪಠಣ ಅಂತ ಹಿಂದೂ ಪರ ಸಂಘಟನೆಗಳು ಪ್ರತಿಭಟಿಸಿದ್ದರು. ಹೀಗಾಗಿ ಧಾರ್ಮಿಕ ದತ್ತಿ ಆಯುಕ್ತರು ಆಗಮ ಪಂಡಿತರನ್ನು ಕಳಿಸಿ ಪರಿಶೀಲನೆ ಮಾಡಿ ವರದಿ ಪಡೆದಿದ್ದರು.

    ರಥದ ಮುಂದೆ ಕುರಾನ್ ಪಠಣ ಅವಕಾಶ ಇದೆ ಅಂತ ದೇವಾಲಯದ ಕೈಪಿಡಿಯಲ್ಲಿ ಇಲ್ಲ. ಖಾಜಿ ಸಾಹೇಬರು ದೇವಾಲಯಕ್ಕೆ ಬಂದು ದೇವರಿಗೆ ವಂದನೆ ಮಾಡಿ, ದವಸ ಮತ್ತು ಧನ ರೂಪದಲ್ಲಿ ಗೌರವ ಸ್ವೀಕರಿಸುವುದು ಎಂದು ದೇವಾಲಯದ ಕೈಪಿಡಿಯಲ್ಲಿದೆ ಎಂದು ಧಾರ್ಮಿಕ ದತ್ತಿ ಆಯುಕ್ತರು ಆದೇಶ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿಹಿತಿಂಡಿ ಜತೆಗೆ 500 ರೂ. ನೋಟುಗಳನ್ನು ಬಡಿಸಿದ ಅಂಬಾನಿ ಕುಟುಂಬ! ಇಲ್ಲಿದೆ ನೋಟಿನ ಅಸಲಿಯತ್ತು​

    ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ ‘ರಾಜ ಮಾರ್ತಾಂಡ’ ಸದ್ಯದಲ್ಲೇ ಬಿಡುಗಡೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts