More

    2ನೇ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗೆ ಬದಲಾಗಲಿದೆ ಅಂಕಗಳ ಸ್ವರೂಪ

    ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಎರಡನೇ ಆವೃತ್ತಿಗೆ ಅಂಕಗಳ ಪರಿಷ್ಕರಣೆಗೆ ಐಸಿಸಿ ಮುಂದಾಗಿದೆ. ಪರಿಷ್ಕೃತ ಅಂಕಗಳ ಮಾದರಿಯಂತೆ ಜಯ ದಾಖಲಿಸಿದ ತಂಡ 12 ಅಂಕ ಪಡೆದರೆ, ಪಂದ್ಯ ಟೈ ಗೊಂಡರೆ ಉಭಯ ತಂಡಗಳು ತಲಾ 6 ಅಂಕ ಹಾಗೂ ಪಂದ್ಯ ಡ್ರಾಗೊಂಡರೆ ತಲಾ 4 ಪಾಯಿಂಟ್ಸ್ ಹಂಚಿಕೊಳ್ಳಲಿವೆ. ಆಗಸ್ಟ್ 4 ರಿಂದ ಆರಂಭವಾಗಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯಿಂದಲೇ ನೂತನ ಅಂಕಗಳ ಪದ್ಧತಿ ಜಾರಿಗೆ ಬರಲಿದೆ. ಪರಿಷ್ಕೃತ ಅಂಕ ಮಾದರಿಯನ್ನು ಐಸಿಸಿಯ ಹಂಗಾಮಿ ಸಿಇಒ ಜಿಯೋಫ್ ಅಲ್ಲಾರ್ಡೈಸ್ ಪ್ರಕಟಿಸಿದ್ದಾರೆ. ಹಿಂದಿನ ಪದ್ದತಿಯಂತೆ 2 ಅಥವಾ 5 ಪಂದ್ಯಗಳ ಸರಣಿಗಳಿಗೆ ವಿವಿಧ ಮಾದರಿಯಲ್ಲಿ ಪಾಯಿಂಟ್ಸ್ ನೀಡುವ ಬದಲಿಗೆ ಎರಡನೇ ಆವೃತ್ತಿಯಿಂದ ಪ್ರತಿ ಪಂದ್ಯಕ್ಕೂ ಅಂಕ ನೀಡುವುದಾಗಿ ಐಸಿಸಿ ಮಂಡಳಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಟಿ20 ವಿಶ್ವಕಪ್ ಯುಎಇಗೆ ಸ್ಥಳಾಂತರ ಕುರಿತು ಬಿಸಿಸಿಐ ಮುಖ್ಯಸ್ಥ ಗಂಗೂಲಿ ಹೇಳಿದ್ದೇನು?, 

    ಮೊದಲು ಪಂದ್ಯಕ್ಕೆ 120 ಪಾಯಿಂಟ್ಸ್‌ವರೆಗೂ ನಿಗದಿಮಾಡಲಾಗಿತ್ತು. ಇದೀಗ ಪಂದ್ಯಕ್ಕೆ 12 ಪಾಯಿಂಟ್ಸ್ ನಿಗದಿಪಡಿಸಲಾಗಿದೆ. ‘ತಂಡಗಳು ಆಡಿದ ಪಂದ್ಯ, ದಾಖಲಿಸಿದ ಜಯ ಹಾಗೂ ಪಡೆದ ಅಂಕಗಳ ಅಧಾರದ ಮೇಲೆ ರ‌್ಯಾಂಕಿಂಗ್ ನಿರ್ಧರಿಸಲಾಗುತ್ತದೆ’ ಎಂದು ಐಸಿಸಿ ತಿಳಿಸಿದೆ. 9 ಟೆಸ್ಟ್ ತಂಡಗಳು ತವರಿನಲ್ಲಿ 3 ಹಾಗೂ ವಿದೇಶಿ ನೆಲದಲ್ಲಿ 3 ಸರಣಿಗಳು ಸೇರಿದಂತೆ ತಲಾ 6 ಟೆಸ್ಟ್ ಸರಣಿಗಳಲ್ಲಿ ಆಡಲಿವೆ. 2ನೇ ಆವೃತ್ತಿಯ ಡಬ್ಲ್ಯುಟಿಸಿಯಲ್ಲಿ ಇಂಗ್ಲೆಂಡ್ (21) ಅತಿಹೆಚ್ಚು ಪಂದ್ಯಗಳನ್ನಾಡಲಿದೆ. ಇಂಗ್ಲೆಂಡ್ ಬಳಿಕ ಭಾರತ (19),ಆಸ್ಟ್ರೇಲಿಯಾ (18), ದಕ್ಷಿಣ ಆಫ್ರಿಕಾ 15, ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ಕೇವಲ 13 ಪಂದ್ಯಗಳನ್ನಾಡಲಿದೆ. ಉಳಿದಂತೆ, ವೆಸ್ಟ್ ಇಂಡೀಸ್, ಶ್ರೀಲಂಕಾ (ತಲಾ 13) ಹಾಗೂ ಪಾಕಿಸ್ತಾನ 14 ಪಂದ್ಯಗಳನ್ನಾಡಲಿದೆ.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ಗೂ ಮುನ್ನವೇ ಭಾರತದ ಕುಸ್ತಿಪಟುಗೆ ಶಾಕ್.

    * ಕಳೆದ ಆವೃತ್ತಿಯಲ್ಲಿ ಹೀಗಿತ್ತು: ಚೊಚ್ಚಲ ಡಬ್ಲ್ಯುಟಿಸಿಯಲ್ಲಿ ಭಾರತ-ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಸರಣಿಗೆ 120 ಪಾಯಿಂಟ್ಸ್ ನಿಗದಿಪಡಿಸಿ, ಗೆದ್ದ ತಂಡಕ್ಕೆ 60 ಪಾಯಿಂಟ್ಸ್ ನೀಡಲಾಗಿತ್ತು. ಅದೇ ರೀತಿ ಆಸ್ಟ್ರೇಲಿಯಾ-ಭಾರತ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಗೆ 60 ಪಾಯಿಂಟ್ಸ್ ನಿಗದಿಪಡಿಸಿ, ಪ್ರತಿಗೆಲುವಿಗೆ 30 ಪಾಯಿಂಟ್ಸ್ ನೀಡಲಾಗಿತ್ತು.

    ಸಂಭ್ರಮದಲ್ಲಿ ಮುಳುಗಿದ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ತಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts