More

    ರೈಲ್ವೆ ಸಚಿವ ಪಿಯುಷ್​​ ಗೋಯಲ್​​ಗೆ ಮಾತೃವಿಯೋಗ

    ನವದೆಹಲಿ: ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರ ತಾಯಿ, ಬಿಜೆಪಿ ಮುಖಂಡರಾಗಿದ್ದ ಚಂದ್ರಕಾಂತಾ ಗೋಯಲ್ (88) ಶನಿವಾರ ಬೆಳಿಗ್ಗೆ ನಿಧನರಾದರು.
    ತಮ್ಮ ತಾಯಿಯ ನಿಧನದ ಸುದ್ದಿಯನ್ನು ಪಿಯುಷ್ ಗೋಯಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಇಸ್ರೇಲ್​​​: ​ಡಜನ್​ಗಟ್ಟಲೆ ಶಾಲೆಗಳಿಗೆ ಬೀಗ, ಸಾವಿರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕ್ವಾರಂಟೈನ್​​ಗೆ..!

    “ಯಾವಾಗಲೂ ಪ್ರೀತಿಯಿಂದ ನಮಗೆ ಮಾರ್ಗದರ್ಶನ ನೀಡುತ್ತಿದ್ದ ನಮ್ಮ ತಾಯಿ ಇಂದು ಈ ಬೆಳಿಗ್ಗೆ ನಿಧನರಾದರು. ಅವರು ತಮ್ಮ ಇಡೀ ಜೀವನವನ್ನು ಸೇವೆಯಲ್ಲೇ ಕಳೆದು ನಮಗೂ ಮಾದರಿಯಾಗಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಓಂ ಶಾಂತಿ, ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಒಬ್ಬ ಶಿಕ್ಷಕ ಏಕಕಾಲಕ್ಕೆ 25 ಶಾಲೆಗಳಲ್ಲಿ ಬೋಧಿಸಲು ಸಾಧ್ಯವೇ? ಸಾಧ್ಯ ಎನ್ನುತ್ತಿದ್ದಾರೆ ಈ ಶಿಕ್ಷಕಿ…!

    ಮಾಜಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಜಲಸಾರಿಗೆ ಸಚಿವರಾಗಿದ್ದ ವೇದ್​​ಪ್ರಕಾಶ್ ಗೋಯಲ್ ಅವರ ಪತ್ನಿಯಾಗಿದ್ದ ಚಂದ್ರಕಾಂತಾ 3 ಬಾರಿ ಮುಂಬೈನ ಮಾತುಂಗಾ ಕ್ಷೇತ್ರದ ಶಾಸಕಿಯಾಗಿದ್ದರು.

    ಕಿರಣ್ ಮಜುಂದಾರ್ ಶಾ ಮುಡಿಗೆ ಪ್ರತಿಷ್ಠಿತ ಇವೈ ವಿಶ್ವದ ವರ್ಷದ ಉದ್ಯಮಿ ಪ್ರಶಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts