More

    ಚಾಮರಾಜನಗರದಲ್ಲಿ ಆಕ್ಸಿಜನ್​ ಸಿಗದೆ ಕರೊನಾ ರೋಗಿಗಳ ಸಾವು: ಮೈಸೂರು ಡಿಸಿ ವಿರುದ್ಧ ಗಂಭೀರ ಆರೋಪ

    ಚಾಮರಾಜನಗರ: ಆಮ್ಲಜನಕ ಸಿಲಿಂಡರ್​ಗಾಗಿ ಪರದಾಡಿ ಕೊನೆಗೂ ಆಕ್ಸಿಜನ್​ ಸಿಗದೇ ಮೂವರು ಕರೊನಾ ರೋಗಿಗಳು ಮೃತಪಟ್ಟಿರುವ ಘಟನೆ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದು, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.

    ಭಾನುವಾರ ರಾತ್ರಿ 12 ಗಂಟೆ ವೇಳೆಗೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕದ ಎಲ್ಲ ಸಿಲಿಂಡರ್ ಖಾಲಿಯಾಗಿ ರೋಗಿಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗುತ್ತಿದ್ದು, ಕುಟುಂಬದ ಸದಸ್ಯರನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

    ಆಸ್ಪತ್ರೆಯಲ್ಲೇ ಕೆಲವರು ಆಮ್ಲಜನಕಕ್ಕಾಗಿ ಪೇಪರ್ ಮತ್ತು ಬಟ್ಟೆ ಬೀಸುತ್ತಿರುವ ದೃಶ್ಯ ಮನಕಲಕುವಂತಿದೆ. ಇದೇ ವೇಳೆ ಕುಟುಂಬಸ್ಥರು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ದುರಾಡಳಿತಕ್ಕೆ ಹಿಡಿಶಾಪ ಹಾಕಿದರು.

    ಸಾವಿಗೆ ಕಾರಣದ್ರಾ ರೋಹಿಣಿ ಸಿಂಧೂರಿ?
    ಚಾಮರಾಜನಗರಕ್ಕೆ ಆಮ್ಲಜನಕ ಪೂರೈಸಲು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆಕ್ಷೇಪ ವ್ಯಕ್ತಪಡಿಸಿದ್ದು, ತಮ್ಮ ಪ್ರತಿಷ್ಠೆಗಾಗಿ ಕರೊನಾ ರೋಗಿಗಳ ಸಾವಿಗೆ ರೋಹಿಣಿ ಸಿಂಧೂರಿ ಕಾರಣರಾದರು ಎಂಬ ಆರೋಪ ಕೇಳಿಬಂದಿದೆ. ಚಾಮರಾಜನಗರ ಜಿಲ್ಲೆಗೆ ಪ್ರತಿನಿತ್ಯ ಮೈಸೂರಿನ ಸದರನ್ ಗ್ಯಾಸ್ ಏಜೆನ್ಸಿ ಮೂಲಕ ಆಮ್ಲಜನಕ‌ ಪೂರೈಕೆ ಆಗುತ್ತಿತ್ತು. ಚಾಮರಾಜನಗರ ಜಿಲ್ಲಾಸ್ಪತ್ರೆಗೆ 280 ಜಂಬೂ ಸಿಲಿಂಡರ್ ಆಮ್ಲಜನಕ ಅವಶ್ಯಕತೆ ಇದೆ. ಕಳೆದ ಶುಕ್ರವಾರ ನಡೆದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ವಿಡಿಯೋ ಕಾನ್ಫರೆನ್ಸ್​ನಲ್ಲಿ ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಿಗೆ ಮೈಸೂರಿನಿಂದ ಆಮ್ಲಜನಕ ಪೂರೈಸುವ ಜವಾಬ್ದಾರಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ನೀಡಿದ್ದರು. ಆದರೆ, ಮುಖ್ಯ ಕಾರ್ಯದರ್ಶಿಗಳ ಸೂಚನೆಗೂ ಮೈಸೂರು ಜಿಲ್ಲಾಧಿಕಾರಿ ಡೋಂಟ್ ಕೇರ್ ಎಂದಿದ್ದಾರೆನ್ನಲಾಗಿದೆ. ಆಮ್ಲಜನಕ ನೀಡಿದರೆ ಗ್ಯಾಸ್ ಏಜೆನ್ಸಿ ವಿರುದ್ಧ ಕೇಸ್ ಹಾಕುವ ಎಚ್ಚರಿಕೆಯನ್ನು ರೋಹಿಣಿ ಸಿಂಧೂರಿ ನೀಡಿರುವ ಆರೋಪ ಕೇಳಿಬಂದಿದೆ. ಸಿಂಧೂರಿ ಮಾತಿಗೆ ಹೆದರಿ ಆಮ್ಲಜನಕ ನೀಡಲು ಹಿಂದೇಟು ಹಾಕಿದ್ದಾರೆ.

    ಇನ್ನು ಈ ವಿಚಾರ ಸಂಸದ ಪ್ರತಾಪ್​ ಸಿಂಹ ಅವರಿಗೆ ತಿಳಿದು ತಕ್ಷಣ 50 ಜಂಬೂ ಸಿಲಿಂಡರ್ ಆಮ್ಲಜನಕ ಕಳುಹಿಸಿ ಕೊಟ್ಟಿದ್ದಾರೆ. ಆದರೆ, ಒಂದು ರಾತ್ರಿಗೆ 150 ಜಂಬೂ ಸಿಲಿಂಡರ್ ಗಳ ಅವಶ್ಯಕತೆ ಇದೆ. ಕೊರತೆಯಿಂದಾಗಿ ಆಮ್ಲಜನಕವಿಲ್ಲದ ಕರೊನಾ ರೋಗಿಗಳು ನರಳಾಡುತ್ತಿದ್ದಾರೆ. ಮೂವರ ಸಾವು ಕೂಡ ಆಗಿದೆ. ಹೀಗಾಗಿ ಮೈಸೂರು ಜಿಲ್ಲಾಧಿಕಾರಿಗಳ ನಡೆಗೆ ಎಲ್ಲಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. (ದಿಗ್ವಿಜಯ ನ್ಯೂಸ್​)

    ರಸ್ತೆಗಿಳಿದು 100 ಕಾರಣ ಹೇಳಿ ವಾದ ಮಾಡ್ಬೇಡಿ: ನಮ್ಗೂ ಆಯ್ಕೆ ಇದ್ದಿದ್ರೆ ಒಳಗೇ ಇರ್ತಿದ್ವಿ ಅಂದ ಪೊಲೀಸ್ರು ಕೊಟ್ಟ ಆ ಒಂದು ಕಾರಣ ಇಲ್ಲಿದೆ..👇

    ರಾಜ್ಯಕ್ಕೆ ಬರಲಿದೆ 30 ಟನ್ ಆಕ್ಸಿಜನ್: ಚುನಾವಣೆ ಫಲಿತಾಂಶದ ನಡುವೆಯೂ ಸಿಎಂ-ಸಿಎಸ್ ಸಭೆ

    ಬೆಳಗಾವಿಯಲ್ಲಿ ಸತೀಶ್​ ಜಾರಕಿಹೊಳಿಯನ್ನು ಸೋಲಿಸಿದ ರಮೇಶ್ ಜಾರಕಿಹೊಳಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts