More

    ತೀವ್ರ ವಿರೋಧದ ಬೆನ್ನಲ್ಲೇ ಕೋಲುಮಂಡೆ ರ‍್ಯಾಪ್​ ಸಾಂಗ್ ಯೂಟ್ಯೂಬ್​ನಿಂದ ನಾಪತ್ತೆ!

    ಮೈಸೂರು: ಮೊನ್ನೆಯಷ್ಟೇ ಬಿಡುಗಡೆಯಾದ “ಕೋಲುಮಂಡೆ” ರ‍್ಯಾಪ್​ ಸಾಂಗ್ ವಿವಾದ ಕಿಡಿ ಹೊತ್ತಿಸಿದ ಬೆನ್ನಲ್ಲೇ ಯೂಟ್ಯೂಬ್​ನಿಂದ ನಾಪತ್ತೆಯಾಗಿದೆ.

    ಇದನ್ನೂ ಓದಿ: ಮಾದಪ್ಪನ ಗೀತೆಗೆ ಅಪಮಾನ: ಚಂದನ್​ ಶೆಟ್ಟಿ ವಿರುದ್ಧ ಸಿಡಿದೆದ್ದ ಚಾಮರಾಜನಗರ ಯುವಕರು!

    ಇದೇ ತಿಂಗಳ 22 ರಂದು ಯೂಟ್ಯೂಬ್‌ನಲ್ಲಿ ಕೋಲುಮಂಡೆ ಎಂಬ ಸಾಂಗ್​ ಬಿಡುಗಡೆ ಮಾಡಲಾಗಿತ್ತು. ಹಾಡು ವೈರಲ್​ ಆದ ಬೆನ್ನಲ್ಲೇ ಹಾಡಿನ ಬಗ್ಗೆ ಚಾಮರಾಜನಗರದ ಜಾನಪದ ಕಲಾವಿದರು ಕಿಡಿಕಾರಿದ್ದರು.

    ಮಾದಪ್ಪನ ಗೀತೆಯಲ್ಲಿ ಶಿವಶರಣೆ ಸಂಕಮ್ಮನ ಪಾತ್ರದ ಬಗ್ಗೆ ಅಶ್ಲೀಲತೆ ಪ್ರದರ್ಶಿಸಲಾಗಿದೆ ಮತ್ತು ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಹಾಡನ್ನು ಡಿಲೀಟ್​ ಮಾಡಬೇಕೆಂಬ ಒತ್ತಾಯವೂ ಕೇಳಿಬಂತು.

    ಇದನ್ನೂ ಓದಿ: ಕೋಲುಮಂಡೆ ಸಾಂಗ್​ ವಿವಾದ: ಸ್ಪಷ್ಟನೆ ನೀಡಿ, ಕ್ಷಮೆಯಾಚಿಸಿದ ರ‍್ಯಾಪರ್​ ಚಂದನ್​ ಶೆಟ್ಟಿ!

    ಇದರ ಬೆನ್ನಲ್ಲೇ ಚಂದನ್​ ಸಹ ಕ್ಷಮೆಯಾಚಿಸಿ, ಸ್ಪಷ್ಟನೆಯನ್ನು ನೀಡಿದ್ದರು. ಈ ಸಾಂಗ್​ಗೆ ಎಲ್ಲೆಡೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಬರುತ್ತಿದೆ. ಯಾವುದೇ ವ್ಯಕ್ತಿ, ಜಾತಿ ಮತ್ತು ಧರ್ಮಕ್ಕೆ ಅವಮಾನ ಮಾಡಬೇಕೆಂಬ ಉದ್ದೇಶದಿಂದ ಸಾಂಗ್​ ಮಾಡಿಲ್ಲ. ಒಳ್ಳೆಯ ಉದ್ದೇಶದಿಂದ ಸಾಂಗ್​ ಮಾಡಿದ್ದೇವೆ ಎಂದು ಹೇಳಿದ್ದರು.

    ಆದರೂ ಮಾದಪ್ಪನ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಯೂಟ್ಯೂಬ್​ನಿಂದ ಸಾಂಗ್​ ತೆಗೆದುಹಾಕಲಾಗಿದೆ.

    #ವಿಕೃತಿ ಮನಸ್ಸಿನ #ಚಂದನ್ ಶೆಟ್ಟಿಗೆ ಧಿಕ್ಕಾರ…ಮಾದಪ್ಪನ ಬಗ್ಗೆ ಅದರಲ್ಲೂ ಶ್ರೀ ಕ್ಷೇತ್ರದ ಪರಂಪರೆಯ ಹಾಡು "" ಕೋಲು ಮಂಡೆ ಜಂಗಮ ದೇವ """"…

    Posted by Jogi Manju Bjp on Monday, August 24, 2020

    ವರವಾದ ವಿವಾದ: ಕೋಲುಮಂಡೆ ಸಾಂಗ್​ ವಿರುದ್ಧ ಆಕ್ರೋಶದ ಬೆನ್ನಲ್ಲೇ ಚಂದನ್​ ಶೆಟ್ಟಿಗೆ ಬಂಪರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts