More

    ಕರೊನಾ ಸೋಂಕಿತನ ಮನೆ ಮಾತ್ರ ಸೀಲ್‌ಡೌನ್

    ಚಳ್ಳಕೆರೆ: ತಾಲೂಕಿನ ಬೊಮ್ಮಸಂದ್ರದ ಆಟೋ ಚಾಲಕನಿಗೆ ಕರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಸೋಂಕಿತನ ಮನೆಯನ್ನಷ್ಟೇ ಸೀಲ್‌ಡೌನ್ ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ ತಿಳಿಸಿದ್ದಾರೆ.

    ಸೋಂಕಿತನಿಗೆ ಪರಶುರಾಂಪುರದ ಆಸ್ಪತ್ರೆಯಲ್ಲಿ ಚಿಕತ್ಸೆ ನೀಡಲಾಗುತ್ತಿದೆ. ಬೊಮ್ಮಸಂದ್ರದ 310 ಕುಟುಂಬಗಳ ಪ್ರತಿಯೊಬ್ಬರ ಆರೋಗ್ಯ ಮಾಹಿತಿಯನ್ನು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರಿಂದ ಸಂಗ್ರಹಿಸಲಾಗಿದೆ.

    ಸೋಂಕಿತನ ಪ್ರಥಮ ಸಂಪರ್ಕ ಮಾಡಿರುವ 22 ಜನರ ಮೇಲೆ ನಿಗಾ ವಹಿಸಲಾಗಿದೆ. 7 ದಿನಗಳ ಬಳಿಕ 22 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗುವುದು. ಸೋಂಕಿತನ ಕುಟುಂಬಸ್ಥರ ಸೌಕರ್ಯಗಳ ಬಗ್ಗೆ ಸ್ಥಳೀಯ ಪಂಚಾಯಿತಿ ತಾಲೂಕು ಆಡಳಿತ ನಿರ್ದೇಶನದಂತೆ ಕ್ರಮ ಕೈಗೊಳ್ಳಲಿದೆ. ಸೋಂಕಿತನಿಗೆ ಎರಡನೇ ಹಂತದ ಪರೀಕ್ಷೆಯಲ್ಲಿ ಒಂದು ವೇಳೆ ಸೋಂಕು ದೃಢಪಟ್ಟಲ್ಲಿ ಕುಟುಂಬಸ್ಥರನ್ನು ತಪಾಸಣೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.

    ಸ್ಥಳೀಯ ಪಂಚಾಯಿತಿ ಪಿಡಿಒ ಪ್ರತಿಭಾ ಮಾತನಾಡಿ, ಸೀಲ್‌ಡೌನ್ ಮಾಡಿರುವ ಮನೆಯಲ್ಲಿ 9 ಜನ ವಾಸವಾಗಿದ್ದಾರೆ. ಮನೆಗೆ ಶೌಚಗೃಹದ ವ್ಯವಸ್ಥೆ ಕಲ್ಪಿಸಲಾಗಿದೆ. ತರಕಾರಿ ಮತ್ತು ದಿನಸಿ ವಸ್ತುಗಳ ವ್ಯವಸ್ಥೆಗೂ ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts