More

    ಐ ಆಮ್​ ಇನ್​ ಲವ್​ … ಯಾರ ಜತೆಗೆ ಅಂತ ಕೇಳಬೇಡಿ!

    ಕಳೆದ ವರ್ಷದ ‘ಬಿಗ್​ ಬಾಸ್​’ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಾದವರು ನಟಿ ಚೈತ್ರಾ ಕೋಟೂರು. ‘ಬಿಗ್​ ಬಾಸ್​’ ಮನೆಯಲ್ಲಿ ಇರುವಷ್ಟು ದಿನ ಒಂದಿಲ್ಲೊಂದು ವಿವಾದಗಳಿಗೆ ಕಾರಣವಾಗಿದ್ದ ಅವರು, ಕಾರ್ಯಕ್ರಮ ಮುಗಿದ ನಂತರ ಹೆಚ್ಚು ಸುದ್ದಿಯಾಗಲಿಲ್ಲ.

    ಇದೀಗ ಚೈತ್ರಾ ಕೊಟೂರು, ಬಹಳ ದಿನಗಳ ನಂತರ ಒಂದಿಷ್ಟು ಚರ್ಚೆ ಹುಟ್ಟು ಹಾಕಿದ್ದಾರೆ. ಈ ಬಾರಿ ಅವರು ಏನು ಮಾಡಿದ್ದಾರೆ ಎಂಬ ಪ್ರಶ್ನೆ ಬಂತಾ? ಉತ್ತರ ಇಲ್ಲಿದೆ.

    ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆ: ವಿಚಾರಣೆಗೆ ಹಾಜರಾದ ಆದಿತ್ಯ ಚೋಪ್ರಾ

    ಚೈತ್ರಾ ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ಒಂದು ಪೋಸ್ಟ್​ ಹಾಕಿದ್ದಾರೆ. ‘ಐ ಆಮ್​ ಇನ್​ ಲವ್​ … ಯಾರ ಜತೆಗೆ ಅಂತ ಕೇಳಬೇಡಿ. ಐ ಕಾಂಟ್​ ಡಿಸ್​ಕ್ಲೋಸ್​ ಇಟ್​ ನವ್​’ ಎಂದು ಅವರು ಬರೆದುಕೊಂಡಿದ್ದಾರೆ.

    ಯಾವಾಗ ಚೈತ್ರಾ ಇಂಥದ್ದೊಂದು ಮೆಸೇಜ್​ ಬಿಟ್ಟರೋ, ಆಗ ಸಹಜವಾಗಿಯೇ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ. ಚೈತ್ರಾ ಯಾರನ್ನು ಪ್ರೀತಿಸುತ್ತಿದ್ದಾರೆ ಎಂಬ ಹುಳ ಅವರ ಮೆದುಳನ್ನು ತಿಂದು ಹಾಕಿದೆ. ಆದರೆ, ಚೈತ್ರಾ ಅವರೇ, ಹೆಚ್ಚಿನ ವಿಷಯಗಳನ್ನು ಈಗ ಹೇಳಲು ಸಾಧ್ಯವಿಲ್ಲ ಎಂದು ಹೇಳಿರುವುದರಿಂದ, ಬೇರೆ ದಾರಿ ಇಲ್ಲದೆ ಸುಮ್ಮನಾಗಿದ್ದಾರೆ.

    ಇದನ್ನೂ ಓದಿ: ನೀವ್ಯಾಕೆ ‘ಪವಿತ್ರ ರಿಶ್ತಾ 2’ ಮಾಡಬಾರದು? ಏಕ್ತಾಗೆ ಅಂಕಿತಾ ಪ್ರಶ್ನೆ …

    ಹಾಗಾದರೆ, ಅವರು ತಮ್ಮ ಪ್ರೀತಿಯ ವಿಷಯವನ್ನು ಯಾವಾಗ ಬಹಿರಂಗಪಡಿಸುತ್ತಾರೆ? ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕಿದೆ. ಅವರು ಉತ್ತರಿಸುವವರೆಗೂ ಅಭಿಮಾನಿಗಳು ಸುಮ್ಮನೆ ಕಾಯದೇ ವಿಧಿಯಿಲ್ಲ.

    ಹರಿಪ್ರಿಯಾ ಅಭಿನಯದ ‘ಸೂಜಿದಾರ’ ಚಿತ್ರದಲ್ಲಿ ನಟಿಸಿದ್ದ ಚೈತ್ರಾ, ಆ ನಂತರ ‘ಬಿಗ್​ ಬಾಸ್​’ ಮನೆಗೆ ಬಂದರು. ಅಲ್ಲಿಂದ ಬಂದು ಕೆಲವೇ ದಿನಗಳಲ್ಲಿ ಲಾಕ್​ಡೌನ್​ ಘೋಷಣೆಯಾಯಿತು. ಲಾಕ್​ಡೌನ್​ ಮುಗಿದು, ಚಿತ್ರೀಕರಣ ಚಟುವಟಿಕೆಗಳೆಲ್ಲಾ ಪ್ರಾರಂಭವಾದ ಮೇಲೆ, ಅವರ ಮುಂದಿನ ಹೆಜ್ಜೆ ತಿಳಿಯಲಿದೆ.

    PHOTOS: ಗ್ಲಾಮರಸ್ ಅವತಾರದಲ್ಲಿ ‘ರಾಬರ್ಟ್’​ ನಾಯಕಿ ಆಶಾ ಭಟ್ ಫೋಟೋ ಝಲಕ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts