More

    ಹೇರ್ ಕಟ್ ನಡುವೆಯೂ ಮೀಟಿಂಗಿಗೆ ಹಾಜರಾದ ಸಿಇಒ..!

    ನವದೆಹಲಿ: ಕರೋನಾದಿಂದಗಿ ವರ್ಕ್ ಫ್ರಂ ಹೋಮ್ ಸಾಮಾನ್ಯ ಪರಿಕಲ್ಪನೆಯಾಗಿದೆ. ಇದು ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಸುರಕ್ಷತೆಯನ್ನು ಅಪಾಯಕ್ಕೆ ಒಡ್ಡದೇ ತಮ್ಮ ಮನೆಯಿಂದಲೇ ಕೆಲಸ ಮಾಡಬಹುದು. ಈ ಪದ್ಧತಿ ಚಾಲ್ತಿಗೆ ಬಂದಾಗಿನಿಂದ ಊಟ ಮಾಡುವಾಗ ಜೂಮ್ ಮೀಟಿಂಗ್ ಗಳಿಗೆ ಹಾಜರಾಗುವುದು ಅಥವಾ ಪ್ರಯಾಣದ ಸಮಯದಲ್ಲಿ ಕರೆಗಳನ್ನು ತೆಗೆದುಕೊಳ್ಳುವುದು ಒಂದು ಅಭ್ಯಾಸವಾಗಿ ಬಿಟ್ಟಿದೆ.

    ಆದರೆ, ಸಲೂನ್ ನಲ್ಲಿ ಕ್ಷೌರ ಮಾಡುವಾಗ ನೀವು ಮೀಟಿಂಗ್ ಗೆ  ಹಾಜರಾಗುವ ಬಗ್ಗೆ ಯೋಚಿಸಿದ್ದೀರಾ? ಹೌದು, ಮೈಕ್ರೋಸಾಫ್ಟ್ ನ ಮಾಜಿ ಎಕ್ಸಿಕ್ಯೂಟೀವ್ ತನಯ್ ಪ್ರತಾಪ್ ಇದನ್ನೂ ಮಾಡಿದ್ದಾರೆ. ಹೀಗೆ ಮಾಡಿ ಅವರು ಟ್ವೀಟ್ ಕೂಡ ಮಾಡಿದ್ದಾರೆ. ಅದಕ್ಕೆ ಜನರು ಈಗ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

    ಇನ್ ವ್ಯಾಕ್ಟ್ ಮೆಟಾವರ್ಸಿಟಿ ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ಆದ ತನಯ್ ಪ್ರತಾಪ್, ಸಲೂನಲ್ಲಿ ಹೇರ್ಕಟ್ ಮಾಡಿಸುವಾಗ ಫೋನ್ ಹಿಡಿದಿರುವ ಚಿತ್ರವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಕ್ಷೌರಿಕ ಪ್ರತಾಪ್ ರ ತಲೆಕೂದಲನ್ನು ಕತ್ತರಿಸುವ ಕೆಲಸದಲ್ಲಿ ನಿರತನಾಗಿದ್ದರೆ, ಇತ್ತ ಕಡೆ ಕ್ಷೌರಿಕ ಕೂದಲು ಕಟ್ ಮಾಡುವುದರಲ್ಲೇ ಮಗ್ನನಾಗಿದ್ದ.

    ಟ್ವೀಟ್ ನಲ್ಲಿ ತನಯ್ ಪ್ರತಾಪ್ “ಇಂದು ಗರಿಷ್ಠ ಉತ್ಪಾದಕತೆಯನ್ನು ಅನ್ಲಾಕ್ ಮಾಡಲಾಗಿದೆ. ಕ್ಷೌರ ಮಾಡುವಾಗ ಮೀಟಿಂಗ್ ಗೆ ಹಾಜರಾಗಿದ್ದಾಗ ಸಲೂನ್ ನ ಸಿಬ್ಬಂದಿ ಮ್ಯೂಸಿಕ್ ನಿಲ್ಲಿಸಿ ಸಹಕರಿಸಿದ್ದಾರೆ. ಸ್ಟಾರ್ಟ್ ಅಪ್ ಗಳು ಎಲ್ಲರಿಂದ ಆಗುವ ಮಾತಲ್ಲ. ನೀವು ನಿದ್ರೆ ಮಾಡುತ್ತಿರುವಾಗ ಮಾತ್ರ ನಿಮಗೆ ಪರ್ಸನಲ್ ಟೈಮ್ ಇರುವುದು” ಎಂದು ಪ್ರತಾಪ್ ಪೋಸ್ಟ್ ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು.

    ಅವರು ಜನರು ಇದನ್ನು ಮೆಚ್ಚುತ್ತಾರೆ ಎಂದು ನಿರೀಕ್ಷಿಸಿದ್ದರೆ ಅಲ್ಲಿ ಆಗಿದ್ದೇ ಉಲ್ಟಾ. ಜನರು, ಮೀಟಿಂಗ್ ನಲ್ಲಿ ಹಾಜರಾಗಲು ಸಲೂನ್ ಸಿಬ್ಬಂದಿಗೆ ತೊಂದರೆ ಕೊಟ್ಟಿದ್ದಕ್ಕೆ ಈತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ವಿಟರ್ ನಲ್ಲಿ ಬಳಕೆದಾರರೊಬ್ಬರು ಇವರ ಟ್ವೀಟ್ ಗೆ ಪ್ರತಿಕ್ರಿಯಿಸುತ್ತಾ “ಸಲೂನಲ್ಲಿದ್ದ ಪ್ರತಿಯೊಬ್ಬರಿಗೂ ತೊಂದರೆ ನೀಡುವ ಬದಲು ಸಭೆ ಮತ್ತು ಹೇರ್ಕಟ್ ಅನ್ನು ಬೇರೆ ಬೇರೆ ಸಮಯಗಳಲ್ಲಿ ನಿಗದಿಪಡಿಸಬಹುದಿತ್ತು” ಎಂದಿದ್ದಾರೆ.

    ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು ‘ನೀವು ನಿದ್ರೆ ಮಾಡುವುದನ್ನು ಬಿಟ್ಟುಬಿಡಿ ಎಂದು ವ್ಯಂಗ್ಯವಾಗಿ ಹೇಳಿದಾಗ, ಪ್ರತಾಪ್ ‘ನಾನು ನಿದ್ದೆಯನ್ನು ತ್ಯಜಿಸಲು ಬಯಸುತ್ತೇನೆ. ಆದರೆ ಹಾಗೆ ಮಾಡಲು ಯಾವುದೇ ಸುರಕ್ಷಿತ ವಿಧಾನ ಇಲ್ಲ. ನಿದ್ದೆಯೇ ನಾವು ತೊಡಗಿಸಿಕೊಳ್ಳುವ ಅತ್ಯಂತ ನಿಷ್ಪ್ರಯೋಜಕ ಚಟುವಟಿಕೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ. ಆದರೆ ಜನರು ಮಾತ್ರ ಇವರನ್ನು ಟ್ರೋಲ್ ಮಾಡುವುದನ್ನು ನಿಲ್ಲಿಸಿಲ್ಲ. ಪಬ್ಲಿಸಿಟಿಗಾಗಿ ಮಾಡಿದ ಪ್ರಯೋಗ ಇವರಿಗೆ ಉಲ್ಟಾ ಹೊಡೆದಿದೆ ಎಂದೇ ಹೇಳಬಹುದು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts